Homeಮುಖಪುಟಎಡಪಕ್ಷಗಳು ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುತ್ತಿವೆ: ಶಶಿ ತರೂರ್

ಎಡಪಕ್ಷಗಳು ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುತ್ತಿವೆ: ಶಶಿ ತರೂರ್

- Advertisement -
- Advertisement -

ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಎಡಪಕ್ಷಗಳು ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುತ್ತಿವೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್, ‘ಎಡಪಕ್ಷಗಳು ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ತುಂಬಾ ಕಾಳಜಿ ವಹಿಸುತ್ತವೆ ಎಂದು ಹೇಳಿಕೊಂಡರೂ, ತನ್ನ ಹೆಚ್ಚಿನ ಶಕ್ತಿಯನ್ನು ಬಿಜೆಪಿಯ ದುರಾಡಳಿತದ ಬಗ್ಗೆ ಕೇಂದ್ರೀಕರಿಸುವ ಬದಲು, ದುರ್ಬಲಗೊಳಿಸಲು ಏಕೆ ವಿನಿಯೋಗಿಸುತ್ತಿದೆ ಎಂಬುದನ್ನು ತಿಳಿಸಲು ವಿಫಲವಾಗಿದೆ’ ಎಂದು ಹೇಳಿದ್ದಾರೆ.

ಕೇರಳದ ತಿರುವನಂತಪುರದಲ್ಲಿ ಬಿಜೆಪಿ ನಾಯಕ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಸಿಪಿಐನ ಪನ್ಯನ್ ರವೀಂದ್ರನ್ ಅವರೊಂದಿಗೆ ತ್ರಿಕೋನ ಸ್ಪರ್ಧೆಯಲ್ಲಿ ಸಿಲುಕಿರುವ ತರೂರ್, ಸಂಸತ್ತಿನ ಸ್ಥಾನದಲ್ಲಿ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಲು ಎಡಪಕ್ಷಗಳು ಪ್ರಯತ್ನಿಸುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ‘ನನ್ನ ವಿರುದ್ಧ ಅಭ್ಯರ್ಥಿಯನ್ನು ಹಾಕುವುದನ್ನು ಎಡಪಕ್ಷವು ಪ್ರತಿ ಬಾರಿಯೂ ಮಾಡುತ್ತದೆ; ಅದಕ್ಕಾಗಿ ಅವರನ್ನು ಟೀಕಿಸಲು ಸಾಧ್ಯವಿಲ್ಲ. ಏಕೆಂದರೆ, ನಾನು 2009 ರಲ್ಲಿ ಮೊದಲ ಸಲ ಅವರಿಂದ ಸ್ಥಾನ ಪಡೆದುಕೊಂಡೆ’ ಎಂದು ಹೇಳಿದ್ದಾರೆ.

“ಎಡ ಕ್ಷವು ಅವರ ಸಂಪೂರ್ಣ ಅಭಿಯಾನವನ್ನು ನನ್ನ ಮೇಲೆ ದಾಳಿ ಮಾಡಲು ಮೀಸಲಿಡುವುದು ಬಿಜೆಪಿಗೆ ಸಹಾಯ ಮಾಡುವ ತಂತ್ರವಾಗಿದೆ. ಎಡಪಕ್ಷಗಳು ವಿರೋಧ ಪಕ್ಷದ ಒಗ್ಗಟ್ಟಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತವೆ ಎಂದು ಹೇಳಿಕೊಳ್ಳುತ್ತವೆ. ಆದರೆ, ಬಿಜೆಪಿಯ ದುರಾಡಳಿತದ ಮೇಲೆ ಕೇಂದ್ರೀಕರಿಸುವ ಬದಲು ಏಕೆ ಎಂದು ತಿಳಿಸಲು ವಿಫಲವಾಗಿದೆ. ಅವರು ತಮ್ಮ ಹೆಚ್ಚಿನ ಶಕ್ತಿಯನ್ನು ನನ್ನನ್ನು ದುರ್ಬಲಗೊಳಿಸಲು ವಿನಿಯೋಗಿಸುತ್ತಿದ್ದಾರೆ” ಎಂದು ತರೂರ್ ಹೇಳಿದರು.

