Homeಕರ್ನಾಟಕತುಮಕೂರಿನಲ್ಲಿ ನರಭಕ್ಷಕ ಚಿರತೆ ದಾಳಿಗೆ ವ್ಯಾಪಕ ಬಲಿ: ಕ್ರಮಕ್ಕೆ ಮುಂದಾಗದ ಸರ್ಕಾರ...

ತುಮಕೂರಿನಲ್ಲಿ ನರಭಕ್ಷಕ ಚಿರತೆ ದಾಳಿಗೆ ವ್ಯಾಪಕ ಬಲಿ: ಕ್ರಮಕ್ಕೆ ಮುಂದಾಗದ ಸರ್ಕಾರ…

ಅರಣ್ಯ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತದೆ. ಆದರೆ ಕಾಡನ್ನು ವೈಜ್ಞಾನಿಕವಾಗಿ ಬೆಳೆಸುತ್ತಿಲ್ಲ. ನೀಲಗಿರಿ, ಅಕೇಶಿಯಾ ಗಿಡಗಳನ್ನು ಬೆಳೆಸಿದರೆ ಪ್ರಾಣಿಗಳಿಗೆ ಆಗುವ ಪ್ರಯೋಜವೇನು?

- Advertisement -
- Advertisement -

ತುಮಕೂರು ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಯಾವ ಭಾಗದಲ್ಲಿ ನೋಡಿದರೂ ಚಿರತೆ ದಾಳಿಯ ಮಾತುಗಳೇ ಕೇಳಿಬರುತ್ತಿವೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಚಿರತೆಗಳ ಸಂತಾನ ಹೆಚ್ಚಾಗಿದೆ. ಅವುಗಳಿಗೆ ಆಹಾರದ ಸಮಸ್ಯೆಯು ಉಂಟಾಗಿದೆ. ಆದರೆ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಸೇರಿದಂತೆ ಕಾಮಗಾರಿಗಳು ಹೆಚ್ಚಿದಂತೆ ಚಿರತೆಗಳು ನಾಡಿನತ್ತ ಆಹಾರ ಹುಡುಕುತ್ತಾ ಬಂದು ದಾಳಿ ಮಾಡುತ್ತಿವೆ.

ತುಮಕೂರು ಜಿಲ್ಲೆಯ ಹತ್ತು ತಾಲೂಕು ಕೇಂದ್ರಗಳಲ್ಲೂ ಚಿರತೆಗಳು ದಾಳಿ ಇಡುತ್ತಲೇ ಇವೆ. ಕುರಿ, ಮೇಕೆ, ದನ ಮೇಯಿಸುವವರನ್ನು ಕಾಡುತ್ತಲೇ ಇವೆ. ಬಹಳಷ್ಟು ಸಲ ಅವರ ಕಣ್ಣಿಗೂ ಬಿದ್ದಿವೆ. ಕುರಿ, ಮೇಕೆಗಳನ್ನು ಹೊತ್ತೊಯ್ದಿವೆ. ನಾಯಿಗಳನ್ನು ತಿಂದು ಹಾಕಿವೆ. ಮನುಷ್ಯರ ಮೇಲೆ ದಾಳಿಯನ್ನೂ ನಡೆಸಿ ಹಲವರನ್ನು ಗಾಯಗೊಳಿಸಿವೆ. ಆದರೂ ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿದೆ.

ನವೆಂಬರ್ 29ರಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡ ಮಳಲವಾಡಿಯಲ್ಲಿ ಅರಣ್ಯ ಅಂಚಿನಲ್ಲಿ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ  ಆನಂದಯ್ಯ ಎಂಬುವರ ಮೇಲೆ ಚಿರತೆ ಎರಗಿದೆ. ಕುತ್ತಿಗೆಗೆ ಬಾಯಿ ಹಾಕಿ ರಕ್ತವನ್ನು ಕುಡಿದಿದೆ. ಆನಂದಯ್ಯ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಆನಂದಯ್ಯ ಅವರ ಕುತ್ತಿಗೆಯ ಭಾಗದಲ್ಲಿ ಚಿರತೆಯ ಹಲ್ಲುಗಳ ಆಳವಾಗಿ ಒಳಹೊಕ್ಕಿರುವುದು ಕಂಡು ಬಂದಿದೆ. ಅರಣ್ಯ ಅಧಿಕಾರಿಗಳು ಆ ಚಿರತೆಗಾಗಿ ಶೋಧ ಮುಂದುವರಿಸಿದ್ದಾರೆ.

