Homeಮುಖಪುಟಕೊಂದುಬಿಡು ಕೊರೋನಾ, ಹಸಿವಿನಿಂದ ಸತ್ತೆನೆಂಬ ಅಪವಾದ ನನ್ನ ದೇಶಕ್ಕೆ ಬರದಿರಲಿ - ಪುನೀತ್‌ ಅಪ್ಪು

ಕೊಂದುಬಿಡು ಕೊರೋನಾ, ಹಸಿವಿನಿಂದ ಸತ್ತೆನೆಂಬ ಅಪವಾದ ನನ್ನ ದೇಶಕ್ಕೆ ಬರದಿರಲಿ – ಪುನೀತ್‌ ಅಪ್ಪು

- Advertisement -
- Advertisement -

ಯುವ ವಕೀಲರು ಮತ್ತು ಬರಹಗಾರರಾದ ಪುನೀತ್‌ ಅಪ್ಪು, ವಿಶ್ವ ಕಾವ್ಯ ದಿನದಂದು ಕೊಂದುಬಿಡು ಕೊರೊನಾ ಎಂದು ಕವಿತೆ ಬರೆಯುತ್ತಾರೆ. ದೇಶಕ್ಕೆ ದೇಶವೇ ಕೊರೋನಾದಿಂದ ಪಾರಾಗಲು ಬಯಸುವಾಗ ಇವರೇಕೆ ಕೊಂದುಬಿಡು ಎಂದು ಆಹ್ವಾನ ಕೊಡುತ್ತಿದ್ದಾರೆ? ಪೂರ್ತಿ ಕವನ ಓದಿ ಅರ್ಥವಾದೀತು…

ಕೊಂದುಬಿಡು ಕೊರೋನಾ,
ಹಸಿವಿನಿಂದ ಸತ್ತೆನೆಂಬ ಅಪವಾದ
ನನ್ನ ದೇಶಕ್ಕೆ ಬರದಿರಲಿ,

ಕೊಂದು ಬಿಡು ಶೀತಗಟ್ಟಿ
ಕಣ್ಣು ಮೂಗುಗಳಿಂದ ನೀರು ಸುರಿವಂತೆ
ಜ್ವರವೇರಿ ಮೈಮನಗಳು ಸುಡುವಂತೆ,
ಕೋಮುದಳ್ಳುರಿಗೆ ಸಿಲುಕಿ
ಅನಾಥನಂತೆ ಕಣ್ಣೀರು ಸುರಿಸಿ
ಜೀವಂತ ಸುಟ್ಟು ಸತ್ತೆನೆಂಬ ಅಪವಾದ
ನನ್ನ ದೇಶಕ್ಕೆ ಬರದಿರಲಿ

ಬಾ ಅಪ್ಪಿಬಿಡು ಅರಿವಿಲ್ಲದೇ
ಬೆಚ್ಚಗಿನ ಮೃತ್ಯುಬಾಹು ಬಂಧನದಲ್ಲಿ,
ನನ್ನ ಹುಟ್ಟಿನ ಬಗ್ಗೆ ದಾಖಲೆಯ ನೀಡಲಾರದೆ
ಜನ್ಮಕೊಟ್ಟವಳೇ ತನ್ನ ಮಗುವನ್ನು
ಹೊರದಬ್ಬಿದಳೆಂಬ ಅಪವಾದ
ಎನ್ನ ತಾಯ್ನಾಡಿಗೆ ಬರದಿರಲಿ

ಬಾ ಒಮ್ಮೆ ನಿನ್ನ ಕಬಂಧ ತೋಳುಗಳಲ್ಲಿ
ನುಗ್ಗುನುರಿಗೊಳಿಸು
ಧ್ವನಿಯೆತ್ತಿದವನ ಸದ್ದಡಗಿಸು
ಅಸಹಾಯಕನ ತುಳಿ
ನ್ಯಾಯಕ್ಕೆ ಮೊರೆಯಿಟ್ಟವನ
ಅನ್ಯಾಯವಾಗಿ ಕೊಂದುಬಿಡು,
ಜಾಮೀನು ಸಿಗದೆ
ಜೈಲಿನಲ್ಲೇ ಕೊಳೆತು ಹೋದೆನೆಂಬ ಅಪವಾದ
ನನ್ನ ದೇಶದ ನ್ಯಾಯಾಲಯಗಳಿಗೆ ತಟ್ಟದಿರಲಿ

  • 21 – 03 -2020

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...