Homeಆರೋಗ್ಯಬಿಹಾರದಲ್ಲಿನ ನೂರಾರು ಮಕ್ಕಳ ಸಾವಿಗೆ ಅಪೌಷ್ಟಿಕತೆ ಮತ್ತು ಸರಕಾರಿ ನಿರ್ಲಕ್ಷವೇ ಕಾರಣ

ಬಿಹಾರದಲ್ಲಿನ ನೂರಾರು ಮಕ್ಕಳ ಸಾವಿಗೆ ಅಪೌಷ್ಟಿಕತೆ ಮತ್ತು ಸರಕಾರಿ ನಿರ್ಲಕ್ಷವೇ ಕಾರಣ

- Advertisement -
- Advertisement -

| ಡಾ. ಸ್ವಾತಿ ಶುಕ್ಲಾ |

ಅನುವಾದ: | ನಿಖಿಲ್ ಕೋಲ್ಪೆ |

ಇಂಗ್ಲಿಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಎಕ್ಯೂಟ್ ಎನ್ಸಿಫಲೈಟಿಸ್ ಸಿಂಡ್ರೋಮ್ ಎಂಬ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 113ಕ್ಕೂ ಹೆಚ್ಚಾಗಿದೆ. ಈ ಕಾರಣದಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬಿಹಾರಕ್ಕೆ ಈ ರೋಗವು ಹೊಸದಲ್ಲ. ಲಿಚಿ ಹಣ್ಣಿನ ತೋಟಗಳು ಸಾಮಾನ್ಯವಾಗಿರುವ ಮುಜಾಫರ್‌ಪುರ ಮತ್ತು ನೆರೆಯ ಪ್ರದೇಶಗಳಲ್ಲಿ 1995ರಿಂದಲೇ ಎನ್ಸಿಫಲೈಟಿಸ್ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಈಗಿನ ಪರಿಸ್ಥಿತಿಗೆ ಅಪೌಷ್ಟಿಕತೆಯಿಂದ ಹಿಡಿದು, ಸೆಖೆ, ದುರ್ಬಲ ರೋಗ ನಿರೋಧಕತೆಯ ತನಕ ಹಲವು ಅಂಶಗಳು ಕಾರಣವಾಗಿದ್ದು, ಲಿಚಿಯಲ್ಲಿ ಇರುವ ಕೆಲವು ನಿರ್ದಿಷ್ಟ ರಾಸಾಯನಿಕಗಳು ಇದನ್ನು ಉಲ್ಭಣಿಸುವಂತೆ ಮಾಡಿವೆ.

What is AES? ಎಇಎಸ್ ಎಂದರೇನು?

ಎಕ್ಯೂಯೂ ಎಂಸೆಫಲೈಟಿಸ್ ಸಿಂಡ್ರೋಮ್ ಎಂದು ಮೆದುಳಿಗೆ ಸಂಬಂಧಿಸಿದ ರೋಗವಾಗಿದ್ದು, ಬ್ಯಾಕ್ಟೀರಿಯಾ, ವೈರಸ್, ಪರೋಪಜೀವಿಗಳು, ಶಿಲೀಂದ್ರಗಳು, ರಾಸಾಯನಿಕಗಳು, ಕೆಲವು ರೀತಿಯ ವಿಷವಸ್ತುಗಳು ಇದನ್ನು ಉಂಟುಮಾಡುತ್ತವೆ. ರೋಗ ಲಕ್ಷಣಗಳು ಜ್ವರ, ತಲೆನೋವು, ಅಪಸ್ಮಾರದ ಲಕ್ಷಣಗಳನ್ನು ಒಳಗೊಂಡಿರಬಹುದು. ಈ ರೋಗವು ಮಾನ್ಸೂನ್ ವೇಳೆ ಮತ್ತು ಅದರ ನಂತಥದ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು. ಅದು ಹೆಚ್ಚಾಗಿ ಬರುವುದು 15ವರ್ಷಗಳಿಗಿಂತ ಕೆಳಗಿನ ಮಕ್ಕಳಿಗೆ. ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮುಂತಾದ ಗಂಗಾ ನದಿಬಯಲಿನ ಪ್ರದೇಶಗಳಲ್ಲಿ, ಅಸ್ಸಾಂ, ತಮಿಳುನಾಡಿನ ಕೆಲವು ಬಯಲುಗಳು ಈ ರೋಗಕ್ಕೆ ಸೂಕ್ತ ವಾತಾವರಣ ಒದಗಿಸುತ್ತವೆ. ತಕ್ಷಣ ಆಸ್ಪತ್ರೆಗೆ ಸೇರಿಸುವುದು ಮತ್ತು ಸೂಕ್ತ ಔಷದೋಪಚಾರದಿಂದ ಇದು ಗುಣವಾಗುವುದು.

