Homeಕರ್ನಾಟಕನಾಳೆ ಮೈಸೂರಿನಲ್ಲಿ ‘ಕುವೆಂಪು ಕ್ರಾಂತಿ ಕಹಳೆ–50’ ಕಾರ್ಯಕ್ರಮ; ನಟ ಡಾಲಿ ಧನಂಜಯ್ ಭಾಗಿ

ನಾಳೆ ಮೈಸೂರಿನಲ್ಲಿ ‘ಕುವೆಂಪು ಕ್ರಾಂತಿ ಕಹಳೆ–50’ ಕಾರ್ಯಕ್ರಮ; ನಟ ಡಾಲಿ ಧನಂಜಯ್ ಭಾಗಿ

- Advertisement -
- Advertisement -

‘ಜಾಗೃತ ಕರ್ನಾಟಕ’ದ ವತಿಯಿಂದ ಕುವೆಂಪು ಅವರ ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಮತ್ತು ‘ವಿಚಾರ ಕ್ರಾಂತಿಗೆ ಆಹ್ವಾನ’ ಎಂಬ ಎರಡು ಯುಗಪ್ರವರ್ತಕ ಭಾಷಣಗಳಿಗೆ 50 ವರ್ಷ ತುಂಬುತ್ತಿರುವ ನೆನಪಿನಲ್ಲಿ ‘ಕುವೆಂಪು ಕ್ರಾಂತಿ ಕಹಳೆ – 50, ಕವಿವಾಣಿಯಿಂದ ಕರ್ನಾಟಕ ಮಾದರಿಯೆಡೆಗೆ’ ಹೆಸರಿನ ಕಾರ್ಯಕ್ರಮವನ್ನು ಫೆ.3ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

‘ಮಾಜಿ ಸಚಿವೆ, ಹಿರಿಯ ಲೇಖಕಿ ಬಿ.ಟಿ. ಲಲಿತಾ ನಾಯಕ್ ಕಾರ್ಯಕ್ರವನ್ನು ಉದ್ಘಾಟಿಸುತ್ತಾರೆ. ಸಾಂಸ್ಕೃತಿಕ ಚಿಂತಕರಾದ ಕೆ.ವಿ.ನಾರಾಯಣ ಅಧ್ಯಕ್ಷತೆ ವಹಿಸುವರು. ‘ಕುವೆಂಪುರವರ ಎರಡು ಮಹತ್ವದ ಭಾಷಣಗಳ ಸಮಕಾಲೀನ ಆಶಯ’ ಕುರಿತು ಸಾಹಿತಿ ಎಲ್.ಎನ್. ಮುಕುಂದರಾಜ್ ಪ್ರಧಾನ ಭಾಷಣ ಮಾಡುವರು.

ನಟ ಡಾಲಿ ಧನಂಜ ಭಾಗಿ:

ಯುವ ಸ್ಪಂದನೆ ಗೋಷ್ಠಿಯಲ್ಲಿ ಚಿತ್ರನಟ ಡಾಲಿ ಧನಂಜಯ್, ಡಾ.ಕಾವೇರಿ- ಕೊಡಗು, ಕಾವ್ಯಶ್ರೀ- ಬೆಂಗಳೂರು, ಬಾಲಾಜಿ ಕುಂಬಾರ್- ಔರಾದ್, ಡಾ.ಮುಸ್ತಫಾ ಕೆ.ಎಚ್- ಮಡಿಕೇರಿ, ಮೈಸೂರು ವಿ.ವಿ ಸಂಶೋಧಕರಾದ ಮಹೇಶ. ಸಿ ಮತ್ತು ಧನಲಕ್ಷ್ಮಿ ಭಾಗವಹಿಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹಾದೇವ, ಪ್ರೊ. ಜಯಪ್ರಕಾಶಗೌಡ ಮಂಡ್ಯ, ಚಿಂತಕ ಡಾ.ಕಾಳೇಗೌಡ ನಾಗವಾರ, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸ್ವಾಮಿ ಆನಂದ್, ಜಗದೀಶ್ ಕೊಪ್ಪ, ಗುರುರಾಜ್ ಮೈಸೂರು, ಪ್ರಭು ಬಿಸ್ಸೇಹಳ್ಳಿ, ಮಹೇಶ್ ಹರವೆ, ಸಬೀಹಾ ಭೂಮಿಗೌಡ, ಭೂಮಿಗೌಡ, ಮಧುಸೂದನ್ ಮೈಸೂರು, ಚಂದ್ರಶೇಖರ್ ಐಜೂರು, ಎಚ್ ಆರ್ ಸ್ವಾಮಿ, ಜಗದೀಶ್ ಜಾಣಜಾಣೆಯರು, ಧನಂಜಯ ಎಲಿಯೂರು, ಎಂ ಕೃಷ್ಣಮೂರ್ತಿ, ರಘೋತ್ತಮ ಹೊಬ, ವಿಎಲ್ ಬಾಲು ಬೆಂಗಳೂರು ಸೇರಿದಂತೆ ಹಲವರು ಭಾಗವಹಿಸುವರು.

ಇದನ್ನೂ ಓದಿ; ನ್ಯಾಷನಲ್ ಕಾಲೇಜು ಆಡಳಿತ ಮಂಡಳಿಯಿಂದ ದಲಿತ ವಿರೋಧಿ ನಡೆ; ಪರಿಶಿಷ್ಟ ಸಮುದಾಯದ ಪ್ರಾಧ್ಯಾಪಕರಿಗೆ ಹಿಂಬಡ್ತಿ ನೀಡಿ ಕಿರುಕುಳ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...