Homeಮುಖಪುಟಹೆಣ್ಣುಮಕ್ಕಳ ಮದುವೆ ವಯಸ್ಸು ಹೆಚ್ಚಿಸುವ ಮಸೂದೆ ಪರಿಶೀಲಿಸುವ 31 ಸದಸ್ಯರ ಸಮಿತಿಯಲ್ಲಿ ಕೇವಲ ಒಬ್ಬರೇ ಮಹಿಳೆ!

ಹೆಣ್ಣುಮಕ್ಕಳ ಮದುವೆ ವಯಸ್ಸು ಹೆಚ್ಚಿಸುವ ಮಸೂದೆ ಪರಿಶೀಲಿಸುವ 31 ಸದಸ್ಯರ ಸಮಿತಿಯಲ್ಲಿ ಕೇವಲ ಒಬ್ಬರೇ ಮಹಿಳೆ!

- Advertisement -
- Advertisement -

ಮಹಿಳೆಯರ ಕಾನೂನುಬದ್ಧ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಮಹತ್ವದ ಮಸೂದೆಯನ್ನು ಪರಿಶೀಲಿಸಲು 31 ಸದಸ್ಯರಿರುವ ಸಂಸದೀಯ ಸಮಿತಿಯನ್ನು ನಿಯೋಜಿಸಲಾಗಿದೆ. ಮಹಿಳೆಯೇ ಕೇಂದ್ರ ಬಿಂದುವಾಗಿರುವ ಮಸೂದೆಯ ಪರಿಶೀಲನಾ ಸಮಿತಿಯಲ್ಲಿ ಕೇವಲ ಒಬ್ಬ ಮಹಿಳಾ ಸಂಸದೆ ಮಾತ್ರ ಇದ್ದಾರೆ.

ಸಮಾಜದ ಮೇಲೆ ವಿಶೇಷವಾಗಿ ಮಹಿಳೆಯರ ಮೇಲೆ ವ್ಯಾಪಕ ಪರಿಣಾಮ ಬೀರುವ ‘ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ’ಯನ್ನು ಶಿಕ್ಷಣ, ಮಹಿಳೆ, ಮಕ್ಕಳು, ಯುವಜನ ಮತ್ತು ಕ್ರೀಡೆಗಳ ಸಂಸದೀಯ ಸ್ಥಾಯಿ ಸಮಿತಿಯನ್ನು ಉಲ್ಲೇಖಿಸಿ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಾಯೋಗಿಕವಾಗಿ ರೂಪಿಸಿದ ಮಸೂದೆಯು ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸಲು ಪ್ರಯತ್ನಿಸುತ್ತದೆ.

ಇದನ್ನೂ ಓದಿ:ಯುವತಿಯರ ವಿವಾಹ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಪ್ರಸ್ತಾಪಕ್ಕೆ ಸಂಪುಟ ಒಪ್ಪಿಗೆ: ವರದಿ

ರಾಜ್ಯಸಭಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯಂತೆ ಬಿಜೆಪಿಯ ಹಿರಿಯ ನಾಯಕ ವಿನಯ್ ಸಹಸ್ರಬುದ್ಧೆ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರ ಪಟ್ಟಿಯ ಪ್ರಕಾರ, 31 ಸದಸ್ಯರಲ್ಲಿ ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಏಕೈಕ ಮಹಿಳೆಯಾಗಿದ್ದಾರೆ.

ಸಮಿತಿಯಲ್ಲಿ ಹೆಚ್ಚು ಮಹಿಳಾ ಸಂಸದರಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಸುಶ್ಮಿತಾ ದೇವ್ ಹೇಳಿದ್ದಾರೆ.

“ಸಮಿತಿಯಲ್ಲಿ ಹೆಚ್ಚಿನ ಮಹಿಳಾ ಸಂಸದರು ಇರಬೇಕೆಂದು ನಾನು ಬಯಸುತ್ತೇನೆ. ಆದರೆ ನಾವು ಎಲ್ಲರ ಹಿತಾಸಕ್ತಿಗಳನ್ನು ಕೇಳುತ್ತೇವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಸುಸ್ಮಿತಾ ದೇವ್‌ ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ.

ಇದನ್ನೂ ಓದಿ:ವಿವಾಹೇತರ ಸಂಬಂಧ ಆರೋಪ; ಮಹಿಳೆಯನ್ನು ಕಂಬಕ್ಕೆ ಕಟ್ಟಿ ಚಿತ್ರಹಿಂಸೆ- ವಿಡಿಯೊ ವೈರಲ್‌, ಪ್ರಕರಣ ದಾಖಲು

ಇದೇ ರೀತಿಯಲ್ಲಿ ಮಾತನಾಡಿರುವ ಸಂಸದೆ ಸುಪ್ರಿಯಾ ಸುಳೆ, “ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸುವ ಸಮಿತಿಯಲ್ಲಿ ಹೆಚ್ಚಿನ ಮಹಿಳಾ ಸಂಸದರು ಇರಬೇಕಿತ್ತು” ಎಂದು ಹೇಳಿದ್ದಾರೆ. ಎನ್‌ಸಿಪಿಯ ಸಂಸದೆಯಾಗಿರುವ ಸುಪ್ರಿಯಾ ಸುಳೆ ಸಂಸತ್ತಿನಲ್ಲಿ ಮಹಿಳಾ ಕೇಂದ್ರಿತ ವಿಷಯಗಳನ್ನೇ ಹೆಚ್ಚಾಗಿ ಪ್ರಸ್ತಾಪಿಸುತ್ತಾರೆ.

ಆದಾಗ್ಯೂ, ಸಮಿತಿಯ ಮುಂದೆ ಜನರನ್ನು ಆಹ್ವಾನಿಸಲು ಅಧ್ಯಕ್ಷರಿಗೆ ಅಧಿಕಾರವಿದೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ, ಹೆಚ್ಚಿನ ಚರ್ಚೆಗಳಿಗಾಗಿ ಅವರು ಇತರ ಮಹಿಳಾ ಸಂಸದರನ್ನು ಆಹ್ವಾನಿಸಬಹುದು ಎಂದು ಆಶಿಸಿದ್ದಾರೆ.

ಇಲಾಖೆ-ಸಂಬಂಧಿತ ಸ್ಥಾಯಿ ಸಮಿತಿಗಳು ಶಾಶ್ವತವಾಗಿದ್ದಾಗಿದ್ದು, ವಿವಿಧ ಸಚಿವಾಲಯಗಳ ಮಸೂದೆಗಳು ಮತ್ತು ಸಂಬಂಧಿತ ವಿಷಯಗಳನ್ನು ವ್ಯವಹರಿಸಲು ಜಂಟಿ ಮತ್ತು ಆಯ್ಕೆ ಸಮಿತಿಗಳನ್ನು ಕಾಲಕಾಲಕ್ಕೆ ರಚಿಸಲಾಗುತ್ತದೆ.

ಇದನ್ನೂ ಓದಿ:ದೆಹಲಿ ಹೈಕೋರ್ಟ್‌ನಲ್ಲಿ ಸಲಿಂಗ ವಿವಾಹವನ್ನು ವಿರೋಧಿಸಿದ ಒಕ್ಕೂಟ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...