Portrait an unknown male doctor holding a stethoscope behind

ಜಾಗತಿಕವಾಗಿ ಯಾವ ಗುಂಪಿನ ಜನರು ಹೆಚ್ಚು ವಿಶ್ವಾಸಾರ್ಹರು ಹಾಗೂ ಕಡಿಮೆ ವಿಶ್ವಾಸಾರ್ಹರು ಎಂದು ಸರ್ವೇ ಮಾಡಿರುವ ಅಂತಾರಾಷ್ಟ್ರೀಯ ಡೇಟಾ ಸಂಸ್ಥೆಯಾದ ‘ಸ್ಟ್ಯಾಟಿಸ್ಟಾ’ ವರದಿಯನ್ನು ಬಹಿರಂಗಪಡಿಸಿದೆ.

www.statista.comನಲ್ಲಿ ವರದಿ ಬಿಡುಗಡೆ ಮಾಡಲಾಗಿದ್ದು, ಅತಿಹೆಚ್ಚು ವಿಶ್ವಾಸಾರ್ಹ ಮನುಷ್ಯರೆಂದರೆ ವೈದ್ಯರು, ಅತ್ಯಂತ ಕಡಿಮೆ ವಿಶ್ವಾಸಾರ್ಹರೆಂದರೆ ರಾಜಕಾರಣಿಗಳು ಎಂದು ವರದಿ ಹೇಳಿದೆ. ಡೇಟಾ ಜರ್ನಲಿಸ್ಟ್‌ ಮಾರ್ಟಿನ್ ಆರ್ಮ್‌ಸ್ಟ್ರಾಂಗ್ ವರದಿಯನ್ನು ಬರೆದಿದ್ದಾರೆ.

ವೈದ್ಯಕೀಯ ವೃತ್ತಿಪರರು ನಿಜವಾಗಿಯೂ ವಿಶ್ವದ ಅತ್ಯಂತ ವಿಶ್ವಾಸಾರ್ಹ ಗುಂಪು. ಒಟ್ಟು 64 ಪ್ರತಿಶತದಷ್ಟು ಜನರು ವೈದ್ಯರು ನಂಬಲರ್ಹರು ಎಂದು ಭಾವಿಸುತ್ತಾರೆ, ಆದರೆ ಕೇವಲ 10 ಪ್ರತಿಶತದಷ್ಟು ಜನರು ಅವರನ್ನು ನಂಬುವುದಿಲ್ಲ. 54 ಪ್ರತಿಶತದಷ್ಟು ನಿವ್ವಳ ನಂಬಿಕೆಯನ್ನು ವೈದ್ಯರ ಕುರಿತು ಕಾಣಬಹುದು. ವಿಜ್ಞಾನಿಗಳು 51 ಪ್ರತಿಶತದಷ್ಟು ನಿವ್ವಳ ವಿಶ್ವಾಸಾರ್ಹತೆ ಹೊಂದಿದ್ದರೆ, ಶಿಕ್ಷಕರು 43 ಪ್ರತಿಶತದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

-52 ಪ್ರತಿಶತದಷ್ಟು ನಿವ್ವಳ ವಿಶ್ವಾಸಾರ್ಹತೆಯನ್ನು ರಾಜಕಾರಣಿಗಳು ಹೊಂದಿದ್ದು, ಅತ್ಯಂತ ಕಡಿಮೆ ವಿಶ್ವಾಸಾರ್ಹರಾಗಿ ಹೊಮ್ಮಿದ್ದಾರೆ. “ಭಾರತ ಹಾಗೂ ಮಲೇಷಿಯದಲ್ಲಿ ಅತಿಹೆಚ್ಚು ಜನರು ರಾಜಕಾರಣಿಗಳನ್ನು ನಂಬುತ್ತಾರೆ” ಎಂದು ಸಮೀಕ್ಷೆ ಉಲ್ಲೇಖಿಸಿದೆ.