ಚಿರತೆ ದಾಳಿಗೆ ಮೃತಪಟ್ಟ ಆನಂದಯ್ಯ

ಮನುಷ್ಯರ ರಕ್ತದ ರುಚಿಯನ್ನು ಕಂಡಿರುವ ಚಿರತೆ, ಇದುವರೆಗೆ ಇಬ್ಬರನ್ನು ಬಲಿತೆಗೆದುಕೊಂಡಿದೆ. ಚಿರತೆ ದಾಳಿ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ನಿರಂತರವಾಗಿ ಅರಣ್ಯ ಇಲಾಖೆಗೆ ಮನವಿಗಳ ಮೇಲೆ ಮನವಿ ಸಲ್ಲಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಗ್ರಾಮಸ್ಥರ ಪ್ರತಿಭಟನೆ ಮತ್ತು ಒತ್ತಡ ಹೆಚ್ಚಾದಾಗ ಬೋನಿಟ್ಟು ಹಿಡಿದು ಅರಣ್ಯಕ್ಕೆ ಬಿಡುವ ಒಂದೆರಡು ಪ್ರಕರಣಗಳನ್ನು ಬಿಟ್ಟರೆ ಉಳಿದಂತೆ ಏನೂ ಆಗಿಲ್ಲ.

ಬೆಟ್ಟಗುಡ್ಡಗಳಲ್ಲಿ ಮತ್ತು ಅರಣ್ಯದಲ್ಲಿ ಅಕ್ರಮ-ಸಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ವ್ಯನ್ಯಜೀವಿಗಳ ಆವಾಸ ಸ್ಥಾನದಲ್ಲಿ ಪ್ರಾಣಿಗಳು ವಾಸಿಸಲು ಅಡ್ಡಿಯಾಗುತ್ತಿದೆ. ಅರಣ್ಯದಲ್ಲಿ ಆಹಾರದ ಕೊರತೆಯಾಗಿರುವುದು ಕೂಡ ಚಿರತೆಗಳು ಕುರಿ, ಮೇಕೆ ಮತ್ತು ನಾಯಿಗಳ ಮೇಲೆ ದಾಳಿ ನಡೆಸಲು ಕಾರಣವಾಗಿದೆ. ಚಿರತೆಗಳು ಆಗೊಮ್ಮೆ ಈಗೊಮ್ಮೆ ಮನುಷ್ಯನ ಮೇಲೆಯೂ ಎರಗಿ ಗಾಯಗೊಳಿಸಿರುವುದೂ ಉಂಟು.

ಚಿರತೆ ದಾಳಿಯಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ, ಕುರಿಗಾಹಿಗಳು, ಮೇಕೆ ಕಾಯುವವರು ಮತ್ತು ಇತರರು ದಾಳಿಗೆ ಒಳಗಾಗಿ ಗಾಯಗೊಂಡು ಆಸ್ಪತ್ರೆ ಸೇರುತ್ತಲೇ ಇದ್ದಾರೆ. ಹೀಗೆ ಚಿರತೆ ದಾಳಿಯಿಂದ ಸಾಕು ಪ್ರಾಣಿಗಳನ್ನು ಕಳೆದುಕೊಂಡವರಿಗೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಗಾಯಗೊಂಡವರಿಗೂ ಪರಿಹಾರ ಲಭಿಸಿಲ್ಲ. ಇದರಿಂದ ಜನರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರಡಿ, ಚಿರತೆ, ದಾಳಿಯಿಂದ ಬೇಸತ್ತಿರುವ ಜನರು ಗ್ರಾಮದ ಹೊರಗೆ ಒಬ್ಬೊಬ್ಬರೇ ಹೋಗಲು ಭಯಪಡುತ್ತಿದ್ದಾರೆ. ರಾತ್ರಿ ವೇಳೆ ಹೊಲಗಳಿಗೆ ಹೋಗಿ ಬೋರ್ ಮೂಲಕ ನೀರು ಹಾಯಿಸಲು ಹೋಗುವವರು ತಮ್ಮ ಜೀವಗಳನ್ನು ಕೈಯಲ್ಲಿ ಹಿಡಿದುಕೊಂಡು ಭಯದಲ್ಲೇ ಹೋಗುವಂತಹ ಪರಿಸ್ಥಿತಿ ಬಂದಿದೆ. ಕುರಿ, ಮೇಕೆ ಮೇಯಿಸುವವರು ಅರಣ್ಯದ ಅಂಚಿಗೆ ಹೋಗಲು ಹೆದರಿಕೊಳ್ಳುತ್ತಿದ್ದಾರೆ. ಅದು ಒಬ್ಬಂಟಿಯಾಗಿ ಹೋಗುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ. ವನ್ಯಜೀವಿಗಳಿಂದ ಗಾಯಗೊಂಡವರಿಗೆ ಮತ್ತು ಸಾಕುಪ್ರಾಣಿಗಳನ್ನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿಬಂದಿದೆ.

