Homeಅಂಕಣಗಳುಕಾಂಗ್ರೆಸ್ ಪಕ್ಷವನ್ನು ಮೌಲ್ಯಾಧಾರಿತವಾಗಿ ಮರುಕಟ್ಟಲು ಡಿಕೆಶಿ ಮುಂದಾಗಲಿ: ಎಚ್.ಎಸ್ ದೊರೆಸ್ವಾಮಿ

ಕಾಂಗ್ರೆಸ್ ಪಕ್ಷವನ್ನು ಮೌಲ್ಯಾಧಾರಿತವಾಗಿ ಮರುಕಟ್ಟಲು ಡಿಕೆಶಿ ಮುಂದಾಗಲಿ: ಎಚ್.ಎಸ್ ದೊರೆಸ್ವಾಮಿ

- Advertisement -
- Advertisement -

ಬಿ.ಎ ತೇಜಸ್ವಿಯವರು ಹಿಂದಿನ ವಾರದ ನ್ಯಾಯಪಥದಲ್ಲಿ ಕಾಂಗ್ರೆಸ್‍ಗೆ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷವನ್ನು ಎದುರಿಸುವ ಸಾಮಥ್ರ್ಯ ಹೊಂದಿದೆಯೇ? ಕಾಂಗ್ರೆಸ್ಸಿನ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಭಾಜಪವನ್ನು ಸೋಲಿಸುವ ಅರ್ಥಾತ್ ಮತದಾರರ ಮನ ಗೆಲ್ಲುವ ಸಾಮಥ್ರ್ಯ ಹೊಂದಿದ್ದಾರೆಯೇ ಎಂದು ಕೇಳುತ್ತಾರೆ. ಅವರು ಪ್ರಸ್ತಾಪಿಸಿರುವ ವಿಚಾರಗಳು ಇಂತಿವೆ.

ಭಾರತೀಯ ಜನತಾಪಕ್ಷ ಕ್ಯಾಡರ್ ಬೇಸ್ಡ್. ಅವರಿಗೆ ಹಿಂದುತ್ವ ಪ್ರತಿಪಾದನೆಯ ಕಾರ್ಯಕ್ರಮಗಳನ್ನು ಸೂಚಿಸಲು ಆರ್‍ಎಸ್‍ಎಸ್ ನಂತಹ ಕ್ಯಾಡರ್ ಬೇಸ್ಡ್ ಸಂಸ್ಥೆ ಮಾರ್ಗದರ್ಶಕನಂತಿದೆ. ಆರ್‍ಎಸ್‍ಎಸ್‍ನ್ನು ಬೆಂಬಲಿಸುವ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇನೆ, ಯುವ ಮೋರ್ಚಾ, ವಿದ್ಯಾರ್ಥಿ ಪರಿಷತ್, ಮಹಿಳಾ ಸಂಘಟನೆಗಳು ಇವೆ. ಬಿಜೆಪಿಗೆ ಮೋದಿ ಮತ್ತು ಷಾ ಅವರೇ ನಾಯಕರು. ಇನ್ನೆಲ್ಲರೂ ಅವರ ಆಜ್ಞಾಪಾಲಕರು. ಕಾಂಗ್ರೆಸಿನಲ್ಲಿ ಎಲ್ಲ ನಾಯಕರೂ ಇನ್ನೊಬ್ಬರ ಕಾಲೆಳೆಯುವವರೇ ಅಲ್ಲದೆ ಕೇಂದ್ರ ಕಾಂಗ್ರೆಸ್ಸಿನಲ್ಲಿ ಅಖಿಲ ಭಾರತದ ಮನ್ನಣೆಗೆ ಪಾತ್ರರಾದವರು ಯಾರೂ ಇಲ್ಲ. ಅಲ್ಲಿ ನಾಯಕತ್ವ ಬದಲಾಗಬೇಕೆಂಬ ಕೂಗು ಬಹುಕಾಲದಿಂದ ಇದೆ. ಆದರೆ ಹಾಗೆ ಕೂಗುವವರು ಬೆರಳೆಣಿಕೆಯಷ್ಟು ಜನ. ಮಿಕ್ಕವರೆಲ್ಲ ಸೋನಿಯ ಗಾಂಧಿಯವರ ಸೈಕೋ ಫ್ಯಾಂಟ್ಸ್ ಪರಿಸ್ಥಿತಿ ಹೀಗಿರುವಾಗ ನೂತನ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ಸನ್ನು ಹೇಗೆ ನಿಭಾಯಿಸುವರು ಎಂಬುದು ಒಂದು ಯಕ್ಷ ಪ್ರಶ್ನೆ. ಆರ್ಯ ವಿದ್ಯಾಶಾಲೆಯ ಆಡಳಿತವನ್ನು ಕಬ್ಜಾ ಮಾಡಿಕೊಂಡಷ್ಟು ಸುಲಭವಲ್ಲ, ಕಾಂಗ್ರೆಸ್ಸನ್ನು ನಿಭಾಯಿಸುವುದು ಎಂದು ತಿಳಿಯದಿರುವಷ್ಟು ಮೂರ್ಖರಲ್ಲ ಡಿ.ಕೆ ಶಿವಕುಮಾರ್ ಎಂದು ನಾನು ಭಾವಿಸಿದ್ದೇನೆ.