ರಾಜಕಾರಣಿಗಳ ಮೇಲೆ ಶೇ. 18ರಷ್ಟು ನಂಬಿಕೆಯನ್ನು ಮಲೇಷಿಯನ್ನರು, ಶೇ. 19ರಷ್ಟು ನಂಬಿಕೆಯನ್ನು ಭಾರತೀಯರು ಹೊಂದಿದ್ದಾರೆ. ಅರ್ಜೆಂಟೀನಾ ಹಾಗೂ ಕೊಲಂಬಿಯ ರಾಷ್ಟ್ರಗಳಲ್ಲಿ ರಾಜಕಾರಣಿಗಳನ್ನು ಜನರು ಅತ್ಯಂತ ಕಡಿಮೆ ನಂಬುತ್ತವೆ. ಕ್ರಮವಾಗಿ – 3 ಮತ್ತು 4ರಷ್ಟು ನಂಬಿಕೆಯನ್ನು ಈ ರಾಷ್ಟ್ರಗಳಲ್ಲಿ ಕಾಣಬಹುದು ಎಂದು ಸಮೀಕ್ಷೆ ತಿಳಿಸಿದೆ.

ಎಲ್ಲಾ ವರ್ಗಗಳ ಪ್ರತಿಕ್ರಿಯೆಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ಮಲೇಷ್ಯಾ ಮತ್ತು ಭಾರತವು ವಾಸ್ತವವಾಗಿ ಸಮೀಕ್ಷೆಯಲ್ಲಿ ಅತಿ ಹೆಚ್ಚು ವಿಶ್ವಾಸವನ್ನು ಹೊಂದಿರುವ ರಾಷ್ಟ್ರಗಳಾಗಿವೆ. ಕೊಲಂಬಿಯಾ ಮತ್ತು ಚಿಲಿ ರಾಷ್ಟ್ರಗಳು ಸಮೀಕ್ಷೆಗಳ ಕುರಿತು ಅತ್ಯಂತ ಕಡಿಮೆ ವಿಶ್ವಾಸ ಹೊಂದಿವೆ.

ಹೆಚ್ಚು ವಿಶ್ವಾಸಾರ್ಹರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ವೈದ್ಯರು (ಶೇ.54 ನಿವ್ವಳ ಅಂಕ), ಎರಡನೇಯವರಾಗಿ ವಿಜ್ಞಾನಿಗಳು (ಶೇ.51), ಮೂರನೇ ಸ್ಥಾನದಲ್ಲಿ ಶಿಕ್ಷಕರು (ಶೇ.43), ನಾಲ್ಕನೇ ಸ್ಥಾನದಲ್ಲಿ ಸಾಮಾನ್ಯ ಜನರು (ಶೇ. 27), ಐದನೇ ಸ್ಥಾನದಲ್ಲಿ ಸೇನಾ ಬಲ (ಶೇ. 22) ಇರುವುದನ್ನು ಕಾಣಬಹುದು.

ಕಡಿಮೆ ವಿಶ್ವಾಸಾರ್ಹರ ಸಾಲಿನಲ್ಲಿ ತಕ್ಕಮಟ್ಟಿಗೆ ನಂಬಬಹುದಾದವರಲ್ಲಿ ಪತ್ರಕರ್ತರು ಮೊದಲಿದ್ದಾರೆ. ಶೇ. -10ರಷ್ಟು ಅಂಕಗಳನ್ನು ಪತ್ರಕರ್ತರಿಗೆ ನೀಡಲಾಗಿದೆ. ನಂತರದಲ್ಲಿ ಬ್ಯಾಂಕರ್ಸ್‌ (ಶೇ.-11), ಜಾಹೀರಾತುದಾರರು (ಶೇ. -22), ಸರ್ಕಾರಿ ಸಚಿವರು (ಶೇ.-39), ಸಾಮಾನ್ಯ ರಾಜಕಾರಣಿಗಳು (ಶೇ. -52) ಇದ್ದಾರೆ.


ಇದನ್ನೂ ಓದಿರಿ: ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಲು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಒತ್ತಾಯ

LEAVE A REPLY

Please enter your comment!
Please enter your name here