ಹೆಚ್ಚಿನ ಪ್ರಕರಣಗಳು ಮಕ್ಕಳು ಹೊಟ್ಟೆಗೆ ಏನೂ ತಿನ್ನದೇ, ಬರಿಹೊಟ್ಟೆಯಲ್ಲಿ ಕಾಯಿ ಲೀಚಿ ತಿಂದಿದ್ದ ಪ್ರದೇಶದಲ್ಲಿಯೇ ವರದಿಯಾಗಿವೆ. ಕಾಯಿ ಲೀಚಿಯಲ್ಲಿ ವಿಷಕಾರಿಗಳಾದ ಹೈಪೋಗ್ಲೈಸಿನ್ ಎ ಮತ್ತು, ಮಿಥೈಲ್‌ ನ್ಸೈಕ್ಲೋಪ್ರೊಪೈಲ್‌ಗೈಸಿನ್ (ಎಂಸಿಪಿಜಿ) ಎಂಬ ಉದ್ದವಾದ ಮತ್ತು ಹೇಳಲು ಕಷ್ಟವಾಗುವ, ಹೆಸರುಗಳನ್ನು ಹೊಂದಿರುವ ರಾಸಾಯನಿಕಗಳನ್ನು ಹೊಂದಿದೆ. ಇವುಗಳಲ್ಲಿ ಹೈಪೋಗ್ಲೈಸಿನ್ ಎ ಎಂಬುದು ನೈಸರ್ಗಿಕವಾಗಿ ಉತ್ಪತ್ತಿಯಾಗುವ ಎಮಿನೋ ಅಮ್ಲವಾಗಿದ್ದು, ಎರಡನೆಯದಾದ ಎಂಸಿಪಿಜಿ ಎಂಬ ಸಂಯುಕ್ತ ರಾಸಾಯನಿಕವು ತೀವ್ರವಾದ ವಾಂತಿಯನ್ನು, ಅಂದರೆ, (ಜಮೈಕನ್ ವಾಮಿಟಿಂಗ್ ಡಿಸೀಸ್) ಎಂಬ ರೋಗ ಲಕ್ಷಣಗಳನ್ನು ಉಂಟುಮಾಡುತ್ತದೆ. ಇವುಗಳಲ್ಲಿ ಎಂಸಿಪಿಜಿ ಎಂಬುದು ಹಸಿ ಬೀಜಗಳಲ್ಲಿ ಇರುವ ರಕ್ತದಲ್ಲಿ ಸಕ್ಕರೆ ಅಂತ ಕಡಿಮೆ ಮಾಡುವುದು, ವಿಷಕಾರಿ ರಾಸಾಯನಿಕ ಸಂಯುಕ್ತವಾಗಿದ್ದು, ಏಕಾಏಕಿ ರಕ್ಕದೊಟ್ಟಡದ ಕುಸಿತ, ವಾಂತಿ, ಮಾನಸಿಕ ಸ್ಥಿತಿಯ ಬದಲಾವಣೆ- ಇದು ಸೋಮಾರಿತನದಲ್ಲಿ ಕಾಣಬಹುದು. ಈ ರಾಸಾಯನಿಕಗಳು ಹಸಿ ಲೀಚಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇವೆ ಎಂಬುದು ಅತ್ಯಂತ ಗಮನಾರ್ಹ. (ಲಿಚಿ ಎಂಬುದು ಒಂದು ಹಳ್ಳಿ ಮಕ್ಕಳು ತಿನ್ನುವ ವಿದೇಶಿ ಕಾಡು ಹಣ್ಣಾಗಿದ್ದು, ಇಂದು ಸಿರಿವಂತರ ನೆಚ್ಚಿನ ಗ್ಲಾಮರ್ ಹಣ್ಣಾಗಿದೆ-ಅನುವಾದಕ)

ಭಾರತೀಯ ರೋಗ ನಿಯಂತ್ರಣ ಸಂಸ್ಥೆಯ ಪ್ರಕಾರ ಮತ್ತು ಇತರ ಸಂಸ್ಥೆಗಳ ಪ್ರಕಾರ ಲಿಚಿ ಈ ರೋಗಕ್ಕೆ ಮುಖ್ಯ ಕಾರಣವಲ್ಲ. ಈಗಾಗಲೇ ಹೊಟ್ಟೆಗಿಲ್ಲದ ಮಕ್ಕಳು ಬೆಳಿಗ್ಗೆ ಎದ್ದ ಕೂಡಲೇ ಹಸಿವಿನಿಂದ ಕಾಯಿ ಲಿಚಿ ತಿನ್ನುವುದೇ ಆಗಿದೆ. ಅಪೌಷ್ಟಿಕತೆಯ ಕಾರಣದಿಂದ ಮೊದಲೇ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವ ಮಕ್ಕಳು ಇದನ್ನು ತಿನ್ನುವುದರಿಂದ ಸಕ್ಕರೆ, ಅಂದರೆ ಗ್ಲೂಕೋಸ್ ಇನ್ನೂ ಕಡಿಮೆಯಾಗಿ, ತೀವ್ರ ಪ್ರಕರಣಗಳಲ್ಲಿ ತಲೆ ಸುತ್ತುವಿಕೆ, ಕೊನೆಗೆ ಸಾವಿಗೂ ಕಾಣವಾಗಬಹುದು.

