Homeಮುಖಪುಟಕೇರಳ: LDFನಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; UDF ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮ

ಕೇರಳ: LDFನಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; UDF ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮ

- Advertisement -
- Advertisement -

ಕೇರಳದಲ್ಲಿ ಎಲ್‌ಡಿಎಫ್‌ ನಿನ್ನೆಯಷ್ಟೇ ಲೋಕಸಭೆಗೆ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇಂದು ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಪಕ್ಷವು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ಘೋಷಿಸಿದೆ. ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸೀಟುಗಳ ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿದೆ ಎಂದು ಹೇಳಿದೆ.

ಪಕ್ಷವು ತನ್ನ ಅಭ್ಯರ್ಥಿಗಳ ಬಗ್ಗೆ ಈಗಾಗಲೇ ಸ್ಪಷ್ಟವಾದ ಚಿತ್ರಣವನ್ನು ಹೊಂದಿದ್ದು, ಶೀಘ್ರದಲ್ಲೇ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದೆ.

ಬುಧವಾರ ಈ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಹಾಗೂ ಯುಡಿಎಫ್‌ ಅಧ್ಯಕ್ಷ  ವಿ.ಡಿ ಸತೀಶನ್‌ ಕಾಂಗ್ರೆಸ್‌ 16 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದ್ದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 2 ಸ್ಥಾನ, ಕೇರಳ ಕಾಂಗ್ರೆಸ್‌ ಜೆ(ಕೆಸಿಜೆ) ಹಾಗೂ ಆರ್‌ಎಸ್‌ಪಿ ತಲಾ ಒಂದು ಸ್ಥಾನದಲ್ಲಿ ಸ್ಪರ್ಧೆ ಮಾಡಲಿದೆ ಎಂದು ಹೇಳಿದ್ದಾರೆ.

ಯುಡಿಎಫ್‌ನ ಎರಡನೇ ಅತಿದೊಡ್ಡ ಸಮ್ಮಿಶ್ರ ಪಾಲುದಾರರಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಈ ಬಾರಿ ಇನ್ನೂ ಒಂದು ಹೆಚ್ಚುವರಿ ಲೋಕಸಭಾ ಸ್ಥಾನವನ್ನು ಹಂಚಿಕೆ ಮಾಡುವ ಪ್ರಾಯೋಗಿಕ ತೊಂದರೆಯ ಬಗ್ಗೆ ಐಯುಎಂಎಲ್‌ಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.

ಕೆಪಿಸಿಸಿ ಮುಖ್ಯಸ್ಥ ಕೆ.ಸುಧಾಕರನ್‌ ಸಹ ಭಾಗವಹಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಯುಡಿಎಫ್‌ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್‌ ಅವರು ಈ ಘೋಷಣೆ ಮಾಡಿದ್ದಾರೆ. ಹಿಂದಿನ ಚುನಾವಣೆಗಳಂತೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಐಯುಎಂಎಲ್ ಮಲಪ್ಪುರಂ ಮತ್ತು ಪೊನ್ನಾನಿ ಎಂಬ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅವರು ಹೇಳಿದರು.

ಯುಡಿಎಫ್‌ನಲ್ಲಿ ನಡೆದ ಚರ್ಚೆಗಳ ಪ್ರಕಾರ, ಕಾಂಗ್ರೆಸ್ 16 ಸ್ಥಾನಗಳಲ್ಲಿ, ಮಲಪ್ಪುರಂ ಮತ್ತು ಪೊನ್ನಾನಿಯಲ್ಲಿ ಐಯುಎಂಎಲ್, ಕೊಲ್ಲಂನಲ್ಲಿ ಆರ್‌ಎಸ್‌ಪಿ ಮತ್ತು ಕೊಟ್ಟಾಯಂನಲ್ಲಿ ಕೇರಳ ಕಾಂಗ್ರೆಸ್ (ಜೆ) ಸ್ಪರ್ಧಿಸಲಿದೆ.

