Homeಮುಖಪುಟಪ್ರವಾಸಿಗರ ಹರಿವು ತಡೆದುಕೊಳ್ಳುವ ಶಕ್ತಿ ಲಕ್ಷದ್ವೀಪಕ್ಕೆ ಇಲ್ಲ: ವಸ್ತುಸ್ಥಿತಿ ಬಿಚ್ಚಿಟ್ಟ ಸಂಸದ ಫೈಝಲ್

ಪ್ರವಾಸಿಗರ ಹರಿವು ತಡೆದುಕೊಳ್ಳುವ ಶಕ್ತಿ ಲಕ್ಷದ್ವೀಪಕ್ಕೆ ಇಲ್ಲ: ವಸ್ತುಸ್ಥಿತಿ ಬಿಚ್ಚಿಟ್ಟ ಸಂಸದ ಫೈಝಲ್

- Advertisement -
- Advertisement -

ಮಾಲ್ಡೀವ್ಸ್‌ ವಿರೋಧಿ ಅಲೆ ಭಾರತದಲ್ಲಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಪ್ರವಾಸಿಗರು ಮಾಲ್ಡೀವ್ಸ್‌ ಬದಲು ನಮ್ಮದೇ ಭಾರತದ ಲಕ್ಷದ್ವೀಪಕ್ಕೆ ತೆರಳಿ ಎಂಬ ಅಭಿಯಾನವೇ ಆರಂಭವಾಗಿದೆ. ‘ಚಲೋ ಲಕ್ಷದ್ವೀಪ್’ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ.

ಈ ನಡುವೆ ಲಕ್ಷದ್ವೀಪದ ಏಕೈಕ ಸಂಸದ ಮೊಹಮ್ಮದ್ ಫೈಝಲ್ ಅವರು ಲಕ್ಷದ್ವೀಪದ ವಸ್ತುಸ್ಥಿತಿಯನ್ನು ತೆರದಿಟ್ಟಿದ್ದು, ಸೀಮಿತ ವಿಮಾನಗಳು ಮತ್ತು ಕೇವಲ 150 ಹೋಟೆಲ್ ಕೊಠಡಿಗಳಿರುವ ದ್ವೀಪಕ್ಕೆ ಹೆಚ್ಚಿನ ಪ್ರವಾಸಿಗರು ಬರುವುದು ಮತ್ತು ತಂಗುವುದು ಆಸಾಧ್ಯ ಎಂದಿದ್ದಾರೆ.

“ಲಕ್ಷದ್ವೀಪ ಹವಳದಿಂದ ರಚಿಸಲ್ಪಟ್ಟಿದೆ. ಇದು ಅತ್ಯಂತ ಸೂಕ್ಷ್ಮ ಮತ್ತು ಪರಿಸರದ ವಿಷಯದಲ್ಲಿ ಬಹಳ ದುರ್ಬಲವಾಗಿದೆ”. ಹೆಚ್ಚಿನ ಪ್ರವಾಸಿಗರು ಬಂದರೆ ತಡೆದುಕೊಳ್ಳುವ ಶಕ್ತಿ ಈ ದ್ವೀಪಗಳಿಗೆ ಇಲ್ಲ
ಎಂದು ಎನ್‌ಡಿ ಟಿವಿ ಜೊತೆ ಮಾತನಾಡುವ ವೇಳೆ ಫೈಝಲ್ ಕಳವಳ ವ್ಯಕ್ತಪಡಿಸಿದ್ದಾರೆ.

“ಲಕ್ಷದ್ವೀಪದ ಸಾಮಾರ್ಥ್ಯದ ಬಗ್ಗೆ ತಿಳಿದುಕೊಳ್ಳಲು ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡ ನ್ಯಾಯಮೂರ್ತಿ ರವೀಂದ್ರನ್ ಆಯೋಗವು “ಸಮಗ್ರ ದ್ವೀಪ ನಿರ್ವಹಣಾ ಯೋಜನೆ” ಯನ್ನು ರೂಪಿಸಿದೆ. ದ್ವೀಪದಲ್ಲಿ ರಸ್ತೆ, ಜೆಟ್ಟಿಗಳು ಸೇರಿದಂತೆ ಇತರ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇದು ಒಂದು ಮೂಲ ‘ಅಭಿವೃದ್ಧಿ ಬೈಬಲ್’ (ಮೂಲ ರೂಪುರೇಷೆ) ಆಗಿದೆ. ರವೀಂದ್ರನ್ ಆಯೋಗದ ವರದಿಯು ಪ್ರವಾಸಿಗರನ್ನು ಸ್ವೀಕರಿಸಬಹುದಾದ ದ್ವೀಪದ ಸಾಮಾರ್ಥ್ಯದ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ ಎಂದು ಫೈಝಲ್ ತಿಳಿಸಿದ್ದಾರೆ.

ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಪಡಿಸುವುದಾದರೂ, ಅದಕ್ಕೊಂದು ನಿಯಂತ್ರಣ ವ್ಯವಸ್ಥೆ ಬೇಕಿದೆ. ಅತ್ಯಂತ ನಿಯಂತ್ರಿತ ಪ್ರವಾಸೋದ್ಯಮದಿಂದ ಗರಿಷ್ಠ ಆದಾಯವನ್ನು ಸಂಗ್ರಹಿಸಲು ಯೋಜನೆ ರೂಪಿಸಬೇಕಿದೆ. ಬರುವ ಪ್ರವಾಸಿಗರು ಕೂಡ ಪರಿಸರದ ಬಗ್ಗೆ ಸಂಪೂರ್ಣ ಕಾಳಜಿ ಹೊಂದಿರಬೇಕು ಎಂದು ಫೈಝಲ್ ಹೇಳಿದ್ದಾರೆ.

ಮಾಲ್ಡೀವ್ಸ್‌ ಅನ್ನು ವಿರೋಧಿಸುವ ಭರದಲ್ಲಿ ಎಲ್ಲರೂ ಲಕ್ಷದ್ವೀಪದ ಕಡೆ ಬೊಟ್ಟು ಮಾಡುತ್ತಿದ್ದಾರೆ. ಜನರಿಗೆ ಲಕ್ಷದ್ವೀಪದ ಮೇಲಿನ ಪ್ರೀತಿ ಉಕ್ಕಿ ಬಂದಿದೆ. ಆದರೆ, ಲಕ್ಷದ್ವೀಪಗಳ ಒಟ್ಟು 36 ದ್ವೀಪಗಳಲ್ಲಿ ಕೇವಲ 10 ದ್ವೀಪಗಳಲ್ಲಿ ಮಾತ್ರ ಜನವಸತಿ ಇದೆ. ಪ್ರವಾಸಿಗರು ಬಂದರೂ ಈ ದ್ವೀಪಗಳಿಗೇ ಬರಬೇಕು. ಪ್ರಸ್ತುತ ಲಕ್ಷದ್ವೀಪದ ಜನಸಂಖ್ಯೆಯ ಶೇಕಡಾ 8-10ರಷ್ಟು ಜನರು ಮಾತ್ರ ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ ಎಂದು ಫೈಝಲ್ ತಿಳಿಸಿದ್ದಾರೆ.

ಮಾಲ್ಡೀವ್ಸ್‌ ಸಚಿವರು ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಭಾರತದ ರಾಜಕಾರಣಿಗಳು, ಸೆಲೆಬ್ರೆಟಿಗಳು ಮತ್ತು ಸಾಮಾನ್ಯ ಜನರಿಗೆ ಒಂದೇ ಸಮನೆ ಲಕ್ಷದ್ವೀಪದ ಮೇಲಿನ ಪ್ರೀತಿ ಒಂದೇ ಸಮನೆ ಉಕ್ಕಿ ಬಂದಿದೆ. ಆದರೆ, ಇವರು ಯಾರಿಗೂ ದ್ವೀಪದ ವಸ್ತುಸ್ಥಿತಿ ಗೊತ್ತಿಲ್ಲ. ಪ್ರವಾಸೋಧ್ಯಮ ಅಭಿವೃದ್ದಿ ಎಂದು ಹೇಳುವಾಗ ದ್ವೀಪದ ಜನರು ಭಯಪಡುತ್ತಿದ್ದಾರೆ ಎಂದು ಸಂಸದ ಫೈಝಲ್ ತನ್ನ ಊರಿನ ಕುರಿತು ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯ ಸೇನೆ ವಾಪಸ್‌ಗೆ ಮಾರ್ಚ್‌ 15ರ ಗಡುವು ನೀಡಿದ ಮಾಲ್ಡೀವ್ಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...