Homeಮುಖಪುಟಎಲ್ಐಸಿ ಶೇರು ಮಾರಾಟಕ್ಕೆ ಸಿದ್ದತೆ : ಆತಂಕಗೊಂಡ ಪಾಲಿಸಿದಾರರು...

ಎಲ್ಐಸಿ ಶೇರು ಮಾರಾಟಕ್ಕೆ ಸಿದ್ದತೆ : ಆತಂಕಗೊಂಡ ಪಾಲಿಸಿದಾರರು…

ಜೀವ ವಿಮಾ ಸಂಸ್ಥೆಯಲ್ಲಿ 30 ಕೋಟಿ ಮಂದಿ ಪಾಲಿಸಿದಾರರು ತಮ್ಮ ಹಣವನ್ನು ತೊಡಗಿಸಿದ್ದಾರೆ. ಎಲ್ಐಸಿ ಸಂಸ್ಥೆ ಮೇಲೆ ಜನರು ಇಟ್ಟಿರುವ ವಿಶ್ವಾಸ, ನಂಬಿಕೆಗೆ ಇದು ಸಾಕ್ಷಿಯಾಗಿದೆ.

- Advertisement -
- Advertisement -

ಭಾರತೀಯ ಜೀವ ವಿಮಾನ ನಿಗಮದಿಂದ ತನ್ನ ಶೇರುಗಳನ್ನು ಮಾರಾಟ ಮಾಡಲು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿರುವ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ದೇಶವೇ ಬೆಚ್ಚಿಬಿದ್ದಿದೆ. ಸ್ಪರ್ಧಾತ್ಮಕ ಯುಗದಲ್ಲೂ ಅತ್ಯಂತ ಬಲಿಷ್ಟ ಸಂಸ್ಥೆಯಾದ ಜೀವ ವಿಮಾ ನಿಗಮವನ್ನು ಖಾಸಗಿಯವರ ಕೈಗೊಪ್ಪಿಸಿ ಎಳ್ಳುನೀರು ಬಿಡಲು ಸರ್ಕಾರ ಹೊರಟಿದೆ. ಖಾಸಗಿ ವಿಮಾ ಕಂಪನಿಗಳ ಜೊತೆ ಸಮರ್ಥ ಪೈಪೋಟಿ ನೀಡಿ ಲಾಭದಲ್ಲಿರುವ ಸಂಸ್ಥೆಯನ್ನು ಏಕಾಏಕಿ ಖಾಸಗಿಯವರ ಕೈಗೆ ಒಪ್ಪಿಸಿದರೆ ಮುಂದಿನ ಪರಿಣಾಮ ಏನಾಗಬಹುದೆಂಬುದನ್ನು ಕೇಂದ್ರ ಊಹಿಸಿದಂತೆ ಕಾಣುತ್ತಿಲ್ಲ.

ಸೆಪ್ಟೆಂಬರ್ 1, 1956ರಲ್ಲಿ 231 ಖಾಸಗಿ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿ ಭಾರತೀಯ ಜೀವ ವಿಮಾ ನಿಗಮವನ್ನು ಸ್ಥಾಪಿಸಲಾಯಿತು. ಅಂದು ಈ ಖಾಸಗಿ ವಿಮಾ ಕಂಪನಿಗಳು ಸಾರ್ವಜನಿಕರಿಗೆ ಮೋಸ ಮಾಡುವುದರಲ್ಲಿ ತೊಡಗಿದ್ದವು. ಸಾಕಷ್ಟು ಜನರ ಹಣಕ್ಕೆ ಯಾವುದೇ ಭದ್ರತೆ ಇರಲಿಲ್ಲ. ಇದನ್ನು ಮನಗಂಡ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಖಾಸಗಿ ಕಂಪನಿಗಳನ್ನು ಒಂದುಗೂಡಿಸಿದ್ದರು. ಹೀಗಾಗಿ ಪಾಲಿಸಿದಾರರು ನಿಟ್ಟುಸಿರು ಬಿಟ್ಟರು. ಪಾಲಿಸಿದಾರರ ಹಣಕ್ಕೆ ಭದ್ರತೆ ಸಿಕ್ಕಿತ್ತು.

ಐದು ಕೋಟಿ ರೂಪಾಯಿಗಳಿಂದ ಆರಂಭವಾದ ಭಾರತೀಯ ಜೀವ ವಿಮಾ ನಿಗಮ ಇಂದು ದೇಶಾದ್ಯಂತ ವಿಸ್ತರಿಸಿಕೊಂಡು ಹೆಮ್ಮರವಾಗಿ ಬೆಳೆದು ನಿಂತಿದೆ. 8 ವಲಯಗಳು, 114 ವಿಭಾಗಗಳು ಮತ್ತು 2100 ಶಾಖೆ ಗಳನ್ನುಹೊಂದಿರುವ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯಲ್ಲಿ ಅಧಿಕಾರಿಗಳು, ನೌಕರರು ಸೇರಿ 2 ಲಕ್ಷ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 12 ಲಕ್ಷ ಮಂದಿ ಏಜೆಂಟರು ಇಡೀ ದೇಶಾದ್ಯಂತ ಹರಡಿ ಹೋಗಿದ್ದಾರೆ.. ಇವರನ್ನು ನಂಬಿ 14 ಲಕ್ಷ ಕುಟುಂಬಗಳ ಸುಮಾರು ಒಂದು ಕೋಟಿ ಜನರು ಜೀವನ ನಿರ್ವಹಣೆಗೆ ಸಂಸ್ಥೆ ಅನುಕೂಲ ಕಲ್ಪಿಸಿದೆ.

ಜೀವ ವಿಮಾ ಸಂಸ್ಥೆಯಲ್ಲಿ 30 ಕೋಟಿ ಮಂದಿ ಪಾಲಿಸಿದಾರರು ತಮ್ಮ ಹಣವನ್ನು ತೊಡಗಿಸಿದ್ದಾರೆ. ಎಲ್ಐಸಿ ಸಂಸ್ಥೆ ಮೇಲೆ ಜನರು ಇಟ್ಟಿರುವ ವಿಶ್ವಾಸ, ನಂಬಿಕೆಗೆ ಇದು ಸಾಕ್ಷಿಯಾಗಿದೆ. ಭಾರತೀಯ ಜೀವ ವಿಮಾ ನಿಗಮವನ್ನು ಸರಿಗಟ್ಟಬಲ್ಲ ಖಾಸಗಿ ಸಂಸ್ಥೆಯೊಂದು ಇದುವರೆಗೂ ಹುಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಹಲವು ಖಾಸಗಿ ವಿಮಾ ಸಂಸ್ಥೆಗಳು ದೇಶದಲ್ಲಿ ಕಾರ್ಯಾಚರಿಸುತ್ತಿದ್ದರೂ ಸರ್ಕಾರಿ ವಿಮಾ ಸಂಸ್ಥೆಯಷ್ಟು ನಂಬಿಕೆ ಉಳಿಸಿಕೊಂಡಿಲ್ಲ. ಸಾಮಾನ್ಯ ಬಡ ರೈತ, ಹೂವಿನ ವ್ಯಾಪಾರಿಯಿಂದ ಹಿಡಿದು ನೌಕರರು, ಅಧಿಕಾರಿಗಳು ಶ್ರೀಮಂತರೂ ಕೂಡ ಎಲ್ಐಸಿ ಪಾಲಿಸಿದಾರರಾಗಿದ್ದಾರೆ. ಇದು ಸಾರ್ವಜನಿಕ ಸಂಸ್ಥೆಯ ಹೆಗ್ಗಳಿಕೆ.

ಇಂತಹ ಹೆಗ್ಗಳಿಕೆ, ಜನರ ವಿಶ್ವಾಸ, ನಂಬಿಕೆ ಮತ್ತು ಪ್ರೀತಿಗೆ ಪಾತ್ರವಾಗಿರುವ ಭಾರತೀಯ ಜೀವ ವಿಮಾ ನಿಗಮದ ಕತ್ತು ಹಿಸುಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ. ಲಾಭದಲ್ಲಿರುವ ಸಾರ್ವಜನಿಕ ಸಂಸ್ಥೆಯೊಂದರ ಶೇರುಗಳನ್ನು ಖಾಸಗಿ ಕಂಪನಿಯರಿಗೆ ಕೊಳ್ಳೆ ಕೊಡಲು ಕೇಂದ್ರ ಮನಸ್ಸು ಮಾಡಿದ್ದು ಜನರ ನಂಬಿಕೆಗೆ ಭಾರೀ ಪೆಟ್ಟು ನೀಡಲು ಸಿದ್ದತೆ ಮಾಡಿಕೊಂಡಿದೆ. ಇದು ಸಮರ್ಥನೀಯವಾದ ಕಾರ್ಯವಲ್ಲ. ಇಂತಹ ಕೆಲಸಕ್ಕೆ ಕೈಹಾಕುವ ಮೊದಲು ಸರ್ಕಾರ ಹತ್ತು ಬಾರಿ ಆಲೋಚಿಸಬೇಕು. ಇಲ್ಲಿದಿದ್ದರೆ ಜನರು ಸರ್ಕಾರಗಳ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಈ ಎಚ್ಚರಿಕೆ ಪ್ರತಿಯೊಂದು ಸರ್ಕಾರಕ್ಕೂ ಇರಬೇಕು.

