Homeಮುಖಪುಟಮಾಂಸಹಾರ ಸೇವಿಸಿದ್ದ ವಿಪಕ್ಷ ನಾಯಕರನ್ನು ಮೊಘಲರಿಗೆ ಹೋಲಿಸಿದ ಪ್ರಧಾನಿ; ವೈಯಕ್ತಿಕ ಟೀಕೆಗಿಳಿದ ಮೋದಿ

ಮಾಂಸಹಾರ ಸೇವಿಸಿದ್ದ ವಿಪಕ್ಷ ನಾಯಕರನ್ನು ಮೊಘಲರಿಗೆ ಹೋಲಿಸಿದ ಪ್ರಧಾನಿ; ವೈಯಕ್ತಿಕ ಟೀಕೆಗಿಳಿದ ಮೋದಿ

- Advertisement -
- Advertisement -

‘ಶ್ರಾವಣ ಮಾಸದಲ್ಲಿ ಕುರಿ ಮಾಂಸ ತಿಂದಿದ್ದಾರೆ’ ಎಂಬ ಕಾರಣಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಮೊಘಲರಿಗೆ ಹೋಲಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ವೈಯಕ್ತಿಯ ವಿಚಾರಗಳನ್ನು ಇಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ.

‘ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ದೇಶದಾದ್ಯಂತ ಜಾತಿ ಗಣತಿ ನಡೆಸುತ್ತೇವೆ’ ಎಂಬ ಕಾಂಗ್ರೆಸ್ ಭರವಸೆಯನ್ನು ಮುಸ್ಲಿಂ ಲೀಗ್‌ ಚಿಂತನೆಗಳಿಗೆ ಹೋಲಿಸಿದ್ದ ಪ್ರಧಾನಿ ಮೋದಿ, ಇದೀಗ ರಾಹುಲ್ ಮತ್ತು ಲಾಲು ಅವರ ಆಹಾರ ಸಂಸ್ಕೃತಿಯನ್ನೂ ತಮ್ಮ ಚುನಾವಣಾ ಪ್ರಚಾರದ ವೇದಿಕೆಗಳಲ್ಲಿ ಟೀಕಿಸಿದ್ದಾರೆ.

‘ಶ್ರಾವಣ ಮಾಸದಲ್ಲಿ ಕುರಿ ಮಾಂಸ ತಿಂದಿದ್ದಾರೆ; ಅವರು  ಬಹುಸಂಖ್ಯಾತರ ಭಾವನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಇಬ್ಬರು ನಾಯಕರ ಹೆಸರನ್ನು ನೇರವಾಗಿ ಹೇಳದೆ ಟೀಕೆ ಮಾಡಿರುವ ಮೋದಿ, ಇಬ್ಬರನ್ನೂ ಮೊಘಲರೊಂದಿಗೆ ಹೋಲಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ, ರಾಹುಲ್ ಮತ್ತು ಲಾಲು ಅವರು ಅಡುಗೆ ಮಾಡುವ ವೀಡಿಯೊ ಸಾಕಷ್ಟು ವೈರಲ್ ಆಗಿತ್ತು.

“ಕಾಂಗ್ರೆಸ್ ಮತ್ತು ಇಂಡಿಯಾ ಮುಖಂಡರು ದೇಶದ ಬಹುಪಾಲು ಜನರ ಭಾವನೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವರು ಜನರ ಭಾವನೆಗಳೊಂದಿಗೆ ಆಟವಾಡುವುದನ್ನು ಆನಂದಿಸುತ್ತಾರೆ. ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಮತ್ತು ಜಾಮೀನಿನ ಮೇಲೆ ಇರುವ ವ್ಯಕ್ತಿ ಅವರು, ಅಂತಹ ಅಪರಾಧಿಯ ಮನೆಗೆ ಭೇಟಿ ನೀಡುತ್ತಾರೆ ಮತ್ತು ಶ್ರಾವಣ ಮಾಸದಲ್ಲಿ ಕುರಿ ಮಾಂಸವನ್ನು ಬೇಯಿಸುತ್ತಾರೆ. ದೇಶದ ಜನರನ್ನು ಕೀಟಲೆ ಮಾಡಲು ಅವರು ಅದನ್ನು ವೀಡಿಯೊ ಮಾಡುತ್ತಾರೆ” ಎಂದು ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದರು.

