ಕೊರೊನಾ ಎಂದರೆ ಬಿಜೆಪಿಗೆ ಹಬ್ಬ: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
PC:[email protected]

ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಆರೋಪಿಸಿರುವ ಕಾಂಗ್ರೆಸ್, ಬಿಜೆಪಿ ಆಡಳಿತದಲ್ಲಿ ಮಂತ್ರಿಗಳಲ್ಲದೆ ಅವರ ಆಪ್ತ ಸಹಾಯಕರೂ ಡೀಲಿಂಗ್‌ಗೆ ಇಳಿದಿದ್ದಾರೆ ಎಂದು ಕಿಡಿಕಾರಿದೆ.

ಕೊರೊನಾ ವೈರಸ್ ಹೆಸರಿನಲ್ಲಿ ನೂರಾರು ಕೋಟಿ ಹಣವನ್ನು ಬಿಜೆಪಿ ಸರ್ಕಾರ ನುಂಗಿದೆ ಎಂದು ಆರೋಪಿಸಿದ್ದಾರೆ. “10,000 ಹಾಸಿಗೆಯ ಕೋವಿಡ್ ಸೆಂಟರ್ ಹೆಸರಲ್ಲಿ ನೂರಾರು ಕೋಟಿ ನುಂಗಿದ ಬಿಜೆಪಿ, ಭರ್ಜರಿ ಪ್ರಚಾರ ಪಡೆದು ಕೋವಿಡ್ ರೋಗಿಗಳ ಚಿಕಿತ್ಸೆಗೆ ಅವಕಾಶ ನೀಡದೆ ಬಾಗಿಲು ಮುಚ್ಚಿದ್ದೇಕೆ..? 2ನೇ ಅಲೆಯಲ್ಲಿ ಜನ ಬೆಡ್ ಸಿಗದೆ ನರಳಿದರೂ ಇದರ ಬಗ್ಗೆ ಚಕಾರ ಎತ್ತದಿರುವುದೇಕೆ..? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.

“ಕೊರೊನಾ ಎಂದರೆ ಬಿಜೆಪಿಗೆ ಹಬ್ಬ! ಬೆಡ್ ಬ್ಲಾಕಿಂಗ್ ಹಗರಣ, ವ್ಯಾಕ್ಸಿನ್ ಬ್ಲಾಕಿಂಗ್ ಹಗರಣ ನಡೆಸಿ ಹೆಣದ ಮೇಲೂ ಹಣ ಮಾಡಿದೆ ಬಿಜೆಪಿ ಸರ್ಕಾರ” ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಹಿಂದುಳಿದ ಜಾತಿಗಳನ್ನು ಗುರುತಿಸುವ ಅಧಿಕಾರ ಮರಳಿ ರಾಜ್ಯಕ್ಕೆ: ಸಿದ್ದರಾಮಯ್ಯ ಸ್ವಾಗತ

“ಬಿಜೆಪಿ ಆಡಳಿತದಲ್ಲಿ ಮಂತ್ರಿಗಳಲ್ಲದೆ ಅವರ ಆಪ್ತ ಸಹಾಯಕರೂ ಡೀಲಿಂಗ್‌ಗೆ ಇಳಿದಿದ್ದಾರೆ. ಸಚಿವ ಆರ್‌.ಅಶೋಕ್ ಆಪ್ತ ಸಹಾಯಕರ ಲಂಚದ ಪ್ರಕರಣ ಮುಚ್ಚಿ ಹಾಕಲಾಯ್ತು, ಈಗ, ಸಚಿವ ಶ್ರೀರಾಮುಲು ಆಪ್ತ ಸಹಾಯಕರ ಡೀಲಿಂಗ್ ಪ್ರಕರಣ ಸಮಾಧಿ ಸೇರುತ್ತಿದೆ!” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

“ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಜಿಲೇಟಿನ್ ಸ್ಪೋಟಗೊಂಡು ಹಲವು ಮಂದಿ ಮೃತಪಟ್ಟಿದ್ದರು. ಬಿಜೆಪಿಗರೇ ಅಕ್ರಮ ಕಲ್ಲು ಕ್ವಾರಿಯಲ್ಲಿ ಭಾಗಿಯಾಗಿದ್ದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೊಡ್ಡದಾಗಿ ಮಾತಾಡಿದ್ದರು, ಆದರೆ ತನಿಖೆ ಹಳ್ಳ ಹಿಡಿದು ಪ್ರಕರಣಗಳು ಮುಚ್ಚಿಹೋದವು” ಎಂದು ಆರೋಪಿಸಿದೆ.

“ಮುಖ್ಯಮಂತ್ರಿಗಳ ಗೆಸ್ಟ್‌ಹೌಸ್ ನಲ್ಲಿ ಪ್ರತಿ ದಿನ 100 ಕೋಟಿ ರೂಪಾಯಿ ಡೀಲಿಂಗ್ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರೇ ಆರೋಪ ಮಾಡಿದ್ದಾರೆ. ಈಗ, ಐಟಿ, ಈಡಿ, ಸಿಬಿಐ ಸಂಸ್ಥೆಗಳೆಲ್ಲ ದಾಳಿ ಮಾಡುವುದಿಲ್ಲವೇ..?” ಎಂದು ವ್ಯಂಗ್ಯವಾಗಿ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.


ಇದನ್ನೂ ಓದಿ: ಸಿದ್ದರಾಮಯ್ಯ v/s ಡಿಕೆ ಶಿವಕುಮಾರ್‌‌: ರಾಜ್ಯ ಕಾಂಗ್ರೆಸ್‌‌ನಲ್ಲಿ ಎಲ್ಲವೂ ಸರಿಯಿಲ್ಲ!

LEAVE A REPLY

Please enter your comment!
Please enter your name here