Image Courtesy: News18

ಕರ್ನಾಟಕದ‌ ಮುಖ್ಯ ನ್ಯಾಯಾಧೀಶರ ಕಚೇರಿಯಿಂದ ಮಾಜಿ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಪಿ.ಡಿ ದಿನಕರನ್‌ರವರ ಸಂಬಂಧಿಯೊಬ್ಬರಿಗೆ ಎಂಡಿ ಸೀಟ್‌ಗೆ ದಾಖಲಾತಿ ನೀಡಬೇಕೆಂದು ಶಿಫಾರಸ್ಸು ಪತ್ರ ಬರೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ಹೈಕೋರ್ಟ್‌ನ ಜಂಟಿ ರಿಜಿಸ್ಟ್ರಾರ್‌ ಟಿ.ಎನ್ ಕನಕರಾಜುರವರು ಬೆಂಗಳೂರಿನ ಸೇಂಟ್ ಜಾನ್‌ ಮೆಡಿಕಲ್ ಕಾಲೇಜಿಗೆ ಶಿಫಾರಸ್ಸು ಪತ್ರ ಬರೆದಿದ್ದು, ಮಾಜಿ ಮುಖ್ಯ ನ್ಯಾಯಾಧೀಶರ ಸಂಬಂಧಿಯೊಬ್ಬರು ನೀಟ್‌ ಪರೀಕ್ಷೆಯಲ್ಲಿ ಅಖಿಲ ಭಾರತ 1,09,767ನೇ ರ್ಯಾಂಕ್ ಪಡೆದಿದ್ದು, ಅವರಿಗೆ ತಮ್ಮ ಕಾಲೇಜಿನಲ್ಲಿ ಪ್ರವೇಶ ನೀಡುವಂತೆ ಕೋರಲಾಗಿದೆ.

ಕರ್ನಾಟಕದ‌ ಮುಖ್ಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ ಓಕಾರವರು ಈ ಅಭ್ಯರ್ಥಿಯು ಸೆಂಟ್ ಜಾನ್ ಮೆಡಿಕಲ್‌ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮುಂದುವರೆಸಲಿ ಎಂಬ ಸಂಗತಿಯ ಕುರಿತು ಉತ್ಸುಕರಾಗಿದ್ದಾರೆ, ಹಾಗಾಗಿ ಈ ಅಭ್ಯರ್ಥಿಗೆ ತಮ್ಮ ಕಾಲೇಜಿನಲ್ಲಿ ಎಂಡಿ ಜನರಲ್ ಮೆಡಿಸಿನ್, ಎಂಎಸ್ ಜನರಲ್ ಸೈನ್ಸ್, ಎಂಎಸ್ ಜನರಲ್ ಸರ್ಜರಿ, ಎಂಸಿ ಅನಸ್ತೇಷಿಯ, ಎಂಎಸ್ ಆಪ್ತಮಾಲಜಿ, ಎಂಎಸ್‌ಇಎನ್‌ಟಿ, ಎಂಡಿ ಪೆಥಾಲಜಿ ವಿಭಾಗಗಳಲ್ಲಿ ಯಾವುದಾದರೂ ಒಂದಕ್ಕೆ ಸೀಟು ನೀಡಬೇಕೆಂದು ಪತ್ರದಲ್ಲಿ ಕೋರಲಾಗಿದೆ.

ಈ ರೀತಿಯಾಗಿ ಮುಖ್ಯ ನ್ಯಾಯಾಧೀಶರ ಕಚೇರಿಯ ಮತ್ತು ಹೈಕೋರ್ಟ್‌ನ ಅಧಿಕಾರ ಬಳಸಿಕೊಂಡು ಮಾಜಿ ಮುಖ್ಯ ನ್ಯಾಯಾಧೀಶರ ಸಂಬಂಧಿಗೆ ಸೀಟು ಕೇಳುವುದು ಎಷ್ಟು ಸರಿ? ಎಂಬ ಪ್ರಶ್ನೆ ಉದಯವಾಗಿದೆ.

ಈ ಕುರಿತು ನಾನುಗೌರಿ.ಕಾಂ ಕರ್ನಾಟಕ ಹೈಕೋರ್ಟ್‌ನ ಜಂಟಿ ರಿಜಿಸ್ಟ್ರಾರ್‌ ಟಿ.ಎನ್ ಕನಕರಾಜುರವರನ್ನು ಮಾತನಾಡಿಸಿದಾಗ, “ಹೌದು ಪತ್ರ ಕಳಿಸಿರುವುದು ನಿಜ, ಈ ರೀತಿ ಶಿಫಾರಸ್ಸು ಪತ್ರ ಕಳಿಸುವುದು ತಪ್ಪೇನಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆಯೂ ಹಲವಾರು ಜನರಿಗೆ ಶಿಫಾರಸ್ಸು ಪತ್ರ ನೀಡಿದ್ದೇವೆ. ಕಾಲೇಜಿನವರು ಸೀಟು ಇದ್ದರೆ ಕೊಡತ್ತಾರೆ ಇಲ್ಲದಿದ್ದರೆ ಇಲ್ಲ ಎಂದು ತಿಳಿಸುತ್ತಾರೆ” ಎಂದರು.

ಅಧಿಕೃತವಾಗಿ ಹೈಕೋರ್ಟ್‌ನ ಅಧಿಕಾರ ಮತ್ತು ಮುಖ್ಯನ್ಯಾಯಾಧೀಶರ ಕಚೇರಿಯಿಂದ ಈ ರೀತಿ ಪತ್ರ ಬರೆಯುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲೆಡೆ ಹೀಗೆ ಮಾಡಲಾಗುತ್ತದೆ. ನಾವು ಕೂಡ ಈ ಹಿಂದೆ ಸಾಕಷ್ಟುಬಾರಿ ಮಾಡಿದ್ದೇವೆ, ಇದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ಇಂದು ಶ್ರೀಕೃಷ್ಣ ಜೈಲಿನಲ್ಲಿ ಜನಿಸಿದ್ದ. ನೀವು ಜೈಲಿನಿಂದ ಹೊರಹೋಗಲು ಬಯಸುವಿರಾ?: ಈ ಡೈಲಾಗ್ ಹೇಳಿದವರ್ಯಾರು ಗೊತ್ತೆ?

 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts