ಭಯೋತ್ಪಾದನೆ ಆರೋಪ ಹೊತ್ತು 12 ವರ್ಷ ಜೈಲಲ್ಲಿ ಕಳೆದ ನಿರಪರಾಧಿ!
ತಮ್ಮ ತಾಯಿಯೊಂದಿಗೆ ಬಶೀರ್‌ ಅಹ್ಮದ್‌ ಬಾಬಾ (PC: Kamran Yousuf Via Newsclick)

ಭಯೋತ್ಪಾದನೆಯ ಆರೋಪ ಹೊತ್ತು 11 ವರ್ಷ ಜೈಲಿನಲ್ಲಿದ್ದ ಕಾಶ್ಮೀರ ಮೂಲದ ಬಶೀರ್ ಅಹ್ಮದ್ ಬಾಬಾ (44) ಅವರನ್ನು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸಂತ್ರಸ್ತ ಬಶೀರ್‌ ಅಹ್ಮದ್‌ ಬಾಬಾ ಅವರು ಗುಜರಾತ್ ಜೈಲಿನಿಂದ ಇದೀಗ ಬಿಡುಗಡೆಯಾಗಿದ್ದಾರೆ. ಅವರ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಎಲ್ಲಾ ಆರೋಪಗಳಲ್ಲಿ ಅವರು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಅವರು ತಮ್ಮ ಮನೆಗೆ ಮರಳಿದ್ದಾರೆ.

ಅವರು ಜೈಲಿನಲ್ಲಿದ್ದ ಈ ಸಮಯದಲ್ಲಿ ಅವರ ಚಿಕ್ಕಪ್ಪ ಮತ್ತು ಅವರ ತಂದೆ ಗುಲಾಮ್ ನಬಿ ಬಾಬಾ ಸೇರಿದಂತೆ ಅವರ ಕುಟುಂಬದ ಅನೇಕ ಸದಸ್ಯರು ಸಾವನ್ನಪ್ಪಿದರು. ಗುತ್ತಿಗೆದಾರರಾಗಿದ್ದ ಅವರ ತಂದೆ 2017 ರಲ್ಲಿ ನಿಧನರಾಗಿದ್ದರು, ಅವರು ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ತಮ್ಮ ತಂದೆ ಮೃತಪಟ್ಟಿರುವುದರ ಬಗ್ಗೆ ಹಲವಾರು ದಿನಗಳು ಕಳೆದರೂ ಬಶೀರ್‌ ಅವರಿಗೆ ಮಾಹಿತಿ ಇರಲಿಲ್ಲ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ಅವರ ತಂದೆ ಸಾವನ್ನಪ್ಪಿದ್ದರ ಮಾಹಿತಿ ತಿಳಿಯಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಾಗಿನ ಅಲೌಕಿಕ ಚಲುವೆಯರು ಎಲ್ಲೇ, ಈ ಲೌಕಿಕದ ಜುಜುಬಿ ಸರಕಾರೀ ಆಸ್ಪತ್ರೆ ಬೆಡ್, ಆಕ್ಸಿಜನ್, ಇಂಜೆಕ್ಷನ್ ಎಲ್ಲೇ?

ಬಶೀರ್ ಅವರು ಶ್ರೀನಗರದ ರೈನವರಿ ಪ್ರದೇಶದ ತಮ್ಮ ನಿವಾಸದ ಹತ್ತಿರ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದರು. ಅವರು ಎನ್‌ಜಿಓ ಒಂದರಲ್ಲಿ ಸಹಾಯಕ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು, ಅವರ ಭಾಗವಾಗಿ ಹಲವಾರು ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು.

