Homeಮುಖಪುಟಕೇರಳ ಸರ್ಕಾರ v/s ರಾಜ್ಯಪಾಲ: ವಿಶ್ವ ವಿದ್ಯಾಲಯದ 15 ಸೆನೆಟ್ ಸದಸ್ಯರನ್ನು ವಜಾ!

ಕೇರಳ ಸರ್ಕಾರ v/s ರಾಜ್ಯಪಾಲ: ವಿಶ್ವ ವಿದ್ಯಾಲಯದ 15 ಸೆನೆಟ್ ಸದಸ್ಯರನ್ನು ವಜಾ!

- Advertisement -
- Advertisement -

ಅಸಮಾನ್ಯ ನಡೆಯೊಂದರಲ್ಲಿ ಕೇರಳ ವಿಶ್ವವಿದ್ಯಾಲಯದ ಸೆನೆಟ್‌ಗೆ ನಾಮನಿರ್ದೇಶನಗೊಂಡಿದ್ದ 15 ಸದಸ್ಯರನ್ನು ವಜಾಗೊಳಿಸಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಆದೇಶ ಹೊರಡಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿರುವ ಸಂಘರ್ಷ ತಾರಕ್ಕೇರಿದೆ.

ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ರಾಜ್ಯಪಾಲರು ಈ ಕುರಿತು ನಿರ್ಣಯ ಕೈಗೊಂಡು ಶನಿವಾರ ವಿಶ್ವವಿದ್ಯಾಲಯಕ್ಕೆ ತಿಳಿಸಿದ್ದರು. ಆದರೆ ವಿಶ್ವ ವಿದ್ಯಾಲಯ ಅವರ ನಿರ್ಣಯವನ್ನು ಜಾರಿ ಮಾಡಿರಲಿಲ್ಲ. ಹೀಗಾಗಿ ರಾಜಭವನವೇ ಬುಧವಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸೆನೆಟ್ ಸದಸ್ಯರನ್ನು ಪದಚ್ಯುತಗೊಳಿಸುವ ರಾಜ್ಯಪಾಲರ ನಿರ್ಧಾರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಖಂಡಿಸಿದ್ದರು. ಇದಾಗಿ ಒಂದು ದಿನದ ನಂತರ ರಾಜ್ಯಪಾಲರ ಈ ಅಸಾಮಾನ್ಯ ಕ್ರಮವನ್ನು ಕೈಗೊಂಡಿದ್ದು, ಈ ಮೂಲಕ ಕೇರಳದಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯ ನಡುವೆ ನಡೆಯುತ್ತಿರುವ ಸಂಘರ್ಷವೂ ತಾರಕ್ಕೇರಿದೆ.

ಇದನ್ನೂ ಓದಿ: 2020 ರಿಂದ ಬೆಂಗಳೂರಿನಲ್ಲಿ ಪ್ರತಿ ತಿಂಗಳು ಕನಿಷ್ಠ ಒಂದು ಬಾಲ್ಯ ವಿವಾಹ!

ರಾಜ್ಯಪಾಲರ ಸೂಚನೆಯಂತೆ ಉಪಕುಲಪತಿ ಆಯ್ಕೆ ಸಮಿತಿಗೆ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಲು ಸೆನೆಟ್‌‌‌ ಹಿಂಜರಿದ ಕಾರಣ ರಾಜ್ಯಪಾಲರು ನಾಮನಿರ್ದೇಶನಗೊಂಡ ಸೆನೆಟ್‌ ಸದಸ್ಯರನ್ನು ವಜಾಗೊಳಿಸಿದ್ದಾರೆ.

ಈ ಮಧ್ಯೆ, ತಮ್ಮ ವಿರುದ್ಧ ರಾಜ್ಯಪಾಲರು ಕೈಗೊಂಡ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಸೆನೆಟ್ ಸದಸ್ಯರು ನಿರ್ಧರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಜನರ ಒಂದೂ ಓಟು ಪಡೆಯದೆ ಶಿಲಾಯುಗದ ರಾಜರ ಹಾಗೆ ನಾನೇ ಸರಿ ಎಂದು ಸರ್ವಾಧಿಕಾರಿಯಂತೆ ವರ್ತಿಸುವವರಿಗೆ ಪಾಠ ಕಲಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...