Homeಮುಖಪುಟಲಖೀಂಪುರ ರೈತರ ಹತ್ಯಾಕಾಂಡ: ಇಬ್ಬರು ರೈತರನ್ನು ಬಂಧಿಸಿದ SIT!

ಲಖೀಂಪುರ ರೈತರ ಹತ್ಯಾಕಾಂಡ: ಇಬ್ಬರು ರೈತರನ್ನು ಬಂಧಿಸಿದ SIT!

- Advertisement -
- Advertisement -

ಲಖಿಂಪುರ ಖೇರಿ ಹತ್ಯಾಕಾಂಡದಲ್ಲಿ ತನ್ನ ಪುತ್ರನ ಕೈವಾಡದ ಕುರಿತು ಒಕ್ಕೂಟ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳ ಕೂಗುಗಳ ನಡುವೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ಇಬ್ಬರು ರೈತರಾದ ಕಮಲ್‌ಜೀತ್ ಸಿಂಗ್ (29) ಮತ್ತು ಕವಾಲ್‌ಜೀತ್ ಸಿಂಗ್ ಸೋನು (35) ಅವರನ್ನು ಪ್ರಕರಣದಲ್ಲಿ ಬಂಧಿಸಿದೆ. ಅಕ್ಟೋಬರ್ 3, 2021 ರಂದು ನಡೆದ ಲಖೀಂಪುರ ಹಿಂಸಾಚಾರದ ಸಂದರ್ಭದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈದ ಆರೋಪಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.

ಎಸ್‌ಐಟಿ ಈ ಹಿಂದೆ ಬಿಡುಗಡೆ ಮಾಡಿದ ಶಂಕಿತರ ಚಿತ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಇವರಿಬ್ಬರು ಕಳೆದ ಎರಡು ತಿಂಗಳಿನಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿಗಳು ಕೋರಿದ್ದಾರೆ.

ಇದನ್ನೂ ಓದಿ:ಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ

ಮೂವರು ಬಿಜೆಪಿ ಕಾರ್ಯಕರ್ತರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ರೈತರನ್ನು ಬಂಧಿಸಲಾಗಿದೆ. ವಿಚಿತ್ರಾ ಸಿಂಗ್, ಗುರ್ವಿಂದರ್ ಸಿಂಗ್, ಅವತಾರ್ ಸಿಂಗ್ ಮತ್ತು ರಂಜೀತ್ ಸಿಂಗ್ ಅವರನ್ನು ಈ ವರ್ಷದ ಆರಂಭದಲ್ಲಿ ಬಂಧಿಸಲಾಗಿತ್ತು.

ಬಿಜೆಪಿ ಕಾರ್ಯಕರ್ತ ಸುಮಿತ್ ಜೈಸ್ವಾಲ್ ಅವರ ದೂರಿನ ಆಧಾರದ ಮೇಲೆ, ‘ಅಪರಿಚಿತ ರೈತರ’ ವಿರುದ್ಧ ಆರಂಭದಲ್ಲಿ ಕೊಲೆ ಮತ್ತು ಗಲಭೆ ಆರೋಪಗಳೊಂದಿಗೆ ಎಫ್‌ಐಆರ್ ದಾಖಲಿಸಲಾಗಿತ್ತು. ಹಿಂಸಾಚಾರದ ಸಮಯದಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತರ ಸಾವಿನ ಪ್ರಕರಣದಲ್ಲಿ ಸುಮಿತ್ ಸ್ವತಃ ಆಶಿಶ್ ಮಿಶ್ರಾ ಜೊತೆಗೆ ಸಹ ಆರೋಪಿಯಾಗಿದ್ದಾನೆ. ಆದಾಗ್ಯೂ, ಸುಮಿತ್ ದಾಖಲಿಸಿದ ಎಫ್‌ಐಆರ್‌ನಲ್ಲಿ ಆಶಿಶ್‌ ಮಿಶ್ರಾ ಬೆಂಗಾವಲು ಪಡೆಯಿಂದ ಹೊಡೆದುರುಳಿಸಲಾಗಿರುವ ಐವರ ಸಾವಿನ ಬಗ್ಗೆ ಉಲ್ಲೇಖಿಸಲಾಗಿಲ್ಲ.

ಇದನ್ನೂ ಓದಿ:ಲಖೀಂಪುರ್ ರೈತರ ಹತ್ಯೆ ಮತ್ತು ನಂತರದ ಘಟನೆಗಳ ಸುತ್ತ..

ರೈತರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೊದಲ ಎಫ್‌ಐಆರ್‌‌‌‌ ಅನ್ನು ಆಶಿಶ್ ಮತ್ತು ಇತರರ ವಿರುದ್ಧ ದಾಖಲಿಸಿದ್ದಾರೆ. ಘಟನೆಯನ್ನು ‘ಯೋಜಿತ’ ಎಂದು ಬಣ್ಣಿಸಿರುವ ಎಸ್‌ಐಟಿ ಆ ಪ್ರಕರಣದಲ್ಲಿ 13 ಜನರನ್ನು ಬಂಧಿಸಿದೆ.

ಸುಪ್ರೀಂ ಕೋರ್ಟ್ ನವೆಂಬರ್ 2021 ರಲ್ಲಿ ಎಸ್‌ಐಟಿಯನ್ನು ಪುನರ್‌ರಚಿಸಿತು. ಐಪಿಎಸ್ ಅಧಿಕಾರಿಗಳಾದ ಎಸ್‌ಬಿ ಶಿರಾದ್ಕರ್, ಪ್ರೀತಿಂದರ್ ಸಿಂಗ್ ಮತ್ತು ಪದ್ಮಜಾ ಚೌಹಾಣ್ ಜೊತೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರಾಕೇಶ್ ಕುಮಾರ್ ಜೈನ್ ಅವರನ್ನು ಹಿಂಸಾಚಾರದ ತನಿಖೆಗಾಗಿ ತಂಡಕ್ಕೆ ಸೇರಿಸಲಾಯಿತು.

ಇದನ್ನೂ ಓದಿ:ಲಖಿಂಪುರ್ ಖೇರಿ ಹತ್ಯಾಕಾಂಡ ಪೂರ್ವಯೋಜಿತವಾದುದು: SIT

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...