Homeಅಂತರಾಷ್ಟ್ರೀಯಮಕ್ಕಳಿಗೆ ಕೇವಲ ಸಸ್ಯಾಹಾರ ನೀಡಿದ ಶಿಶುವಿಹಾರ: ನೋಟಿಸ್ ನೀಡಿದ ಚೀನಾ ಸರ್ಕಾರ

ಮಕ್ಕಳಿಗೆ ಕೇವಲ ಸಸ್ಯಾಹಾರ ನೀಡಿದ ಶಿಶುವಿಹಾರ: ನೋಟಿಸ್ ನೀಡಿದ ಚೀನಾ ಸರ್ಕಾರ

ಸಸ್ಯಗಳಿಂದ ಪಡೆದ ಆಹಾರವನ್ನು ಮಾತ್ರ ಅವಲಂಬಿಸಿದರೆ ಅಪೌಷ್ಟಿಕತೆಗೆ ಕಾರಣವಾಗಬಹುದು ಎಂದು ವಿಶ್ವದಾದ್ಯಂತದ ಅಧ್ಯಯನಗಳು ಸಾಬೀತುಪಡಿಸಿವೆ- ಝೇಜಿಯಾಂಗ್ ವಿಶ್ವವಿದ್ಯಾಲಯದ ಆಹಾರ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಝೌ ವೆನ್ವೆನ್

- Advertisement -
- Advertisement -

ಮಕ್ಕಳಿಗೆ ಕೇವಲ ಸಸ್ಯಾಹಾರ ನೀಡವುದನ್ನು ಖಂಡಿಸಿ, ಮಾಂಸಹಾರವನ್ನು ನೀಡಬೇಕೆಂದು ಚೀನಾದ ಅಧಿಕಾರಿಗಳು ನೈರುತ್ಯ ಚೀನಾದಲ್ಲಿರುವ ಶಿಶುವಿಹಾರಕ್ಕೆ ಆದೇಶ ನೀಡಿರುವ ಘಟನೆ ನಡೆದಿದೆ.

“ಚೆಂಗ್‌ಡು ನಗರದ ಡೆಯಿನ್ ಸ್ಕೂಲ್ ಎಂದು ಕರೆಯಲ್ಪಡುವ ಶಿಶುವಿಹಾರವು “ಶಾಲಾಪೂರ್ವ ಹಂತದ ಮಕ್ಕಳಿಗೆ ಮಾಂಸ ಆಧಾರಿತ ಆಹಾರವನ್ನು ನೀಡದೇ, ಆಹಾರಕ್ಕೆ ಸಂಬಂಧಿಸಿದ ರಾಷ್ಟ್ರೀಯ ಮತ್ತು ಸ್ಥಳೀಯ ನಿಯಮಗಳನ್ನು ಮುರಿದಿದೆ” ಎಂದು ಹಾಂಗ್-ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಸ್ಥಳೀಯ ಶಿಕ್ಷಣ ಬ್ಯೂರೋ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಶಾಲೆಯು ಹಾಲು ಮತ್ತು ಮೊಟ್ಟೆಗಳನ್ನು ನೀಡುತ್ತಿದೆ. ಆದರೆ ಸರ್ಕಾರ ನೀಡಿರುವ ಪೌಷ್ಠಿಕಾಂಶ ಆಹಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಮಾಂಸ ಮತ್ತು ಮೀನಿನ ಆಹಾರಗಳನ್ನು ಮಕ್ಕಳಿಗೆ ನೀಡಲಾಗುತ್ತಿಲ್ಲ ಎಂದು ಬ್ಯೂರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜೊತೆಗೆ ಊಟದ ನಿಯಮವನ್ನು ಸುಧಾರಿಸುವುದರೊಂದಿಗೆ ಅದನ್ನು ಹೆಚ್ಚು ಸಮತೋಲನಗೊಳಿಸುವಂತೆಯೂ ಆದೇಶಿಸಿದೆ.

49 ಮಕ್ಕಳ ದಾಖಲಾತಿಯಿರುವ ಶಿಶುವಿಹಾರ, ವಿದ್ಯಾರ್ಥಿಗಳಲ್ಲಿ ಸಸ್ಯಾಹಾರಿ ಆಹಾರವನ್ನು ಉತ್ತೇಜಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾದ ನಂತರ ಶಿಕ್ಷಣ ಬ್ಯೂರೋ ಮಧ್ಯಪ್ರವೇಶಿಸಿದೆ. ಜೊತೆಗೆ ಕೆಲವರು ಶಿಶು ವಿಹಾರದ ಈ ಕ್ರಮವನ್ನು ‘ಕನ್‌ಫ್ಯೂಷನಿಸಂ’ ಧರ್ಮಕ್ಕೆ ತಾಳೆ ಹಾಕಿ ಟೀಕೆ ಮಾಡಿದ್ದಾರೆ.

