Homeಕರ್ನಾಟಕ‘ಕೆಂಡೋನಿಯನ್ಸ್‌‌’: ನವೆಂಬರ್‌ 11ರಂದು ಬೆಂಗಳೂರಿನ ರಂಗಶಂಕರದಲ್ಲಿ ಮೊದಲ ಬಾರಿಗೆ ಪ್ರದರ್ಶನ

‘ಕೆಂಡೋನಿಯನ್ಸ್‌‌’: ನವೆಂಬರ್‌ 11ರಂದು ಬೆಂಗಳೂರಿನ ರಂಗಶಂಕರದಲ್ಲಿ ಮೊದಲ ಬಾರಿಗೆ ಪ್ರದರ್ಶನ

- Advertisement -
- Advertisement -

ರಾಷ್ಟ್ರೀಯ ನಾಟಕ ಶಾಲೆ (National School of Drama) ಯ ಅಂತರಾಷ್ಟ್ರೀಯ ನಾಟಕೋತ್ಸವಕ್ಕೆ ರಾಜ್ಯದಿಂದ ಆಯ್ಕೆಯಾಗಿರುವ ‘ಕೆಂಡೋನಿಯನ್ಸ್‌‌’ ನಾಟಕವು ಬೆಂಗಳೂರಿನ ಜೆ.ಪಿ. ನಗರದಲ್ಲಿ ಇರುವ ರಂಗಶಂಕರದಲ್ಲಿ ಮೊದಲ ಬಾರಿಗೆ ನವೆಂಬರ್‌ 11ರ ಶುಕ್ರವಾರ ಸಂಜೆ 07:30 ಕ್ಕೆ ಪ್ರದರ್ಶನಗೊಳ್ಳಲಿದೆ.

ಮಂಗಳೂರಿನ ಅಸ್ತಿತ್ವ ತಂಡವೂ ನಾಟಕದಲ್ಲಿ ಅಭಿನಯಿಸುತ್ತಿದ್ದು, META ಅತ್ಯತ್ತಮ ನಿರ್ದೇಶಕ ಪ್ರಶಸ್ತಿ ವಿಜೇತ ‘ಅರುಣ್ ಲಾಲ್‌’ ನಿರ್ದೇಶಿಸಿದ್ದಾರೆ. ಕಥೆಯನ್ನು ಎಂ.ಪಿ. ರಾಜೇಶ್ ರಚಿಸಿದ್ದು, ಕ್ರಿಸ್ಟಿ ನಿನಾಸಂ ನಿರ್ವಹಣೆ ಮಾಡುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕ್ರಿಸ್ಟಿ ನಿನಾಸಂ, “ಎಲ್ಲಾ ಭಾಷೆಯ ರಂಗಭೂಮಿಗೂ ಅದರದ್ದೇ ಆದ ಒಂದೊಂದು ಭಾಷೆ ಇರುತ್ತದೆ. ಆದರೆ ಈ ನಾಟಕ ಕನ್ನಡ ರಂಗಭೂಮಿಯ ಭಾಷೆಯನ್ನು ಬಿಟ್ಟು ಕಟ್ಟಿದ ನಾಟಕವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಹೆಡ್‌ಬುಷ್‌‌’ ವೀರಗಾಸೆ ವಿವಾದ: ವೈರಲ್ ಆಗುತ್ತಿವೆ ಹಳೆಯ ಸಿನಿಮಾ ದೃಶ್ಯಗಳು

“ನಿರ್ದೇಶಕರು ಕೇರಳದವರಾಗಿರುವುದು ಕೂಡಾ ನಾಟಕದ ವಿಶಿಷ್ಠತೆಗೆ ಕಾರಣ ಇರಬಹುದು. ಹಾಗಾಗಿಯೆ ಈ ನಾಟಕ ಕನ್ನಡದ ಇತರ ನಾಟಕಕ್ಕಿಂತ ವಿಭಿನ್ನವಾಗಿ ನಿಲ್ಲುತ್ತದೆ. ನಾಟಕದಲ್ಲಿ ವಿಶಿಷ್ಠವಾದ ಜಾನರ್‌ ಅನ್ನು ಅಳವಡಿಸಿಕೊಂಡಿದ್ದು, ಆದ್ದರಿಂದ ಪ್ರಯೋಗವನ್ನು ಎಲ್ಲರೂ ನೋಡಬೇಕಿದೆ” ಎಂದು ತಿಳಿಸಿದರು.

‘ಕೆಂಡೋನಿನ್ಸ್‌‌‌‌’ ಪ್ರಶಸ್ತಿ ವಿಜೇತ ಕನ್ನಡ ನಾಟಕವಾಗಿದ್ದು, ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸುವ ಈ ವರ್ಷದ ಅಂತರಾಷ್ಟ್ರೀಯ ನಾಟಕೋತ್ಸವ ‘ಭಾರಂಗಂ-2022’ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದೆ.

ಬುಕ್‌ಮೈ ಶೋದಲ್ಲಿ ಟಿಕೇಟುಗಳನ್ನು ಕಾದಿರಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್‌ಗೆ ‘ನೋಬೆಲ್ ಸಾಹಿತ್ಯ ಪ್ರಶಸ್ತಿ-2022’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...