Homeಮುಖಪುಟಹೊಸ ವರ್ಷದಂದು ಗಾಝಾದ ಸಹೋದರ, ಸಹೋದರಿಯರನ್ನು ನೆನೆಯೋಣ: ಪ್ರಿಯಾಂಕಾ ಗಾಂಧಿ

ಹೊಸ ವರ್ಷದಂದು ಗಾಝಾದ ಸಹೋದರ, ಸಹೋದರಿಯರನ್ನು ನೆನೆಯೋಣ: ಪ್ರಿಯಾಂಕಾ ಗಾಂಧಿ

- Advertisement -
- Advertisement -

ಹೊಸ ವರ್ಷದ ಮುನ್ನಾದಿನ ಶುಭಾಷಯ ಕೋರಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಈ ಖುಷಿಯ ಸಂದರ್ಭದಲ್ಲಿ ಗಾಝಾದ ನಮ್ಮ ಸಹೋದರರನ್ನು ನೆನೆಯೋಣ ಎಂದು ಜನತೆಗೆ ಕರೆ ನೀಡಿದ್ದಾರೆ. ಗಾಝಾದ ವಿಷಯದಲ್ಲಿ ಮೌನ ವಹಿಸಿರುವ ಜಾಗತಿಕ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ನಮ್ಮ ಮಕ್ಕಳು ಹೊಸ ವರ್ಷ ಆಚರಿಸುತ್ತಿರುವಾಗ ಗಾಝಾದ ಮಕ್ಕಳನ್ನು ನಿರ್ಧಯವಾಗಿ ಕೊಲ್ಲಲಾಗ್ತಿದೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಪ್ರಿಯಾಂಕಾ ಗಾಂಧಿ ದುಖಃ ವ್ಯಕ್ತಪಡಿಸಿದ್ದಾರೆ.

“ನಾವು ಹೊಸ ವರ್ಷದ ಆರಂಭವನ್ನು ಆಚರಿಸುತ್ತಾ ಪ್ರೀತಿ, ಶಾಂತಿ, ನಗು ಮತ್ತು ಒಳ್ಳೆಯತನವು ನಮ್ಮ ಜೀವನದಲ್ಲಿ ತುಂಬಬೇಕೆಂದು ಪರಸ್ಪರ ಹಾರೈಸುತ್ತಿರುವಾಗ, ಗಾಜಾದಲ್ಲಿ ತಮ್ಮ ಜೀವಿಸುವ ಹಕ್ಕಿನ ಮೇಲೆ ನಡೆಯುತ್ತಿರುವ ಅನ್ಯಾಯ ಮತ್ತು ಅಮಾನವೀಯ ಆಕ್ರಮಣವನ್ನು ಎದುರಿಸುತ್ತಿರುವ ನಮ್ಮ ಸಹೋದರ, ಸಹೋದರಿಯರನ್ನು ನೆನಪಿಸಿಕೊಳ್ಳೋಣ ಎಂದು ಪ್ರಿಯಾಂಕಾ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

“ನಮ್ಮ ಮಕ್ಕಳು ಸಂಭ್ರಮಿಸುತ್ತಿರುವಾಗ ಗಾಝಾದ ಮಕ್ಕಳನ್ನು ನಿರ್ದಯವಾಗಿ ಕೊಲ್ಲಲಾಗುತ್ತಿದೆ. ಜಾಗತಿಕ ನಾಯಕರು ಎಂದು ಕರೆಯಲ್ಪಡುವವರು ಮೌನವಾಗಿ ವೀಕ್ಷಿಸುತ್ತಿದ್ದಾರೆ. ಅಧಿಕಾರ ಮತ್ತು ದುರಾಶೆಗಾಗಿ ತಮ್ಮಷ್ಟಕ್ಕೆ ವಿಚಲಿತರಾಗದೆ ಮುಂದುವರಿಯುತ್ತಿದ್ದಾರೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಗಾಝಾದಲ್ಲಿ ನಡೆಸಲಾಗುತ್ತಿರುವ ಭೀಕರ ಹಿಂಸಾಚಾರವನ್ನು ಕೊನೆಗಾಣಿಸುವಂತೆ ಕೋಟ್ಯಾಂತರ ಸಾಮಾನ್ಯ ಜನರು ಧ್ವನಿ ಎತ್ತುತ್ತಿದ್ದಾರೆ. ಧೈರ್ಯಶಾಲಿ ಹೃದಯ ಹೊಂದಿರುವ ಲಕ್ಷಾಂತರ ಜನರು ನಮಗೆ ಹೊಸ ನಾಳೆಯ ಭರವಸೆಯನ್ನು ತಂದಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪೋಸ್ಟ್‌ ಮಾಡಿದ್ದಾರೆ.

ಅಕ್ಟೋಬರ್ 7ರಂದು ಪ್ರಾರಂಭಗೊಂಡ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ಸುಮಾರು 85 ದಿನಗಳ ಬಳಿಕ ಇಂದೂ ಕೂಡ ಮುಂದುವರೆದಿದೆ. ಇಸ್ರೇಲ್‌ನ ಆಕ್ರಮಣಕ್ಕೆ ಇದುವರೆಗೆ 21,600 ಅಮಾಯಕ ನಾಗರಿಕರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಗಾಝಾ- ಈಜಿಪ್ಟ್ ಗಡಿಯಲ್ಲಿ ನಿಯಂತ್ರಣ ಸಾಧಿಸುವುದು ಇಸ್ರೇಲ್‌ ಗುರಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...