ಒಂದೊಮ್ಮೆ ಖಾಸಗೀಕರಣಗೊಳಿಸಿದರೆ ಸರ್ಕಾರಿ ಸ್ವಾಮ್ಯದ ಎಲ್ಐಸಿಯ ಭಾರತದ ಸ್ವಭಾವವು ವಿನಾಶಕಾರಿ ಬದಲಾವಣೆಗೆ ಬರಲಿದೆ ಎಂದು ಭಾವಿಸಲಾಗಿದೆ, ಇದು ಕೋಟಿಗಟ್ಟಲೆ ಪಾಲಿಸಿದಾರರು ಮತ್ತು ಒಟ್ಟಾರೆ ದೇಶದ ಮೇಲೆ ಪರಿಣಾಮ ಬೀರುತ್ತದೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕುರುಡಾಗಿ ಉಳಿಸಲು ಭಾರತದ ಸಾಮಾನ್ಯ ಜನರು ಎಲ್‌ಐಸಿಗೆ ನೀಡಿರುವ ನಂಬಿಕೆ ಬಿರುಕು ಬಿಡುತ್ತದೆ. ನಿರ್ಣಾಯಕ ಆರ್ಥಿಕ ಸಂದರ್ಭಗಳಲ್ಲಿ ಎಲ್ಐಸಿಗೆ ರಾಷ್ಟ್ರದ ಸಂರಕ್ಷಕನಾಗಿ ಬರಲು ಸಾಧ್ಯವಾಗುವುದಿಲ್ಲ ಮತ್ತು ಮೇಲಾಗಿ ಸರ್ಕಾರಕ್ಕೆ ಭಾರಿ ಪ್ರಮಾಣದ ಲಾಭಾಂಶವನ್ನು ನೀಡಲಾಗುತ್ತದೆ ಎಂದು ಅಖಿಲ ಭಾರತ ಜೀವ ವಿಮಾ ನೌಕರರ ಸಂಘದ ನಂಜುಂಡಸ್ವಾಮಿ ಹೇಳುತ್ತಾರೆ.

ಎಲ್‌ಐಸಿಯ ಅಡಿಪಾಯ ಎಷ್ಟು ಪ್ರಬಲವಾಗಿದೆ. ವಿಮಾ ವಲಯವನ್ನು ತೆರೆದ 20 ವರ್ಷಗಳ ನಂತರವೂ ಎಲ್‌ಐಸಿ 70 ಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ಮಾರುಕಟ್ಟೆಯ ನಾಯಕರಾಗಿ ಉಳಿದಿದೆ ಮತ್ತು ಇತರ 23 ಜೀವ ವಿಮಾ ಕಂಪನಿಗಳೊಂದಿಗೆ ಸ್ಪರ್ಧಿಸುತ್ತಿದೆ. ಈ ಹಣಕಾಸು ವರ್ಷದ ಎಲ್‌ಐಸಿ 6ರಷ್ಟು ಮಾರುಕಟ್ಟೆ ಪಾಲನ್ನು ಮರಳಿ ಪಡೆದಿದೆ ಮತ್ತು ಕೈಗಾರಿಕಾ ಬೆಳವಣಿಗೆಗಿಂತ ಎಲ್‌ಐಸಿ ಬೆಳವಣಿಗೆ ಹೆಚ್ಚಾಗಿದೆ. ಎಲ್ಐಸಿ ಕಳೆದ 15 ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಲಾಭದ ಹಣವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಲೇ ಬರುತ್ತಿದೆ.

