HomeಮುಖಪುಟKPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ರದ್ದು: ಹೈಕೋರ್ಟ್‌ನಿಂದ ಮರುನೇಮಕಕ್ಕೆ ಆದೇಶ

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ರದ್ದು: ಹೈಕೋರ್ಟ್‌ನಿಂದ ಮರುನೇಮಕಕ್ಕೆ ಆದೇಶ

- Advertisement -
- Advertisement -

ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತದ ಆರೋಪದಡಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.

ಅಮಾನತು ಆದೇಶವನ್ನು ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.

ಹೈಕೋರ್ಟ್‌ ತೀರ್ಪಿನ ಪ್ರಮುಖ ಅಂಶಗಳು:

ರಾಜ್ಯ ಸಚಿವ ಸಂಪುಟದ ಸಲಹೆ ಮತ್ತು ಶಿಫಾರಸು ಇಲ್ಲದೆ ರಾಜ್ಯಪಾಲರು ಸಂವಿಧಾನದ 317(2)ನೇ ವಿಧಿಯಡಿ ಸಾಹುಕಾರ್ ಅವರನ್ನು ಅಮಾನತುಗೊಳಿಸಿದ್ದರು. ಹೀಗಾಗಿ 2026ರ ಜನವರಿ 10ರಂದು ಹೊರಡಿಸಲಾಗಿದ್ದ ಅಮಾನತು ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

 ಈ ಆದೇಶದ ಪ್ರತಿ ಸಿಕ್ಕ 7 ದಿನಗಳ ಒಳಗಾಗಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಮತ್ತೆ ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಗೆ ಮರುನಿಯೋಜಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

 ಹುದ್ದೆ ಮರುಸ್ಥಾಪನೆಯಾದ ನಂತರ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅರ್ಹರಾಗಿದ್ದು, ಅಮಾನತು ಅವಧಿಯ ಎಲ್ಲಾ ಪೂರಕ ಸೇವಾ ಮತ್ತು ಆರ್ಥಿಕ ಸೌಲಭ್ಯಗಳನ್ನು ಪಡೆಯಲಿದ್ದಾರೆ.

 ಇದೇ ವೇಳೆ, ತಮ್ಮ ಪುತ್ರಿಯರ ವಿರುದ್ಧ ಆಯೋಗ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಅಥವಾ ಪ್ರಭಾವ ಬೀರಬಾರದು ಎಂದು ಸಾಹುಕಾರ್ ಅವರಿಗೆ ನ್ಯಾಯಪೀಠ ಕಟ್ಟುನಿಟ್ಟಿನ ಷರತ್ತು ವಿಧಿಸಿದೆ.

ಹೈಕೋರ್ಟ್‌ನ ಈ ತೀರ್ಪು ಕೇವಲ ಅಮಾನತು ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸಿದೆಯೇ ಹೊರತು ಆರೋಪಗಳ ಸತ್ಯಾಸತ್ಯತೆಯನ್ನಲ್ಲ. ಆದ್ದರಿಂದ ಸರ್ಕಾರ ಬಯಸಿದರೆ ಸಂವಿಧಾನದ ನಿಯಮಾವಳಿಗಳ ಪ್ರಕಾರ, ಸಚಿವ ಸಂಪುಟದ ಸಲಹೆ ಪಡೆದು ಹೊಸದಾಗಿ ಕಾನೂನು ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಲಾಗಿದೆ.

ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಇಬ್ಬರು ಪುತ್ರಿಯರ ನೇಮಕಾತಿ/ಆಯ್ಕೆ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿ ಮೇಲೆ ಪ್ರಭಾವ ಬೀರಿದ್ದಾರೆ ಮತ್ತು ಸ್ವಜನಪಕ್ಷಪಾತ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಡ್ಸೆ ಹೊಗಳಿಕೆ, ದಲಿತದ್ವೇಷ, ಸ್ತ್ರೀದ್ವೇಷ ಮತ್ತು ಮುಸ್ಲಿಂ ದ್ವೇಷ: ತೀವ್ರ ಪರಿಶೀಲನೆಯಲ್ಲಿರುವ ಬಿಜೆಪಿಯ ಹೊಸ ಸಾಮಾಜಿಕ ಮಾಧ್ಯಮ ತಂಡದ ವಿರುದ್ಧ ಜನಾಕ್ರೋಶ

ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆಯನ್ನು ಹೊಗಳಿದ ಹಳೆಯ ಪೋಸ್ಟ್‌ಗಳು, ಇಸ್ಲಾಮೋಫೋಬಿಕ್ ಹಾಗೂ ಜನಾಂಗೀಯ ಹತ್ಯೆಯ ಹೇಳಿಕೆಗಳು, ದಲಿತ ಹಾಗೂ ಮೀಸಲಾತಿ ವಿರೋಧಿ ಮಾತುಗಳು ಮತ್ತು ಮಹಿಳೆಯರ ವಿರುದ್ಧ ಬಳಸಿರುವ ಸ್ತ್ರೀದ್ವೇಷದ ಭಾಷೆಯ ಕಾರಣಕ್ಕಾಗಿ...

‘ಮಹಾತ್ಮ ಗಾಂಧಿ – ವಾಜಪೇಯಿ ಹಾಡಿದ್ದನ್ನೇ ನಾವು ಹಾಡಿದ್ದೇವೆ..’; ವಂದೇ ಮಾತರಂ ವಿವಾದದ ಕುರಿತು ಖರ್ಗೆ ಸ್ಪಷ್ಟನೆ

ಪಕ್ಷದ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಹಾಡಿದ ಬಗ್ಗೆ ನಡೆಯುತ್ತಿರುವ ವಿವಾದದ ನಡುವೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್...

ದೆಹಲಿ ಪೊಲೀಸರಿಂದ AAP ಶಾಸಕನ ಅಪಹರಣ?: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ತುರ್ತು ವಿಚಾರಣೆಗೆ ಅಸ್ತು!

AAP ಶಾಸಕ ಕುಲ್ದೀಪ್ ಕುಮಾರ್ ಅವರನ್ನು ಅವರ ಮನೆಯಿಂದ ಅಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ (Habeas Corpus) ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ಒಪ್ಪಿಗೆ...

ಅದಾನಿ-ಎಲ್‌ಐಸಿ ತನಿಖಾ ವರದಿ: ಪತ್ರಕರ್ತ ರವಿ ನಾಯರ್ ಮನೆಗಳ ಮೇಲೆ ಗುಜರಾತ್ ಪೊಲೀಸರ ದಾಳಿ, ಡಿಜಿಟಲ್ ಉಪಕರಣಗಳ ವಶ

ಅದಾನಿ ಸಮೂಹ ಹಾಗೂ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ) ನಡುವಿನ ಹೂಡಿಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ ತನಿಖಾ ವರದಿ ಪ್ರಕಟಿಸಿದ್ದ ಸ್ವತಂತ್ರ ಪತ್ರಕರ್ತ ರವಿ ನಾಯರ್ ಅವರ ದೆಹಲಿ ಮತ್ತು ಕೇರಳದಲ್ಲಿರುವ...

ಗುಜರಾತ್ | ನಕಲಿ ಸರ್ಕಾರಿ ಕಚೇರಿಗಳನ್ನು ಸ್ಥಾಪಿಸಿ ಸರ್ಕಾರದ ಅನುದಾನ ಲೂಟಿ; ಬೃಹತ್ ಹಗರಣ ಬಯಲು

ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಹೆಸರಿನಲ್ಲಿ 6 ನಕಲಿ ಸರ್ಕಾರಿ ಕಚೇರಿಗಳನ್ನು ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಸರ್ಕಾರಿ ಅನುದಾನವನ್ನು ಲೂಟಿ ಮಾಡಿರುವುದು ಪತ್ತೆಯಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ...

ಎನ್‌ಎಎಲ್‌ಎಸ್‌ಎಆರ್‌ ಘಟಿಕೋತ್ಸವದ ಆಹ್ವಾನವನ್ನು ನಾನು ಸ್ವೀಕರಿಸಿರಲೇ ಇಲ್ಲ: ಸಿಜೆಐ ಸೂರ್ಯ ಕಾಂತ್

ಎನ್‌ಎಎಲ್‌ಎಸ್‌ಎಆರ್‌ ಕಾನೂನು ವಿಶ್ವವಿದ್ಯಾಲಯದ ಮುಂಬರುವ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ನಾನು ಎಂದಿಗೂ ಒಪ್ಪಿಗೆ ನೀಡಿರಲಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹೇಳಿದ್ದಾರೆ. ವಿದ್ಯಾರ್ಥಿಗಳ ವಿರೋಧದ ನಡುವೆಯೂ...