IUML ನಾಯಕತ್ವವು ಇತ್ತೀಚೆಗೆ  ಮೂರು ಕ್ಷೇತ್ರಗಳಿಗೆ ಬೇಡಿಕೆಯನ್ನು ಇಟ್ಟಿತ್ತು. ಆದರೆ ಚರ್ಚೆಯ ಸಮಯದಲ್ಲಿ  ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಹಂಚಿಕೆ ಮಾಡುವ ತೊಂದರೆಯ ಬಗ್ಗೆ ಐಯುಎಂಎಲ್ ನಾಯಕತ್ವಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಮತ್ತು ಖಾಲಿಯಾಗುವ ಮುಂದಿನ ರಾಜ್ಯಸಭಾ ಸ್ಥಾನವನ್ನು ಐಯುಎಂಎಲ್‌ಗೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಘಟಕದ ಪಕ್ಷಗಳೊಂದಿಗಿನ ಚರ್ಚೆಯ ಸಮಯದಲ್ಲಿ, ಕೇರಳದ ಎಲ್ಲಾ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಚಟುವಟಿಕೆಗಳೊಂದಿಗೆ ಮುಂದುವರಿಯುವ ಮೂಲಕ ಇಂಡಿಯಾ ಮೈತ್ರಿಯನ್ನು ಬಲಪಡಿಸಲು ಯುಡಿಎಫ್ ನಿರ್ಧರಿಸಿದೆ. ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪ್ರತಿಪಕ್ಷದ ನಾಯಕರು ಮತ್ತು ಕೆಪಿಸಿಸಿ ಮುಖ್ಯಸ್ಥರು ಶೀಘ್ರದಲ್ಲೇ ನವದೆಹಲಿಗೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಭ್ಯರ್ಥಿಗಳ ಘೋಷಣೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಎಡರಂಗ

ಕೇರಳದ ಆಡಳಿತಾರೂಢ ಎಡರಂಗದ ಪ್ರಮುಖ ಪಾಲುದಾರ ಸಿಪಿಎಂ ನಿನ್ನ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು.

ಸಿಪಿಎಂ ಅಭ್ಯರ್ಥಿಗಳ ಪಟ್ಟಿ

1.ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ (ಆಲತ್ತೂರು)

2. ಕೆ.ಕೆ.ಶೈಲಜಾ (ವಡಕರ)

3. ಎಂ ಮುಖೇಶ್ (ಕೊಲ್ಲಂ)

4. ಟಿಎಂ ಥಾಮಸ್ ಐಸಾಕ್ (ಪತ್ತನಂತಿಟ್ಟ)

5. ಎ ವಿಜಯರಾಘವನ್ (ಪಾಲಕ್ಕಾಡ್)

6. ಎಂವಿ ಜಯರಾಜನ್ (ಕಣ್ಣೂರು)

7. ಎಳಮರಮ್ ಕರೀಂ (ಕೋಝಿಕೋಡ್)

8. ಸಿ ರವೀಂದ್ರನಾಥ್ (ಚಾಲಕುಡಿ)

9. ಜಾಯ್ಸ್ ಜಾರ್ಜ್ (ಇಡುಕ್ಕಿ)

10. ಎಂವಿ ಬಾಲಕೃಷ್ಣನ್ (ಕಾಸರಗೋಡು)

11. ಎಎಮ್ ಆರಿಫ್, ಹಾಲಿ ಸಂಸದ, (ಆಲಪ್ಪುಝ)

12. ಕೆ ಎಸ್ ಹಂಸ (ಪೊನ್ನಾನಿ)

13. ವಿ ವಸೀಫ್(ಮಲಪ್ಪುರಂ)

14. ಕೆಜೆ ಶೈನ್ (ಎರ್ನಾಕುಲಂ)

15. ವಿ ಜಾಯ್ (ಅಟ್ಟಿಂಗಲ್)

ಎಲ್‌ಡಿಎಫ್‌ನ ಎರಡನೇ ಅತಿದೊಡ್ಡ ಮಿತ್ರ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ 26ರಂದು ಬಿಡುಗಡೆ ಮಾಡಿತ್ತು.

1. ವಿಎಸ್ ಸುನಿಲ್ ಕುಮಾರ್ (ತ್ರಿಶೂರ್)

2. ಪನ್ನಯನ್ ರವೀಂದ್ರನ್ (ತಿರುವನಂತಪುರಂ)

3. ಅನ್ನಿ ರಾಜಾ (ವಯನಾಡ್)

4. ಸಿಎ ಅರುಣ್ ಕುಮಾರ್ (ಮಾವೆಲಿಕ್ಕರ)

ಇದನ್ನು ಓದಿ: ಗುಜರಾತ್ ಗಲಭೆ ಕೇಸ್‌ ಸೇರಿ ಪ್ರಮುಖ ಕೇಸ್‌ಗಳಲ್ಲಿ ತೀರ್ಪು ನೀಡಿದ್ದ ನೂತನ ಲೋಕಪಾಲ್ ಖಾನ್ವಿಲ್ಕರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...