ಹೋರಾಟಗಾರರಾಗಿ ಎಂದೂ ಶಿವಕುಮಾರ್ ರಾಜಕೀಯದಲ್ಲಿ ಕಾಣಿಸಿಕೊಂಡಿಲ್ಲ. ರೆಸಾರ್ಟ್ ರಾಜಕೀಯ ಚೆನ್ನಾಗಿಯೇ ನಿರ್ವಹಿಸಬಲ್ಲರು ಎಂಬ ಅಭಿಪ್ರಾಯ ಕಾಂಗ್ರೆಸ್ಸಿಗರಲ್ಲಿದೆ. ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಇವರ ನಾಯಕತ್ವದ ಕಿತ್ತಾಟದಲ್ಲಿ, ಲಕ್ಷ್ಮಿ ಹೆಬ್ಬಾಳಕ್ಕರ್ ಪರ ವಹಿಸಲುಹೋದ ಡಿ.ಕೆ ಶಿವಕುಮಾರ್ ತಮ್ಮ ಪ್ರಯತ್ನವನ್ನು ಅರ್ಧಕ್ಕೇ ನಿಲ್ಲಿಸಿ ಹಿಂತಿರುಗಬೇಕಾಯಿತು.

ಯಡಿಯೂರಪ್ಪನವರು ಲಿಂಗಾಯತ ಮಠಗಳವರನ್ನು ಸರ್ಕಾರದ ಹಣಕೊಟ್ಟು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲದೆ ಅವರು ಲಿಂಗಾಯತರು. ಶಿವಕುಮಾರ್ ಒಕ್ಕಲಿಗ ಸಮುದಾಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಲ್ಲರೇ? ಈ ವಿಚಾರದಲ್ಲಿ ಪ್ರತಿಸ್ಪರ್ಧಿಯಾಗಿ ದೇವೇಗೌಡರು ಕುಮಾರಸ್ವಾಮಿ ಇದ್ದಾರೆ. ಚುನಾವಣೆಗಳಲ್ಲಿ ಒಕ್ಕಲಿಗ ಸಮುದಾಯವನ್ನು ತಮ್ಮ ಕಡೆಗೆ ಎಳೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಅಭ್ಯರ್ಥಿಗಳು ಗೆಲ್ಲುವಂತೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ದೇವೇಗೌಡರಿಗಿರುವಷ್ಟು ಚಾಕಚಕ್ಯತೆ ಡಿಕೆಶಿಯವರಿಗೆ ಇದೇಯೇ? ಬಿಜೆಪಿಯನ್ನು ಮಣಿಸುವುದಕ್ಕೆ ಇಷ್ಟೆಲ್ಲ ಅಡೆತಡೆಗಳಿದ್ದರೂ, ಅವುಗಳನ್ನೆಲ್ಲ ತಡೆಗಟ್ಟುವ ಮಾರ್ಗಗಳನ್ನು ಡಿ.ಕೆ ಶಿವಕುಮಾರ್ ಹುಡುಕಿಕೊಳ್ಳುವುದಾದರೆ, ಕಾಂಗ್ರೆಸ್ಸಿಗೆ ಅದರಲ್ಲೂ ಮುಖ್ಯವಾಗಿ ಕರ್ನಾಟಕ ಕಾಂಗ್ರೆಸ್ಸಿನ ಬಲವರ್ಧನೆಗೆ ಸಹಾಯಕವಾಗಬಹುದು. ನಿಷ್ಠಾವಂತ ಪ್ರಭಾವಶಾಲಿ ಜನಾನುರಾಗಿ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಅವರಷ್ಟೇ ಶ್ರದ್ಧೆಯುಳ್ಳ ಕಾಂಗ್ರೆಸಿಗರ ಕ್ಯಾಡರ್‍ಗಳನ್ನು ರಚಿಸಲು ಡಿಕೆಶಿಗೆ ಸಾಧ್ಯವೇ?