ಈ ಕುರಿತು WeChat ನಲ್ಲಿ ವಿವಾದ ಸೃಷ್ಟಿಯಾಗಿದ್ದು, “ಗ್ರೇಟ್! ಚೆಂಗ್‌ಡೂನಲ್ಲಿ ಸಂಪೂರ್ಣ ಸಸ್ಯಾಹಾರಿ ಶಿಶುವಿಹಾರವಿದೆ” ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಅನೇಕರು, “ತಮ್ಮ ಮಕ್ಕಳು ಅಗತ್ಯ ಪೋಷಕಾಂಶಗಳನ್ನು ಪಡೆಯುತ್ತಾರೆಯೇ?” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು, “ಕನ್‌ಫ್ಯೂಷಿಯಸ್ ಎಂದಿಗೂ ಜನರು ಮಾಂಸವನ್ನು ತ್ಯಜಿಸಬೇಕು ಎಂದು ಹೇಳಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. “ಮಕ್ಕಳಿಗೆ ಸಸ್ಯಾಹಾರವನ್ನು ನೀಡುವುದು ದುಷ್ಕೃತ್ಯ” ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಲು ಡೆಯಿನ್ ಶಾಲೆ ನಿರಾಕರಿಸಿದೆ.

ಇದನ್ನೂ ಓದಿ: ಕನ್ಯಾಕುಮಾರಿ: ಮಾತು ಕೊಟ್ಟಂತೆ ಬಾಲಕನಿಗೆ ಶೂ ಕಳುಹಿಸಿದ ರಾಹುಲ್ ಗಾಂಧಿ!

ಚೀನಾದಲ್ಲಿ ಯೋಗ ಮತ್ತು ಸಸ್ಯಾಹಾರದ ಸಂಸ್ಕೃತಿ ಆರಂಭವಾಗುತ್ತಿದೆ. ರಾಜಧಾನಿ ಬೀಜಿಂಗ್ ಸೇರಿದಂತೆ ದೇಶಾದ್ಯಂತ ಹಲವಾರು ಸಸ್ಯಾಹಾರಿ ರೆಸ್ಟೋರೆಂಟ್‌ಗಳು ಆರಂಭವಾಗಿವೆ ಎಂದು ಮಿಂಟ್ ವರದಿ ಮಾಡಿದೆ.

ಚೀನಾದ ಪ್ರಾಚೀನ ಸಂಸ್ಕೃತಿ ಮರೆಯಾಗುತ್ತಿರುವ ಮತ್ತು ಮಕ್ಕಳಲ್ಲಿ ಸ್ಥೂಲ ಕಾಯದ ಸಮಸ್ಯೆ ಹೆಚ್ಚುತ್ತಿರುವ ಆತಂಕದ ನಡುವೆ, ಪುರಾತನ ಚೀನಾದ ಶಾಸ್ತ್ರೀಯ ಬೋಧನೆ ಮತ್ತು ಸಸ್ಯಾಹಾರ ಆಹಾರವನ್ನು ಉತ್ತೇಜಿಸುವ ಶೈಕ್ಷಣಿಕ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿವೆ.

ಆದರೆ ವಿಶ್ವಾದ್ಯಂತ ಹೆಚ್ಚುತ್ತಿರುವ ಸಸ್ಯಾಹಾರಿ ಆಹಾರದ ಜನಪ್ರಿಯತೆಯ ನಡುವೆ, ಚೀನಾದಲ್ಲಿ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ನೀಡಬೇಕು ಎಂಬ ಬೇಡಿಕೆ ಕೇಳಿಬಂದಿದೆ.

ಝೇಜಿಯಾಂಗ್ ವಿಶ್ವವಿದ್ಯಾಲಯದ ಆಹಾರ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಝೌ ವೆನ್ವೆನ್, “ಸಸ್ಯಗಳಿಂದ ಪಡೆದ ಆಹಾರವನ್ನು ಮಾತ್ರ ಅವಲಂಬಿಸಿದರೆ ಅಪೌಷ್ಟಿಕತೆಗೆ ಕಾರಣವಾಗಬಹುದು ಎಂದು ವಿಶ್ವದಾದ್ಯಂತದ ಅಧ್ಯಯನಗಳು ಸಾಬೀತುಪಡಿಸಿವೆ. ಮನುಷ್ಯನ ದೇಹವು ತನಗೆ ಅಗತ್ಯವಾದ ಅಮೈನೋ ಆಮ್ಲಗಳು ಮತ್ತು ಪ್ರೋಟೀನ್‌ಗಳನ್ನು ಮಾಂಸಾಹಾರಗಳಿಂದ ಪಡೆಯಬೇಕಾಗಿದೆ. ಮಕ್ಕಳಿಗೆ ಅಂತಹ ಪೋಷಕಾಂಶಗಳ ಹೆಚ್ಚಿನ ಅಗತ್ಯವಿರುತ್ತದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ವಿದೇಶದಿಂದ ಬಸ್ ಖರೀದಿಯಲ್ಲೂ ಲಂಚ: ಎಲ್ಲ ಗೊತ್ತಿದ್ದರೂ ಮಲಗೇ ಇರುವ ದೊಡ್ಡ ಮೀಡಿಯಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...