“ಈ ಜನರ ಉದ್ದೇಶಗಳು ದೇಶದ ಜನರನ್ನು ಮೊಘಲರಂತೆಯೇ ಕೀಟಲೆ ಮಾಡುವುದು. ಕಾನೂನು ಯಾರನ್ನೂ ತಿನ್ನುವುದನ್ನು ತಡೆಯುವುದಿಲ್ಲ. ಆದರೆ, ಈ ಜನರ ಉದ್ದೇಶಗಳು ಬೇರೇನೋ, ಮೊಘಲರು ಇಲ್ಲಿ ದಾಳಿ ಮಾಡಿದಾಗ, ಅವರು ದೇವಾಲಯಗಳನ್ನು ಕೆಡವುವವರೆಗೂ ಅವರು ತೃಪ್ತಿ ಹೊಂದಲಿಲ್ಲ, ಅವರು ಮೊಘಲರಂತೆಯೇ, ಶ್ರಾವಣ ಮಾಸದಲ್ಲಿ ವೀಡಿಯೋ ತೋರಿಸುವ ಮೂಲಕ ದೇಶದ ಜನರನ್ನು ಲೇವಡಿ ಮಾಡಲು ಬಯಸುತ್ತಾರೆ” ಎಂದು ಟೀಕಿಸಿದ್ದಾರೆ.

ಅಯೋಧ್ಯೆ ರಾಮನ ಮಂದಿರದ ವಿಚಾರವಾಗಿಯೂ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. “ಬಿಜೆಪಿಗೆ ರಾಮಮಂದಿರ ಚುನಾವಣಾ ವಿಷಯ ಎಂದು ಕಾಂಗ್ರೆಸ್ ಹೇಳುತ್ತಿದೆ, ರಾಮಮಂದಿರ ಎಂದಿಗೂ ಚುನಾವಣಾ ವಿಷಯವಾಗಿರಲಿಲ್ಲ. ಚುನಾವಣಾ ವಿಷಯವೂ ಆಗುವುದಿಲ್ಲ ಎಂದು ನಾನು ಹೇಳಬಯಸುತ್ತೇನೆ. ಬಿಜೆಪಿ ಹುಟ್ಟುವ ಮೊದಲೇ ರಾಮಮಂದಿರಕ್ಕಾಗಿ ಹೋರಾಟ ನಡೆಯುತ್ತಿತ್ತು. ವಿದೇಶಿ ಆಕ್ರಮಣಕಾರರು ನಮ್ಮ ದೇವಾಲಯಗಳನ್ನು ನಾಶಪಡಿಸಿದಾಗ, ಭಾರತದ ಜನರು ತಮ್ಮ ಧಾರ್ಮಿಕ ಸ್ಥಳಗಳನ್ನು ಉಳಿಸಲು ಹೋರಾಡಿದರು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನಾಯಕರು ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಿದ್ದರು. ಆದರೆ, ರಾಮ್ ಲಲ್ಲಾನ ಡೇರೆಯನ್ನು ಬದಲಾಯಿಸುವ ವಿಷಯ ಬಂದಾಗ ಅವರು ಬೆನ್ನು ತಿರುಗಿಸುತ್ತಿದ್ದರು” ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡಡೆಯುವ ದಿನಗಳು ದೂರವಿಲ್ಲ ಎಂದರು.

ಇದನ್ನೂ ಓದಿ; ‘ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಪ್ರಯತ್ನಿಸುತ್ತಿದೆ..’; ಆತಂಕ ವ್ಯಕ್ತಪಡಿಸಿದ ಎಎಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...