Homeಕರ್ನಾಟಕಬಿಹಾರ ಸರಕಾರದಂತೆ ಕರ್ನಾಟಕದಲ್ಲೂ ಜಾತಿ ಗಣತಿ ವರದಿ ಬಹಿರಂಗಪಡಿಸಬೇಕು: ಬಿ.ಕೆ ಹರಿಪ್ರಸಾದ್‌

ಬಿಹಾರ ಸರಕಾರದಂತೆ ಕರ್ನಾಟಕದಲ್ಲೂ ಜಾತಿ ಗಣತಿ ವರದಿ ಬಹಿರಂಗಪಡಿಸಬೇಕು: ಬಿ.ಕೆ ಹರಿಪ್ರಸಾದ್‌

- Advertisement -
- Advertisement -

ಕರ್ನಾಟಕ ಸರ್ಕಾರವೂ ಕೂಡ ಬಿಹಾರ ಸರ್ಕಾರದಂತೆ ರಾಜ್ಯದಲ್ಲಿ ಈಗಾಗಲೇ ಸಿದ್ದವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್‌ ನಾಯಕ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ”ಜಾತಿ ಗಣತಿ ಬಹಿರಂಗ ಪಡಿಸುವ ಕುರಿತು ಹಾಗೂ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕ ರಾಹುಲ್‌ ಗಾಂಧಿ ಅವರು ಧ್ವನಿ ಎತ್ತಿದ್ದಾರೆ. ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡ ರಾಜ್ಯದಲ್ಲಿ ಈಗಾಗಲೇ ಸಿದ್ದವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನ ಬಹಿರಂಗ ಪಡಿಸುವ ದಿಟ್ಟತನ ತೋರಬೇಕಿದೆ” ಎಂದು ಹೇಳಿದ್ದಾರೆ.

”INDIA” ಮೈತ್ರಿ ಕೂಟದ ಆಡಳಿತವಿರುವ ಬಿಹಾರ ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಿದ ಸರ್ಕಾರದ ಐತಿಹಾಸಿಕ ನಡೆ ಅಭಿನಂದನೀಯ. ಹಿಂದುಳಿದ, ಶೋಷಿತವೂ ಸೇರಿದಂತೆ ಎಲ್ಲಾ ವರ್ಗಗಳ ಉನ್ನತಿ ಹಾಗೂ ಅಭಿವೃದ್ಧಿಗೆ ಜಾತಿಗಣತಿ ವರದಿ ಸಹಾಯ ಮಾಡುತ್ತದೆ ಎಂಬ ವೈಜ್ಞಾನಿಕ ಧೋರಣೆ ಕಾಂಗ್ರೆಸ್ ಪಕ್ಷದ್ದಾಗಿದೆ” ಎಂದು ಹರಿಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.

ಬಿಹಾರದಲ್ಲಿ ಜಾತಿಗಣತಿಯ ವರದಿಯನ್ನು ಸರಕಾರ ಬಿಡುಗಡೆಗೊಳಿಸಿದೆ. ಈ ಮೂಲಕ ದೇಶದಲ್ಲಿ ಜಾತಿ ಆಧಾರಿತ ಸಮೀಕ್ಷೆಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಬಿಹಾರ ಪಾತ್ರವಾಗಿದೆ.

ರಾಜ್ಯದಲ್ಲಿ 36%ದಷ್ಟು ಅತಿಹೆಚ್ಚು ಹಿಂದುಳಿದಿರುವ ಮತ್ತು 27% ಹಿಂದುಳಿದ ವರ್ಗದ ಜನರಿದ್ದಾರೆ. 19.7%  ಪರಿಶಿಷ್ಟ ಜಾತಿಯ ಜನ ಮತ್ತು 1.7%  ಪರಿಶಿಷ್ಟ ಪಂಗಡಗಳ ಜನರಿದ್ದಾರೆ. ಸಾಮಾನ್ಯ ವರ್ಗದ ಜನಸಂಖ್ಯೆಯು  15.5% ದಷ್ಟಿದೆ. ರಾಜ್ಯದ ಒಟ್ಟು ಜನಸಂಖ್ಯೆ 13.1 ಕೋಟಿಗೂ ಹೆಚ್ಚು ಎಂದು ಜಾತಿಗಣತಿಯಲ್ಲಿ ಬಹಿರಂಗವಾಗಿದೆ.

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಯಾದವ್ ಸಮುದಾಯವು ಅತಿಹೆಚ್ಚು ಅಂದರೆ ಒಬಿಸಿ ವರ್ಗಗಳಲ್ಲಿ 14.27 ಶೇಕಡಾ ಜನಸಂಖ್ಯೆಯನ್ನು ಹೊಂದಿದೆ. ಭೂಮಿಹಾರ್ ಜನಸಂಖ್ಯೆ ಶೇಕಡಾ 2.86 ರಷ್ಟಿದ್ದರೆ, ಬ್ರಾಹ್ಮಣರು ಶೇಕಡಾ 3.66 ರಷ್ಟಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮುದಾಯಕ್ಕೆ ಸೇರಿದ ಕುರ್ಮಿಗಳು ಜನಸಂಖ್ಯೆ ಶೇಕಡಾ 2.87 ರಷ್ಟಿದ್ದಾರೆ. ಮುಸಾಹರ್‌ಗಳು ಶೇಕಡಾ 3 ರಷ್ಟಿದ್ದಾರೆ.

ಈ ಜಾತಿಗಣತಿಯ ವರದಿಯು ರಾಜ್ಯದಲ್ಲಿ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಲಿದೆ. ಒಬಿಸಿಗಳಿಗೆ ಕೋಟಾಗಳನ್ನು ಹೆಚ್ಚಿಸುವ ಬೇಡಿಕೆ ಕೂಡ ಹೆಚ್ಚಾಗಳಿದೆ. ಈಗ ರಾಜ್ಯದಲ್ಲಿ ಒಬಿಸಿಗಳಿಗೆ 27% ಮೀಸಲಾತಿ ಇದೆ. 2024ರ ಲೋಕಸಭಾ ಚುನಾವಣೆಗೆ ತಿಂಗಳುಗಳ ಮೊದಲು ಬಿಡುಗಡೆಯಾದ ಈ ಅಂಕಿಅಂಶಗಳ ಪ್ರಕಾರ ಒಬಿಸಿಗಳು ರಾಜ್ಯದಲ್ಲಿ ಶೇಕಡಾ 63.1ರಷ್ಟಿದ್ದಾರೆ.

ಈ ಜಾತಿಗಣತಿ ವರದಿಯು ಬಿಹಾರದಲ್ಲಿ ಒಬಿಸಿಗಳ ಪ್ರಾಬಲ್ಯ ಮತ್ತು ಚುನಾವಣಾ ಪ್ರಭಾವವನ್ನು ಒತ್ತಿಹೇಳುತ್ತಿದೆ.

ಇದನ್ನೂ ಓದಿ: ಬಿಹಾರದ ಜಾತಿ ಗಣತಿ ಸ್ವಾಗತಾರ್ಹ, ಇದು ‘ಸರಿಯಾದ ಪರಿಹಾರ’ ಎಂದು ಕೇಂದ್ರಕ್ಕೆ ಮಾಯಾವತಿ ಸಲಹೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...