ಅದಕ್ಕೂ ಮೊದಲು ಚಿರತೆ ದಾಳಿ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅರಣ್ಯದಲ್ಲಿ ಅವುಗಳಿಗೆ ಸಾಕಷ್ಟು ಆಹಾರ ಸಿಗುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಗೆ ಅಂಕುಶ ಬೀಳಬೇಕು. ಆಗ ಮಾತ್ರ ಅವು ಮನುಷ್ಯರ ಮೇಲೆ ಎರಗುವುದನ್ನು ನಿಲ್ಲಿಸುತ್ತವೆ. ಇದರ ಜೊತೆಗೆ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ತಡೆಯಲು ಸಾಧ್ಯವಾಗುತ್ತದೆ.

ಅರಣ್ಯ ಇಲಾಖೆ ಕೈಕಟ್ಟಿ ಕುಳಿತರೆ ಯಾವುದೇ ಪರಿಹಾರ ಸಿಗುವುದಿಲ್ಲ. ಸರ್ಕಾರಕ್ಕೆ ಅಗತ್ಯ ಮಾಹಿತಿ ನೀಡಿ ಅರಣ್ಯದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

ಈ ಕುರಿತು ನಾನುಗೌರಿ.ಕಾಂ ವತಿಯಿಂದ ಹೋರಾಟಗಾರರು ಮತ್ತು ಸಂತ್ರಸ್ತರನ್ನು ಮಾತನಾಡಿಸಲಾಯಿತು. ಅವರು ಹೇಳಿಕೆಗಳು ಕೆಳಗಿನಂತಿವೆ.

ಮೂಲ ಸಮಸ್ಯೆಯನ್ನು ಪರಿಹರಿಸುವುದು ಯಾರಿಗೂ ಬೇಕಾಗಿಲ್ಲ. ಚಿರತೆ ದಾಳಿಯ ಮೂಲ ಸಮಸ್ಯೆ ಯಾರಿಗೂ ಗೊತ್ತಿಲ್ಲ. ಅರಣ್ಯ ಅಧಿಕಾರಿಗಳು, ಶಾಸಕರು, ಸಂಸದರು ಮತ್ತು ಮಂತ್ರಿಗಳು ಇದರ ಬಗ್ಗೆ ಯೋಚಿಸುತ್ತಿಲ್ಲ. ಅರಣ್ಯ ಕಡಿಯುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಬಿಂಬಿಸಲಾಗುತ್ತಿದೆ. ಇದು ಪ್ರಶ್ನೆಯೇ ಅಲ್ಲ. ಕಾಡಿನಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಬೇಕಾಗುವ ನೇರಳೆ, ಹಲಸು ಮರಗಳನ್ನು ಮತ್ತು ಗಿಡಮೂಲಿಕೆ ಗಿಡಗಳನ್ನು ಬೆಳೆಸುವ ಗೋಜಿಗೆ ಅರಣ್ಯ ಇಲಾಖೆ ಹೊಗುತ್ತಿಲ್ಲ. ಹೀಗಾಗಿ ಅಲ್ಲಿ ಸಸ್ಯಹಾರಿ ಪ್ರಾಣಿಗಳು ವಾಸಿಸುತ್ತಿಲ್ಲ.

ಸಸ್ಯಹಾರಿ ಪ್ರಾಣಿಗಳನ್ನು ತಿಂದು ಜೀವಿಸುವ ಚಿರತೆಗಳಿಗೆ ಆಹಾರದ ಸಮಸ್ಯೆ ಎದುರಾಗಿದೆ. ಅರಣ್ಯ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತದೆ. ಆದರೆ ಕಾಡನ್ನು ವೈಜ್ಞಾನಿಕವಾಗಿ ಬೆಳೆಸುತ್ತಿಲ್ಲ. ನೀಲಗಿರಿ, ಅಕೇಶಿಯಾ ಗಿಡಗಳನ್ನು ಬೆಳೆಸಿದರೆ ಪ್ರಾಣಿಗಳಿಗೆ ಆಗುವ ಪ್ರಯೋಜವೇನು? ಇದರಿಂದ ಸಸ್ಯಹಾರಿ ಮತ್ತು ಮಾಂಸಹಾರಿ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಅನಿವಾರ್ಯವಾಗಿ ಎದುರಾಗುತ್ತದೆ. ಹೆಚ್ಚು ಹೆಚ್ಚಾಗಿ ಮೊಲ, ಜಿಂಕೆ, ಕೋತಿ ಮೊದಲಾದ ಪ್ರಾಣಿಗಳು ಕಾಡಿನಲ್ಲಿ ಇದ್ದರೆ ಚಿರತೆಗಳು ನಾಡಿಗೆ ಬರುವುದಿಲ್ಲ. ಮೇಕೆ, ಕುರಿ ಮತ್ತು ಮನುಷ್ಯನ ಮೇಲೆ ದಾಳಿ ಮಾಡುವುದಿಲ್ಲ.