ಫೆಬ್ರವರಿ 2010 ರಲ್ಲಿ ಅವರು ಗುಜರಾತ್‌ನಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲು ಕಾಶ್ಮೀರದಿಂದ ಬಂದಿದ್ದರು. ಆದರೆ, ಅವರು ಹಿಂದಿರುಗುವ ಒಂದು ದಿನ ಮೊದಲು ಅವರನ್ನು ಗುಜರಾತ್‌ನ ಆನಂದ್ ಜಿಲ್ಲೆಯ ಸಮರ್ಖಾ ಗ್ರಾಮದ ಬಳಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿತು. ಅಲ್ಲದೆ, “ಬಶೀರ್‌ ಅವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಭಾಗವಾಗಿದ್ದಾರೆ. ಭಯೋತ್ಪಾದಕ ತರಬೇತಿಗಾಗಿ ಯುವಕರ ಜಾಲವನ್ನು ಸ್ಥಾಪಿಸಲು ಯೋಜಿಸುತ್ತಿದ್ದಾರೆ” ಎಂದು ಆರೋಪಿಸಿ, ಪ್ರಕರಣ ದಾಖಲಿಸಿತ್ತು.

ಬಂಧನಕ್ಕೆ ಮುಂಚಿತವಾಗಿ, ಬಶೀರ್ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಡಿಪ್ಲೊಮಾ ಪಡೆದಿದ್ದರು. ಜೊತೆಗೆ ಅವರು ರಾಜಕೀಯ ವಿಜ್ಞಾನ, ಸಾರ್ವಜನಿಕ ಆಡಳಿತ ಮತ್ತು ಬೌದ್ಧಿಕ ಆಸ್ತಿ ಕಾಯ್ದೆಯಲ್ಲಿ ಮೂರು ಸ್ನಾತಕೋತ್ತರ ಪದವಿಗಳನ್ನೂ ಪಡೆದಕೊಂಡಿದ್ದರು.

ಇದನ್ನೂ ಓದಿ: ವಿಭಜನೆಯ ನಂತರ ಮೊಟ್ಟಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಸರ್ವಪಕ್ಷ ಸಭೆ!

“ನಾನು ನನ್ನ ಹೆಚ್ಚಿನ ಸಮಯವನ್ನು ಜೈಲಿನ ಅಧ್ಯಯನದಲ್ಲಿ ಕಳೆದಿದ್ದೇನೆ. ಒಂದು ದಿನ ನಾನು ನಿರಪರಾಧಿ ಎಂದು ಸಾಬೀತಾಗುತ್ತದೆ ಎಂಬ ಭರವಸೆ ನನಗೆ ಇತ್ತು. ನಾನು ಮನೆಗೆ ಹಿಂದಿರುಗಿದ ನಂತರ, ರಾಜ್ಯದಲ್ಲಿ ನಿರುದ್ಯೋಗ, ಆತ್ಮಹತ್ಯೆ ಮತ್ತು ಹಿಂಸಾಚಾರ ಹೆಚ್ಚುತ್ತಿರುವ ವರದಿಗಳನ್ನು ಕೇಳಿದ್ದೇನೆ” ಎಂದು ಬಶೀರ್ ತಿಳಿಸಿರುವುದಾಗಿ ನ್ಯೂಸ್‌ಕ್ಲಿಕ್‌ ವರದಿ ಮಾಡಿದೆ.

ಕಾಶ್ಮೀರ ಸೇರಿದಂತೆ ದೇಶಾದ್ಯಂತ ಕಳೆದ ಮೂರು ದಶಕಗಳಲ್ಲಿ ಜೈಲಿನಲ್ಲಿದ್ದ ನೂರಾರು ಕಾಶ್ಮೀರಿಗಳಲ್ಲಿ ಬಶೀರ್ ಕೂಡ ಒಬ್ಬರು. ಹಲವರ ವಿರುದ್ದ “ಭಯೋತ್ಪಾದನೆ” ಸಂಬಂಧಿತ ಚಟುವಟಿಕೆಗಳಲ್ಲಿ ಯೋಜನೆ ಮತ್ತು ಭಾಗವಹಿಸಿದ್ದಾರೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದಾಗ್ಯೂ, ವರ್ಷಗಳಲ್ಲಿ, ಡಜನ್ಗಟ್ಟಲೆ ಜನರು ನಿರಪರಾಧಿಗಳು ಎಂದು ಸಾಬೀತಾಗಿದೆ ಮತ್ತು ಅವರನ್ನು ಭಾರತೀಯ ನ್ಯಾಯಾಲಯಗಳು ಆರೋಪ ಮುಕ್ತಗೊಳಿಸಿವೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಕಪ್ಪು ಹಿಮ ಬಿದ್ದಾಗ ಬಿಜೆಪಿ ಸೇರುತ್ತೇನೆ: ಗುಲಾಂ ನಬಿ ಆಜಾದ್