ಕೋವಿಡ್ ಸಂದರ್ಭದಲ್ಲಿ ಮೋದಿ, ಷಾ ಮತ್ತು ಯಡಿಯೂರಪ್ಪನವರು ಎಡವಿದ್ದು ಎಲ್ಲಿ ಎನ್ನುವುದರ ಅಧ್ಯಯನ ಮಾಡಿ ಅದನ್ನು ಕರ್ನಾಟಕದ ಉದ್ದಗಲಕ್ಕೂ ಪ್ರಚಾರ ಮಾಡಬೇಕು. ಬಿಜೆಪಿ ಮೇಲಿನ ಮತದಾರರ ಒಲವನ್ನು ದೂರ ಮಾಡಲು ಯಾವ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂಬುದನ್ನು ಕಾಂಗ್ರೆಸ್ ನಾಯಕರೆಲ್ಲ ಕೂಡಿಕೊಂಡು ತೀರ್ಮಾನಿಸಬೇಕು. ಚುನಾವಣೆಗಳಲ್ಲಿ ಹಣದ ಪ್ರಭಾವ, ಪಕ್ಷಾಂತರ ಪಿಡುಗು ಇವುಗಳನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ರೂಪಿಸಬೇಕೆಂದು ಚುನಾವಣಾ ಆಯೋಗದ ಮುಂದೆ ಧರಣಿ – ಸತ್ಯಾಗ್ರಹ ಹೂಡಬೇಕು. ಆಶ್ವಾಸನೆ ದೊರೆಯುವವರೆಗೂ ಈ ಸತ್ಯಾಗ್ರಹ ಮುಂದುವರೆಯಬೇಕು.

ವಲಸೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳ ಕೆಟ್ಟದಾಗಿ ನಡೆದುಕೊಂಡಿವೆ. ಸರ್ವೋಚ್ಛ ನ್ಯಾಯಾಲಯ ಕೂಡ ಮೋದಿ ಸರ್ಕಾರದ ಮೇಲೆ ಚಾಟಿ ಬೀಸಿದೆ. ವಲಸೆ ಕಾರ್ಮಿಕರ ರಿಜಿಸ್ಟ್ರೇಷನ್ ಕಡ್ಡಾಯವಾಗಿ ಆಗಬೇಕು. ಅವರಿಗೆ ಕರ್ನಾಟಕದಲ್ಲಿ ಕೆಲಸದ ಭದ್ರತೆ, ಆರೋಗ್ಯ ಭದ್ರತೆ, ವಸತಿ ಸೌಕರ್ಯ ಎಲ್ಲವನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುವ ಕೆಲಸವನ್ನು ಕೂಡಲೇ ಮಾಡಿಸಬೇಕು.

ಜನಸಾಮಾನ್ಯರನ್ನು ಕಾಡುವ ಬಡತನ, ಅಪೌಷ್ಠಿಕತೆ, ಅಸಮಾನತೆ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಯೋಜನೆಗಳನ್ನು ರೂಪಿಸಲು ಕಾಂಗ್ರೆಸ್ ಶಾಸಕರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಸರ್ಕಾರವನ್ನು ಈ ವಿಚಾರದಲ್ಲಿ ಮಣಿಸಬೇಕು. ಸಮಾಜವನ್ನು ಒಡೆಯುವ ಕಾನೂನುಗಳನ್ನು ಸರ್ಕಾರ ಹಿಂತೆಗೆದುಕೊಳ್ಳಲು, ಜೈಲ್ ಭರೋ ಕಾರ್ಯಕ್ರಮ, ಅಸಹಕಾರ ಚಳವಳಿಗಳನ್ನು ರೂಪಿಸಬೇಕು.
ಪ್ರತಿ ಜಿಲ್ಲೆಯಲ್ಲೂ ರಾಜಕೀಯ ಸಮ್ಮೇಳನಗಳನ್ನ ನಡೆಸಿ ಬಿಜೆಪಿ ಸರ್ಕಾರದ ವೈಫಲ್ಯತೆಗಳನ್ನು ಕುರಿತು ಚರ್ಚಿಸಬೇಕು. ಮತದಾರರ ಜಾಗೃತಿ ಕೆಲಸ ಮಾಡಬೇಕು. ಹೋರಾಟಕ್ಕೆ ಜನತೆಯನ್ನು ಅಣಿಮಾಡುವ ಕೆಲಸ ಕೂಡಲೇ ಆರಂಭವಾಗಬೇಕು. ಜೈಲ್‍ಭರೋ ಕಾರ್ಯಕ್ರಮವನ್ನು ಆರಂಭಿಸುವುದಕ್ಕೆ ಇದು ಸಕಾಲವಾಗಿದೆ.