ಎರಡು ವರ್ಷಗಳ ವಿಳಂಬದ ನಂತರ ಹಣಕಾಸು ವರದಿ ಬಿಡುಗಡೆ ಮಾಡಿದ ಪಿಎಂ ಕೇರ್ಸ್

ಎರಡು ವರ್ಷಗಳ ವಿಳಂಬದ ನಂತರ ಪಿಎಂ ಕೇರ್ಸ್ ನಿಧಿಯು ತನ್ನ 2023-24 ಮತ್ತು 2024-25ರ ಹಣಕಾಸು ವರ್ಷಗಳ ಆಡಿಟ್ ವರದಿಗಳನ್ನು (ಲೆಕ್ಕಪರಿಶೋಧನಾ ವರದಿ) ಆಗಸ್ಟ್ 17ರಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಪಿಎಂ...

ಭಾರತ ಚುನಾವಣಾ ವ್ಯವಸ್ಥೆಯನ್ನು ಹೊಗಳಿದ ಟ್ರಂಪ್: ಜ್ಞಾನೇಶ್ ಕುಮಾರ್ ಜೊತೆಗೆ EVMಅನ್ನು ತೆಗೆದುಕೊಂಡು ಹೋಗಿ ಎಂದು ಕಾಲೆಳೆದ ಕಾಂಗ್ರೆಸ್

ಭಾರತದ ಚುನಾವಣಾ ವ್ಯವಸ್ಥೆ ಹಾಗೂ ಮತದಾರರ ಫೋಟೋ ಗುರುತಿನ ಚೀಟಿ (Voter ID) ಕಡ್ಡಾಯ ನಿಯಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ, ಟ್ರಂಪ್ ಅವರ ಈ ಹೇಳಿಕೆಯನ್ನು ಇಟ್ಟುಕೊಂಡು...

ಬಿಜೆಪಿ ವಿರುದ್ಧ ಹೋರಾಟಕ್ಕೆ ಕರೆ ನೀಡಿದ ತ್ರಿಪುರ ಮಾಜಿ ಸಿಎಂ ಮಾಣಿಕ್ ಸರ್ಕಾರ್ ವಿರುದ್ಧ ಪ್ರಕರಣ ದಾಖಲು: ಬಿಜೆಪಿಯ ಕೀಳು ಮಟ್ಟದ ರಾಜಕೀಯ ಎಂದ ಸಿಪಿಐ(ಎಂ)

ತ್ರಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ಪಾಲಿಟ್‌ಬ್ಯೂರೋ ಹಿರಿಯ ಸದಸ್ಯ ಮಾಣಿಕ್ ಸರ್ಕಾರ್ ಅವರು ಇತ್ತೀಚೆಗೆ ಸಾರ್ವಜನಿಕ ರ್ಯಾಲಿಯೊಂದರಲ್ಲಿ ನೀಡಿದ್ದ ಹೇಳಿಕೆಯನ್ನು ಆಧರಿಸಿ, ಅವರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಣಿ...

ಮುಹಮ್ಮದ್ ದೀಪಕ್‌ಗೆ 2026 ನೇ ಸಾಲಿನ ‘ರೆಹಮತ್-ಎ-ಆಲಂ ಶಾಂತಿ ಪ್ರಶಸ್ತಿ’

ಆಲ್ ಇಂಡಿಯಾ ಬಾಜ್ಮ್-ಎ-ರೆಹಮತ್-ಎ-ಆಲಂ ಸಂಘಟನೆಯು, ಮುಹಮ್ಮದ್ ದೀಪಕ್ ಎಂದೇ ಜನಪ್ರಿಯರಾಗಿರುವ ದೀಪಕ್ ಕುಮಾರ್ ಅವರಿಗೆ 2026 ರ ರೆಹಮತ್-ಎ-ಆಲಂ ಶಾಂತಿ ಪ್ರಶಸ್ತಿಯನ್ನು ಘೋಷಿಸಿದೆ. ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯಾದ ಮಿಲಾದ್-ಉನ್-ನಬಿಯನ್ನು ಗುರುತಿಸಲು ಆಯೋಜಿಸಲಾದ...