ತನ್ನ ಮಗನ ಹಿಂದಿರುಗುವಿಕೆಗಾಗಿ ಪ್ರತಿದಿನ ಪ್ರಾರ್ಥಿಸುತ್ತಿದ್ದೆ ಎಂದು ಬಶೀರ್‌‌ ತಾಯಿ ಮೊಕ್ತಾ ತಿಳಿಸಿದ್ದಾರೆ. “ಆತನ ಬಂಧನದ ನಂತರ ನಮ್ಮ ಕುಟುಂಬವು ಸಾಕಷ್ಟು ತೊಂದರೆ ಅನುಭವಿಸಿತು. ನನ್ನ ಪತಿಗೆ ನಿಧನರಾದರು ಮತ್ತು ಮನೆಯಲ್ಲಿ ಅವಿವಾಹಿತ ಇಬ್ಬರು ಹೆಣ್ಣು ಮಕ್ಕಳಿದ್ದರು. ನಮ್ಮ ಕಷ್ಟ ಅಲ್ಲಾಹನಿಗೆ ಮಾತ್ರ ತಿಳಿದಿದೆ” ಎಂದು ಅವರು ಹೇಳಿದ್ದಾರೆ.

ಬಶೀರ್ ಅವರ ಸಹೋದರಿಯರಿಬ್ಬರೂ ಈಗ ಮದುವೆಯಾಗಿದ್ದಾರೆ. ಅವರ ಸಹೋದರ ನಜೀರ್ ಅಹ್ಮದ್ ಅವರ ಕುಟುಂಬದ ಹೊಣೆ ಹೊತ್ತು, ಕುಟುಂಬ ನಿರ್ವಹಣೆಗಾಗಿ ಸೇಲ್ಸ್‌ಮ್ಯಾನ್‌ ಆಗಿ ಕೆಲಸ ಮಾಡಿದ್ದಾರೆ. ಅವರಿಗೆ ಇನ್ನೂ ಮದುವೆಯಾಗಿಲ್ಲ.

“ನನ್ನ ತಂದೆಯ ಸಾವು ಎಲ್ಲವನ್ನೂ ಬದಲಾಯಿಸಿತು… ನಾನು ನನ್ನ ಅಣ್ಣನಿಗಾಗಿ ಕಾಯುತ್ತಿದ್ದೆ. ಅವರು ನಿರಪರಾಧಿ ಎಂದು ನನಗೆ ತಿಳಿದಿತ್ತು” ಎಂದು ನಜೀರ್ ಹೇಳಿದ್ದಾರೆ. ಅವರ ಹಿರಿಯ ಸಹೋದರ ಮರಳಿದ್ದರಿಂದ, ಈಗ  ಅವರು ಒಟ್ಟಿಗೆ ಮದುವೆಯಾಗಲು ಯೋಜಿಸುತ್ತಿದ್ದಾರೆ.

ಇದನ್ನೂ ಓದಿ: ಜಮ್ಮುಕಾಶ್ಮೀರದ ರಾಜ್ಯತ್ವ ಮರುಸ್ಥಾಪನೆಯೆ ನಮ್ಮ ಪ್ರಮುಖ ಅಜೆಂಡಾ: ಗುಲಾಮ್‌ ನಬಿ ಆಝಾದ್‌

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here