“ಉದ್ದೇಶಪೂರ್ವಕವಾಗಿ ಅಥವಾ ಬೇರೆ ರೀತಿಯಲ್ಲಿ, ಅವರ ಪ್ರಚಾರವು ಸಂಪೂರ್ಣವಾಗಿ ನನ್ನ ವಿರುದ್ಧವಾಗಿದೆ. ಉದಾಹರಣೆಗೆ, ಪ್ಯಾಲೆಸ್ತೀನ್ ವಿರೋಧಿ ಮತ್ತು ಮುಸ್ಲಿಂ ವಿರೋಧಿ ಎಂದು ಆರೋಪಿಸಿ, ಇದು ಸಂಪೂರ್ಣ ಅಸಂಬದ್ಧವಾಗಿದೆ. ವಿಪರ್ಯಾಸವೆಂದರೆ, ಅವರು ಇಲ್ಲಿ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಲು ಮತ್ತು ಬೋಧಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದರು.

ಕ್ಷೇತ್ರದಲ್ಲಿರುವ ತನ್ನ ಪ್ರತಿಸ್ಪರ್ಧಿಗಳೊಂದಿಗೆ ನಾನು ಚರ್ಚೆಯನ್ನು ಬಯಸುತ್ತಿದ್ದೇನೆ. ಆದರೆ, ಅವರ ಕಡೆಯಿಂದ ತೊಡಗಿಸಿಕೊಳ್ಳಲು “ಇಷ್ಟವಿಲ್ಲ” ಎಂದು ತೋರುತ್ತಿದೆ. ಅವರು ವಿವಿಧ ಸಂಘಟನೆಗಳಿಂದ ಚರ್ಚೆಗೆ ಅನೇಕ ಆಹ್ವಾನಗಳನ್ನು ತಿರಸ್ಕರಿಸಿದ್ದಾರೆ ಎಂದು ತರೂರ್ ಹೇಳಿದರು.

“ಅವರಿಗೆ ಹಿಂಜರಿಕೆ ಎಲ್ಲಿಂದ ಬರುತ್ತದೆ ಎಂದು ನನಗೆ ತಿಳಿದಿಲ್ಲ. ನಾನು ನನಗಾಗಿ ಮಾತ್ರ ಮಾತನಾಡಬಲ್ಲೆ: ಯಾವುದೇ ಚರ್ಚೆಯಲ್ಲಿ ನನ್ನದೇ ಆದದನ್ನು ಹಿಡಿದಿಟ್ಟುಕೊಳ್ಳುವ ನನ್ನ ವಿಶ್ವಾಸವು ನನ್ನ ಮತದಾರರಿಗಾಗಿ ನಾನು ಮಾಡಿದ ಕೆಲಸ ಮತ್ತು ರಾಷ್ಟ್ರೀಯ, ಜಾಗತಿಕ ಸಮಸ್ಯೆಗಳ ಬಗ್ಗೆ ನಾನು ತೆಗೆದುಕೊಂಡಿರುವ ನಿಲುವುಗಳಿಂದ ಉಂಟಾಗುತ್ತದೆ” ಎಂದು ತಿಳಿಸಿದರು.

“ರಾಜಕೀಯ ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡೋಣ. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಕೋಮುವಾದ ಮತ್ತು ಬಿಜೆಪಿಯ 10 ವರ್ಷಗಳ ದ್ವೇಷದ ರಾಜಕಾರಣದ ಬಗ್ಗೆ ಚರ್ಚೆ ಮಾಡೋಣ. ತಿರುವನಂತಪುರಂನ ಅಭಿವೃದ್ಧಿ ಮತ್ತು ಕಳೆದ 15 ರಲ್ಲಿ ನಾವು ಮಾಡಿದ ಗೋಚರ ಪ್ರಗತಿಯ ಬಗ್ಗೆಯೂ ಚರ್ಚಿಸೋಣ” ಎಂದರು.

ಇದನ್ನೂ ಓದಿ; ಮಾಂಸಹಾರ ಸೇವಿಸಿದ್ದ ವಿಪಕ್ಷ ನಾಯಕರನ್ನು ಮೊಘಲರಿಗೆ ಹೋಲಿಸಿದ ಪ್ರಧಾನಿ; ವೈಯಕ್ತಿಕ ಟೀಕೆಗಿಳಿದ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...