Homeಮುಖಪುಟಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್‌ಗೆ ‘ನೋಬೆಲ್ ಸಾಹಿತ್ಯ ಪ್ರಶಸ್ತಿ-2022’

ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್‌ಗೆ ‘ನೋಬೆಲ್ ಸಾಹಿತ್ಯ ಪ್ರಶಸ್ತಿ-2022’

- Advertisement -
- Advertisement -

ಖ್ಯಾತ ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಅವರು 2022ರ ನೋಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂದು ತೀರ್ಪುಗಾರರು ಗುರುವಾರ ಹೇಳಿದ್ದಾರೆ. ಲೇಖಕಿಯು ವರ್ಗ ಮತ್ತು ಲಿಂಗ ತಾರತಮ್ಯದ ಬಗ್ಗೆಗಿನ ಸರಳ ಕಾದಂಬರಿಗಳಿಗೆ ಹೆಸರುವಾಸಿಯಾಗಿದ್ದಾರೆ.

82 ವರ್ಷದ ಎರ್ನಾಕ್ಸ್ ಅವರ ಧೈರ್ಯ ಮತ್ತು ಅವರ ಚಿಕಿತ್ಸಕ ದೃಷ್ಟಿಕೋನದ ಚುರುಕುತನಕ್ಕಾಗಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ತೀರ್ಪುಗಾರರು ಹೇಳಿದ್ದಾರೆ. ವಿಜೇತ ನೊಬೆಲ್ ಪ್ರಶಸ್ತಿಯು ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 7.5 ಕೋಟಿ) ಮೊತ್ತವನ್ನು ಹೊಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಳೆದ ವರ್ಷ ಈ ಪ್ರಶಸ್ತಿಯು ಟಾಂಜೇನಿಯಾ ಮೂಲದ ಕಾದಂಬರಿಕಾರ ಅಬ್ದುಲ್‌ ರಜ್ಝಾಕ್‌ ಗುರ್ನಾ ಅವರಿಗೆ ನೀಡಲಾಗಿತ್ತು. ಅವರ ಸಾಹಿತ್ಯವು ನಿರಾಶ್ರಿತರು ಮತ್ತು ಗಡಿಪಾರು ಆಗಿರುವವರು, ವಸಾಹತುಶಾಹಿ ಮತ್ತು ವರ್ಣಭೇದ ನೀತಿಯ ಮೇಲೆ ಕೇಂದ್ರೀಕರಿಸಿತ್ತು.

ಹಲವಾರು ವರ್ಷಗಳಿಂದ ನೊಬೆಲ್ ಸ್ಪರ್ಧೆಯಲ್ಲಿ ಎರ್ನಾಕ್ಸ್ ಅವರ ಹೆಸರು ಕೇಳುತ್ತಲೆ ಬಂದಿದೆ. 1901 ರಲ್ಲಿ ಪ್ರಾರಂಭವಾದ ನೊಬೆಲ್ ಪ್ರಶಸ್ತಿಗಳಲ್ಲಿ 119 ಜನರಿಗೆ ಸಾಹಿತ್ಯ ನೋಬೆಲ್‌ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಮಹಿಳೆಯರಲ್ಲಿ ಅನ್ನಿ ಎರ್ನಾಕ್ಸ್‌ 17 ನೇ ಮಹಿಳೆಯಾಗಿದ್ದಾರೆ.

ಇದನ್ನೂ ಓದಿ: ಆಲ್ಟ್‌ನ್ಯೂಸ್‌ ಸಂಸ್ಥಾಪಕರಾದ ಮೊಹಮ್ಮದ್‌ ಜುಬೇರ್‌‌ ಮತ್ತು ಪ್ರತೀಕ್‌ ಸಿನ್ಹಾ ನೋಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ

ಎರ್ನಾಕ್ಸ್ ಅವರು ಡಿಸೆಂಬರ್ 10 ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಔಪಚಾರಿಕ ಸಮಾರಂಭದಲ್ಲಿ ಸ್ವೀಡನ್ ರಾಜ ‘ಕಾರ್ಲ್ XVI ಗುಸ್ತಾಫ್’ ಅವರಿಂದ ನೊಬೆಲ್ ಸ್ವೀಕರಿಸುತ್ತಾರೆ. 1896 ರಲ್ಲಿ ಮೃತಪಟ್ಟ ನೋಬೆಲ್‌ ಬಹುಮಾನಗಳನ್ನು ಪ್ರಾರಂಭಿಸಿದ ವಿಜ್ಞಾನಿ ಆಲ್ಫ್ರೆಡ್ ನೊಬೆಲ್ ಅವರ ಮರಣದ ವಾರ್ಷಿಕೋತ್ಸವ ಕೂಡಾ ಅಂದೇ ಆಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...