HomeUncategorizedಶಿವಮೊಗ್ಗ: ತಲ್ವಾರು ಹಿಡಿದು ಉತ್ತರ ಕೊಡಲು ಗೊತ್ತಿದೆ; ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ

ಶಿವಮೊಗ್ಗ: ತಲ್ವಾರು ಹಿಡಿದು ಉತ್ತರ ಕೊಡಲು ಗೊತ್ತಿದೆ; ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ

- Advertisement -
- Advertisement -

ಶಿವಮೊಗ್ಗದಲ್ಲಿ ಮೀಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಪ್ರಚೋದನಾಕಾರಿಯಾಗಿ ಹೇಳಿಕೆಯನ್ನು ಕೊಟ್ಟಿದ್ದು, ತಲ್ವಾರ್‌ಗೆ ವಾಪಾಸ್ಸು ತಲ್ವಾರು ಹಿಡಿದುಕೊಂಡು ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಗೊತ್ತಿದೆ ಎಂದು ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಈಶ್ವರಪ್ಪ, ತಲ್ವಾರ್‌ಗೆ ವಾಪಾಸ್ಸು ತಲ್ವಾರು ಹಿಡಿದುಕೊಂಡು ಉತ್ತರ ಕೊಡಲು  ಹಿಂದೂ ಸಮಾಜಕ್ಕೆ ಬರುತ್ತೆ ಇದನ್ನು ನಾನು ಮುಖ್ಯಮಂತ್ರಿಗೆ, ಗೃಹ ಸಚಿವರಿಗೆ ಮುಸಲ್ಮಾನ ಗೂಂಡಾಗಳಿಗೆ ಹೇಳಕ್ಕೆ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಮೆರವಣಿಗೆಯಲ್ಲಿ ಯಾರೂ ತಲ್ವಾರು ಹಿಡಿದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ. ಕಾಂಗ್ರೆಸ್ ಸರಕಾರ ಮುಸ್ಲಿಮರ ಗುಲಾಮರಾಗಿದ್ದಾರೆ. ಇದು ಹಿಂದೂಗಳಿಗೆ ಭಯ ಹುಟ್ಟಿಸಲು ಮಾಡಿದ ಕಾರ್ಯಕ್ರಮ. ಹಿಂದೂ ಸಮಾಜ ಇದಕ್ಕೆ ಜಗ್ಗಲ್ಲ, ಬಗ್ಗಲ್ಲ, ಹಿಂದೂಗಳಿಗೆ ಪ್ರಚೋದನೆ ಕೊಡುವ ರೀತಿ  ಔರಂಗಜೇಬ, ಟಿಪ್ಪುಸುಲ್ತಾನ ಅವರ ಪೋಟೊ ಹಾಕಿದ್ದಾರೆ. ಯಾರು ಸ್ಪೂರ್ತಿ ಕೊಟ್ಟವರು ಇವರಿಗೆ, ಇವರೆಲ್ಲ ದೇಶದ್ರೋಹಿಗಳು ಎಂದು ಹೇಳಿಕೆ ಕೊಟ್ಟಿದ್ದಾರೆ.

ಪೊಲೀಸರು ಮೆರವಣಿಗೆಗೆ ಕೊಟ್ಟ ಸ್ಥಳವೇ ಬೇರೆ,ಸಂಜೆ 6 ಗಂಟೆಗೆ ಮೆರವಣಿಗೆ ಮುಗಿಸಲು ಹೇಳಿದರೂ 7.30ವರೆಗೂ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ. ಸರ್ಕಾರ ಬದುಕಿದಿಯಾ. ಗೃಹಮಂತ್ರಿಗಳು ಬರಲಿ, ಆ ಏರಿಯಾದ ಮನೆಗಳಿಗೆ ಹೋಗಿ ನೋಡಲಿ. ಸಣ್ಣಪುಟ್ಟ ಗಲಾಟೆ, ತಲ್ವಾರ್ ಹಿಡಿದಿಲ್ಲ ಎನ್ನುವ ಸಚಿವ ಗೃಹಮಂತ್ರಿ ಅಗಲು ಅನ್ ಫಿಟ್, ರಾಜೀನಾಮೆ ಕೊಡಲಿ ಎಂದು ಹೇಳಿದ್ದಾರೆ.

ರಾಗಿಗುಡ್ಡಕ್ಕೆ ನಮ್ಮ ಶಾಸಕರು ಹೋಗಿ ಬಂದಿದ್ದಾರೆ. ಮನೆಗಳಿಗೆ ನುಗ್ಗಿ ಹೊಡೆದಿದ್ದಾರೆ. ಕಲ್ಲು ತೂರಾಟ ಮಾಡಿದ್ದಾರೆ. ಕರ್ತವ್ಯದಲ್ಲಿದ್ದ ಹಲವು ಪೊಲೀಸರಿಗೂ ಕಲ್ಲು ಬಿದ್ದಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಶಿವಮೊಗ್ಗ: ಮೀಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...