Homeಮುಖಪುಟಬಿಹಾರದಲ್ಲಿ ವಿಚಿತ್ರ ಕಳ್ಳತನ; ರಾತ್ರೋರಾತ್ರಿ ಕೊಳವನ್ನೆ ಕದ್ದ ಕದೀಮರು!

ಬಿಹಾರದಲ್ಲಿ ವಿಚಿತ್ರ ಕಳ್ಳತನ; ರಾತ್ರೋರಾತ್ರಿ ಕೊಳವನ್ನೆ ಕದ್ದ ಕದೀಮರು!

- Advertisement -
- Advertisement -

60-ಅಡಿ ಸೇತುವೆ ಮತ್ತು ರೈಲು ಎಂಜಿನ್ ಕಳ್ಳತನದಿಂದ ಸುದ್ದಿಯಾಗಿದ್ದ ಬಿಹಾರದಲ್ಲಿ ಇದೀಗ ಸಂಪೂರ್ಣ ಕೊಳವೊಂದು ಕಣ್ಮರೆಯಾಗಿದೆ! ರಾಜ್ಯದ ವಿಲಕ್ಷಣ ಕಳ್ಳತನಗಳ ಪಟ್ಟಿಗೆ ಇದೀಗ ಇಡೀ ಕೊಳದ “ಕಳ್ಳತನ” ಪ್ರಕರಣವೂ ಸೇರ್ಪಡೆಯಾಗಿದೆ.

ಕೊಳ ಕದ್ದ ಕದೀಮರು ರಾತ್ರೋರಾತ್ರಿ ಅದರ ಮೇಲೆ ಗುಡಿಸಲು ನಿರ್ಮಿಸಲಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕೊಳದ ಜಾಗದಲ್ಲಿ ಗುಡಿಸಲು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಜಮೀನು ವಶಕ್ಕೆ ಇಡೀ ಕೊಳಕ್ಕೆ ಮಣ್ಣು ತುಂಬಿದ್ದ ಭೂಮಾಫಿಯಾ ಸದಸ್ಯರು ಪೊಲೀಸರು ಬರುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

‘ಈ ಕೊಳವು ಸಾರ್ವಜನಿಕ ಒಡೆತನದಲ್ಲಿದ್ದು, ಇದರಲ್ಲಿ ಮೀನು ಸಾಗಾಣಿಕೆ ಹಾಗೂ ಇತರ ಚಟುವಟಿಕೆಗಳಿಗೆ ನೀರನ್ನು ಬಳಸಲಾಗುತ್ತಿತ್ತು’ ಎಂದು ಸ್ಥಳೀಯರು ತಿಳಿಸಿದ್ದು, ದರ್ಬಂಗಾದಲ್ಲಿ ಭೂಮಿಯ ಬೆಲೆ ಏರಿಕೆ ಆಗಿರುವುದಿಂದ ಭೂಗಳ್ಳರ ಕಣ್ಣು ಜಲಮೂಲದ ಮೇಲೆ ಬಿದ್ದಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಳ ತುಂಬಿಸುವ ಕಾರ್ಯ ಆರಂಭವಾದಾಗಲೆ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದರು.

ಸಂಬಂಧಪಟ್ಟು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ನಂತರ ಕೆಲಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ, ಭೂಮಾಫಿಯಾದವರು ಕತ್ತಲೆಯಲ್ಲಿ ರಹಸ್ಯವಾಗಿ ಕೊಳಕ್ಕೆ ಮಣ್ಣು ತುಂಬಿಸುವ ಕೆಲಸ ಮಾಡಿದ್ದಾರೆ. ಹೀಗೆ ರಾತ್ರಿ ಕಾರ್ಯಾಚಾರಣೆಯಲ್ಲಿ ಅವರು ಇಡೀ ಕೊಳವು ಸಂಪೂರ್ಣವಾಗಿ ಕಣ್ಮರೆಯಾಗುವಂತೆ ಮಾಡಿದ್ದಾರೆ.

‘10-15 ದಿನಗಳಲ್ಲಿ ಕೊಳಕ್ಕೆ ಸಂಪೂರ್ಣವಾಗಿ ಮಣ್ಣು ತುಂಬಿದ್ದಾರೆ’ ಎಂದು ಜನರು ಹೇಳುತ್ತಾರೆ. ರಾತ್ರಿಯಲ್ಲಿ ಮಾತ್ರ ಕೆಲಸ ಮಾಡಲಾಗಿದ್ದು, ಅಧಿಕಾರಿಗಳು ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿದಾಗ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಅಮಿತ್ ಕುಮಾರ್ ಹೇಳಿದರು.

ವಿಲಕ್ಷಣ ಕಳ್ಳತನಕ್ಕೆ ಸಾಕ್ಷಿಯಾದ ಬಿಹಾರ:

2022ರ ನವೆಂಬರ್‌ನಲ್ಲಿ ರೈಲ್ವೆ ಡೀಸೆಲ್ ಎಂಜಿನ್ ಕಳ್ಳತನವಾಗಿತ್ತು! ಬೇಗುಸರೈನಲ್ಲಿರುವ ರೈಲ್ವೆ ಯಾರ್ಡ್ ಅಂಗಳಕ್ಕೆ ಸುರಂಗ ಕೊರೆದಿದ್ದ ಕಳ್ಳರು, ಇಂಜಿನ್ನಿನ ಬಿಡಿಭಾಗಗಳನ್ನು ಕದಿಯಲು ಆರಂಭಿಸಿದ್ದರು. ರಿಪೇರಿಗೆ ಬಂದಿದ್ದ ಇಂಜಿನ್ನ ಬಿಡಿ ಭಾಗಗಳನ್ನು ಬೇರ್ಪಡಿಸಿದ್ದ ಕದೀಮರು, ಪೂರ್ಣ ಇಂಜಿನ್ ತೆಗೆದುಕೊಂಡು ಹೋಗಿದ್ದರು.

ಅದೇ ವರ್ಷದ ಆರಂಭದಲ್ಲಿ, ರೋಹ್ತಾಸ್ ಜಿಲ್ಲೆಯಲ್ಲಿ ಸಂಪೂರ್ಣ 60 ಅಡಿ ಸೇತುವೆಯನ್ನು ಕಳವು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 247 ಕೆಜಿ ಕಬ್ಬಿಣದ ನಾಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳರು ಜೆಸಿಬಿ ಮತ್ತು ಗ್ಯಾಸ್ ಕಟ್ಟರ್ ಬಳಸಿ ಅದನ್ನು ಕೆಡವಿದ್ದು, ಕೇವಲ ಮೂರೇ ದಿನಗಳಲ್ಲಿ ಸೇತುವೆ ನಾಪತ್ತೆಯಾಗಿತ್ತು.

ಇದನ್ನೂ ಓದಿ; ಉತ್ತರಾಖಂಡ: ಅಪ್ರಾಪ್ತೆ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ನಾಯಕನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...