Homeಕರ್ನಾಟಕನಮ್ಮ ವೈಫಲ್ಯದಿಂದಾಗಿ ಕೆಲವರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ: ಸದಾನಂದಗೌಡ

ನಮ್ಮ ವೈಫಲ್ಯದಿಂದಾಗಿ ಕೆಲವರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ: ಸದಾನಂದಗೌಡ

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ಕೆಲವು ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದು ನಮ್ಮ ವೈಫಲ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಡಿ.ವಿ. ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲಿನ ನಂತರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಪಕ್ಷ ಕಟ್ಟಿವಲ್ಲಿ ವಿಫಲವಾಗಿದ್ದೇವೆ” ಎಂದು ಹೇಳಿದರು.

”ನಮ್ಮ ಕೆಲವು ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದು ನಮ್ಮ ವೈಫಲ್ಯವಾಗಿದೆ. ಸೋಲಿನ ನಂತರ ಪಕ್ಷ ಕಟ್ಟುವಲ್ಲಿ ನಾವು ವಿಫಲವಾಗಿದ್ದೇವೆ. ಅದರಿಂದಾಗಿಯೇ ನಾಯಕರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ” ಎಂದರು.

ನಮ್ಮವರು ಅನೇಕರು ಬಿಜೆಪಿ ಬಿಟ್ಟು ಹೋಗುತ್ತಿರುವುದು ನಿಜ, ಅವರನ್ನು ಮನವರಿಕೆ ಮಾಡಿ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ ಎಂದ ಅವರು, ನಮ್ಮ ಶಾಸಕರ ಅನುದಾನ ವಾಪಸ್ ಪಡೆದಿರೋದು ಸರಿಯಲ್ಲ. ಅನುದಾನ ವಾಪಸ್ಸು ಪಡೆದಿರುವ ಹಿಂದೆ ಕಮಿಷನ್ ಪಡೆಯುವ ಉದ್ದೇಶವಿದೆ. ಇನ್ನೂ ಹೆಚ್ಚಿನ ಕಮಿಷನ್ ಪಡೆಯುವ ಸಲುವಾಗಿ ಶಾಸಕರ ಅನುದಾನ ವಾಪಸ್ಸು ಪಡೆದಿರಬಹುದು ಎಂದು ದೂರಿದರು.

ಇದನ್ನೂ ಓದಿ: ‘ಮಾಟ ಮಂತ್ರದಿಂದಲೇ‌ ನಾವು ಸೋತಿದ್ದು’: ಜೆಡಿಎಸ್ ಮುಖಂಡ ಬಂಡೆಪ್ಪ ಕಾಶಂಪೂರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...