ಆದಿತ್ಯ ಬಿರ್ಲಾ ಸನ್ ಲೈಪ್, ಎಚ್.ಡಿ.ಎಫ್.ಸಿ, ಐಸಿಐಸಿಐ ಪ್ರುಡೆನ್ಸಿಯಲ್ ಲೈಪ್, ಮ್ಯಾಕ್ಸ್ ಲೈಪ್, ಎಸ್.ಬಿ.ಐ ಲೈಪ್, ಶ್ರೀರಾಮ್ ಲೈಪ್ ಐಡಿಬಿಐ ಫೆಡರಲ್ ಲೈಪ್ ಹೀಗೆ 24 ಖಾಸಗಿ ವಿಮಾ ಕಂಪನಿಗಳು ಮಾರುಕಟ್ಟೆಯಲ್ಲಿದ್ದರೂ ಎಲ್.ಐ.ಸಿ ಸಂಸ್ಥೆಯ ಎತ್ತರಕ್ಕೆ ಯಾರೂ ಬೆಳೆಯಲಾಗಿಲ್ಲ. ಜನರ ನಂಬಿಕೆ, ವಿಶ್ವಾಸವನ್ನು ಗಳಿಸಲು ಸಾಧ್ಯವಾಗಿಲ್ಲ. ಒಂದು ಅಂದಾಜಿನ ಪ್ರಕಾರ ಎಲ್.ಐ.ಸಿಯ 1 ಲಕ್ಷ ಕೋಟಿ ಶೇರುಗಳನ್ನು ಖಾಸಗಿ ಯವರಿಗೆ ಮಾರಾಟ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ ಎಂದು ತಿಳಿದುಬಂದಿದೆ. ಸರ್ಕಾರ ಎಲ್ಐಸಿ ಶೇರುಗಳನ್ನು ಮಾರಾಟಕ್ಕಿಟ್ಟರೆ ಪಾಲಿಸಿದಾರರ ಹಣಕ್ಕೆ ಯಾವುದೇ ಭದ್ರತೆ ಇರುವುದಿಲ್ಲ.

ಈಗಾಗಲೇ ಬಿಎಸ್ಎನ್ಎಲ್ ಟೈಟಾನಿಕ್ ನಂತೆ ಮುಳುಗುತ್ತಿದೆ. ಹಾಗೆಯೇ ಎಲ್ಐಸಿಯನ್ನು ಖಾಸಗೀಕರಣಗೊಳಿಸಿದರೆ ಇನ್ನು ಕೆಲವೇ ವರ್ಷಗಳಲ್ಲಿ ಬಾಗಿಲು ಮುಚ್ಚಿಕೊಳ್ಳಲಿದೆ. ಎಲ್.ಐ.ಸಿ ಶೇರುಗಳ ಮಾರಾಟದ ಮಾಹಿತಿ ಪಾಲಿಸಿದಾರರಲ್ಲಿ ದುಗುಡವನ್ನು ತಂದೊಡ್ಡಿದೆ. ನಮ್ಮ ಹಣ ಬರುತ್ತದೋ ಇಲ್ಲವೇ ಎಂಬ ಅತಂಕ ಪಾಲಿಸಿದಾರರಲ್ಲಿ ಮನೆ ಮಾಡಿದೆ. ಇದೇ ಕಾರಣಕ್ಕೆ ಏಜೆಂಟರನ್ನು ಕಂಡು ಹಣವನ್ನು ಹಿಂತೆಗೆದುಕೊಳ್ಳುವ ಕುರಿತು ಮಾತನಾಡುತ್ತಿದ್ದಾರೆ. ಈಗ ಪಾಲಿಸಿದಾರರ ಪಾಡು ಹೇಳತೀರದಾಗಿದೆ. ಯಾವುದೇ ಕಾರಣಕ್ಕು ಎಲ್ಐಸಿಯನ್ನು ಖಾಸಗೀಕರಣಗೊಳಿಸಬಾರದು ಎಂದು ಪ್ರತಿಭಟನೆಗಳು ತೀವ್ರಗೊಳುತ್ತಿವೆ. ಬಜೆಟ್ ನಲ್ಲಿ ಪ್ರಸ್ತಾಪವಾದ ಈ ಸುದ್ದಿ ಆತಂಕಕ್ಕೆ ಕಾರಣವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. LICಯ ಖಾಸಗೀಕರಣ ಅನ್ಯಾಯದ ಪರಮಾವಧಿ. ಜನಸಾಮಾನ್ಯರ ನಂಬಿಕೆಯನ್ನು ಸಂಪೂರ್ಣ ಕಳೆದುಕೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕ ಹಕ್ಕೂ ಇಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...