ಸರ್ಕಾರದ ಭೂಸುಧಾರಣೆ ಶಾಸನ ತಿದ್ದುಪಡಿ, ಕೇಂದ್ರ ಸರ್ಕಾರ ಸಾರ್ವಜನಿಕ ಒಡೆತನದ ಸಂಸ್ಥೆಗಳ ಷೇರುಗಳನ್ನು ಮಾರಾಟ ಮಾಡಲು ಹೊರಟಿರುವುದು, ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡಲು ತೊಡಗಿರುವುದು ಮುಂತಾದ ಜ್ವಲಂತ ಆರ್ಥಿಕ ನೀತಿಯನ್ನು ತಡೆಗಟ್ಟಲು ಈ ವರ್ಷದ ಕೊನೆಯೊಳಗಾಗಿ ರಣತಂತ್ರ ರೂಪಿಸಬೇಕು.

ಡಿಕೆಶಿಯವರು ತಾವೊಬ್ಬರೇ ಬೆಳೆದುಕೊಳ್ಳಬೇಕೆಂದು ಬಯಸದೆ ಇದ್ದರೆ, ಅಹಂ ಬಿಟ್ಟರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪತಾಕೆಯನ್ನು ಮತ್ತೆ ಹಾರಿಸಬಹುದು. ಗಾಂಧೀಜಿ ಕಾಂಗ್ರೆಸ್ಸನ್ನು ವಿಸರ್ಜನೆ ಮಾಡಿ ಅದನ್ನು ಲೋಕಸೇವಕ ಸಂಘ ಎಂಬ ರಾಜಕೀಯ ಕಾವಲುಗಾರ ಸಂಘಟನೆಯನ್ನಾಗಿ ಪರಿವರ್ತಿಸಬೇಕೆಂದು ಬಯಸಿದ್ದರು. ರಾಜಕೀಯ ಶುದ್ಧೀಕರಣ ಅವರ ಮುಖ್ಯ ಗುರಿಯಾಗಿತ್ತು.

ಈಗ ರಾಜಕೀಯ ಅನೈತಿಕತೆಯ ಗೂಡಾಗಿದೆ. ಜಾತಿ, ದ್ವೇಷ ಬೆಳೆಯುತ್ತಿದೆ. ದುಡ್ಡಿದ್ದವರು, ಭ್ರಷ್ಟಾದಿಧ್ರಷ್ಟರು, ಗೂಂಡಾಗಳು ರಾಜಕೀಯವನ್ನು ಕಬ್ಜಾ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್, ಜನರ ಸಮಸ್ಯೆಗಳ ನಿವಾರಣೆಗೆ ಟೊಂಕಕಟ್ಟಿ ನಿಂತ ಸಂಸ್ಥೆಯಾಗಿತ್ತು. ಜನಪರ ಹೋರಾಟದ ಏಕೈಕ ಸಂಸ್ಥೆಯಾಗಿತ್ತು. ಜನಸೇವೆಯೇ ಪರಮಧರ್ಮ ಎಂಬುದು ಕಾಂಗ್ರೆಸ್ಸಿನ ಏಕೈಕ ಗುರಿಯಾಗಿತ್ತು. ಡಿಕೆಶಿಯವರ ಅಧ್ಯಕ್ಷತೆಯಲ್ಲಿ ಅದು ಮತ್ತೆ ಮೌಲ್ಯಾಧಾರಿತ ಸಂಸ್ಥೆಯಾಗಿ ಪರಿವರ್ತನೆಯಾಗಲಿ ಎಂಬುದು ಎಲ್ಲರ ಹಾರೈಕೆ.


ಇದನ್ನು ಓದಿ: 6 ವರ್ಷಗಳಲ್ಲಿ 18 ಲಕ್ಷ ಕೋಟಿ ರೂ ಅಬಕಾರಿ ಸುಂಕ ಲೂಟಿ: ಸಿದ್ದರಾಮಯ್ಯ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...