ಆನಂದ್‌ ಪಟೇಲ್‌

ಕೇವಲ ದಾಳಿಯಾದಾಗ ಮಾತ್ರ ಒಂದು ಚಿರತೆಯನ್ನೋ, ಕರಡಿಯನ್ನೋ ಹಿಡಿದರೆ ಸಮಸ್ಯೆ ಬಗೆಹರಿಯುತ್ತದೆಯೇ? ಮತ್ತೆ ಇನ್ನೊಂದು ಚಿರತೆ ದಾಳಿ ಮಾಡುತ್ತದೆ. ಆನೆಗಳು ದಾಳಿ ಮಾಡುತ್ತವೆ. ಹೀಗಾಗಿ ಅರಣ್ಯೀಕರಣವೆಂದರೆ ಅದು ವೈಜ್ಞಾನಿಕವಾಗಿ ಇರಬೇಕು. ಕಾಡಿನಲ್ಲಿ ಹಣ್ಣಿನ ಮರಗಳನ್ನು ಯಥೇಚ್ಚವಾಗಿ ಬೆಳೆಸಬೇಕು. ಸಸ್ಯಹಾರ ಪ್ರಾಣಿಗಳು ಹೆಚ್ಚಳವಾಗುವಂತೆ ನೋಡಿಕೊಳ್ಳಬೇಕು. ಆಗ ಮಾಂಸಾಹಾರಿಗಳಿಗೂ ಕಾಡಿನಲ್ಲಿಯೇ ಆಹಾರ ದೊರೆಯುತ್ತದೆ. ಇದು ಸಾಮಾನ್ಯ ತಿಳುವಳಿಕೆ. ಇಷ್ಟು ಮಾಡಲಿ ಅರಣ್ಯ ಇಲಾಖೆ.
ಆನಂದ್ ಪಟೇಲ್, ಕರ್ನಾಟಕ ರಾಜ್ಯ ರೈತ ಸಂಘದ ಕುಣಿಗಲ್ ತಾಲೂಕು ಅಧ್ಯಕ್ಷರು.

ಇದುವರೆಗೆ ಚಿರತೆ ಮೂವರನ್ನು ಬಲಿತೆಗೆದುಕೊಂಡಿದೆ. ಕೇವಲ ಪರಿಹಾರ ನೀಡುವುದರಿಂದ ಹೋದ ಪ್ರಾಣ ಬರುತ್ತದೆಯೇ? ಕೊತ್ತಗೆರೆ ಹೋಬಳಿಯ ದೊಡ್ಡಮಳಲವಾಡಿ, ಗಿಡದಪಾಳ್ಯದಲ್ಲಿ ಮೂವರನ್ನು ಕೊಂದು ಹಾಕಿದೆ. ಕಳೆದ 15 ದಿನಗಳ ಹಿಂದೆ ಮಹಿಳೆಯೊಬ್ಬರನ್ನು ಚಿರತೆ ಕೊಂದಿತ್ತು. ಹೀಗೆ ಜೀವ ಹೋಗುತ್ತಲೇ ಇವೆ. ಅರಣ್ಯ ಇಲಾಖೆ ಪುಡಿಗಾಸು ಪರಿಹಾರ ನೀಡುತ್ತಿದೆ. ಇದರಿಂದೇನು ಪ್ರಯೋಜನವಾಗುವುದಿಲ್ಲ. ಚಿರತೆಗಳು ವಾಸಿಸುವಂತಹ ಯೋಗ್ಯ ಆವಾಸ ಸ್ಥಾನಗಳು ಕುಣಿಗಲ್ ತಾಲೂಕಿನಲ್ಲಿ ಇಲ್ಲ.

ಜಿ.ಕೆ.ನಾಗಣ್ಣ

ಜಿ.ಕೆ.ನಾಗಣ್ಣ, ಸಂತೇಮಾವತ್ತೂರು ಗೊಲ್ಲರಹಟ್ಟಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...