ಈ ಸಾವುಗಳನ್ನು ತಪ್ಪಿಸಬಹುದುದೇ? ಖಂಡಿತಾ!

ಹಿಂದೆಯೇ ಬರೆದಿರುವುದನ್ನು ಓದಿ. ಇಲ್ಲಿ ಇದು ಸಾಮಾನ್ಯ. 2012ರಲ್ಲಿ ಇಲ್ಲಿ 122 ಮಕ್ಕಳ ಸಾವುಗಳು ಸಂಭವಿಸಿವೆ. ಇಲ್ಲಿನ ಆರೋಗ್ಯ ಇಲಾಖೆ ಸ್ಟ್ಯಾಂಡರ್ಡ್ ಅಪರೇಟಿಂಗ್ ಪ್ರೊಸಿಜರ್ಸ್ (ಎಸ್ಓಪಿ)) ಎಂಬ ಒಂದು ವ್ಯವಸ್ಥೆಯನ್ನು ಜಾರಿಗೊಳಿಸಿತು. ಅದು ರೋಗ ಲಕ್ಷಣಗಳ ಆಧಾರದಲ್ಲಿ ಅದನ್ನು ನಿಯಂತ್ರಿಸುವ ಕುರಿತಾಗಿತ್ತು. ಸರಿ, ಈ ವ್ಯವಸ್ಥೆಯು ಆಶಾ ಕಾರ್ಯಕರ್ತೆಯರು, ಪಂಚಾಯತ್, ರಾಜ್ಯಾಡಳಿತ, ಮಾಧ್ಯಮ, ಸರ್ಕಾರೇತರ ಸಂಸ್ಥೆಗಳು, ಪ್ರಚಾರ ಅಭಿಯಾನಗಳು, ಇತ್ಯಾದಿಗಳನ್ನು ಒಳಗೊಂಡಿತ್ತು. ಇದು ರೋಗ ನಿಯಂತ್ರಣದಲ್ಲಿ ಬಹಳಷ್ಟು ಪರಿಣಾಮಕಾರಿಯಾಯಿತು. ಆ ಕಾಲದಲ್ಲಿ ಮುಜಾಫರ್‌ಪುರ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ, ವೈದ್ಯರು, ದಾದಿಗಳ ಹತ್ತಿರ ಗ್ಲೂಕೋಸ್ ಕಿಟ್ ಲಭ್ಯವಿತ್ತು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ದಿನ ರಾತ್ರಿ ತಪಾಸಣೆ ನಡೆಸುತ್ತಿದ್ದರು. ಕಾರಣ ಇಷ್ಟೇ. ಮಕ್ಕಳು ಬರೇ ಹೊಟ್ಟೆಯಲ್ಲಿ ಮಲಗುತ್ತಿದ್ದರೋ ಎಂದು ನೋಡಲು.

ಹಾಗಾಗಿ ಸರ್ಕಾರ ಈ ಕೂಡಲೇ ಬಡವರಿಗೆ ಸಹಾಯ ಹಸ್ತ ಚಾಚಬೇಕು. ಹಸಿದು ಮಲಗುವುದನ್ನು ತಪ್ಪಿಸಬೇಕು. ಆರೋಗ್ಯ ಸೇವೆಯನ್ನು ಉಚಿತಗೊಳಿಸಬೇಕು. ಉದ್ಯೋಗ ನೀಡುವುದಕ್ಕೆ ಮುಂದಾಗಬೇಕು. ಆಗ ಈ ರೋಗ ಬರದಂತೆ ತಡೆಯಬಹುದಾಗಿದೆ.

2019ರಲ್ಲಿ ತಪ್ಪೇನು?

ಸರಳವಾಗಿ ಹೇಳುವುದಾದರೆ, ಮೇಲೆ ಹೇಳಿದ ಎಸ್ಓಪಿ ನಿರ್ಲಕ್ಷ್ಯ, ತೀವ್ರ ಅಪೌಷ್ಟಿಕತೆ, ಬಿಸಿ ಗಾಳಿಯಿಂದ ಉಂಟಾದ ತೀವ್ರ ಸೆಖೆ, ಶುದ್ಧ ನೀರಿನ ಕೊರತೆ ಬಿಹಾರದಲ್ಲಿ ಈಗಿನ ಬಿಕ್ಕಟ್ಟಿಗೆ ಕಾರಣ.

ಬಿಹಾರದಲ್ಲಿ 44 ಶೇಕಡಾ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.  ಈ ಅಪೌಷ್ಟಿಕತೆಯು ಅವರ ರೋಗ ನಿರೋಧಕ ಶಕ್ತಿಯನ್ನು ಕುಗ್ಗುತ್ತದೆ.  ಈಗ ಸಾವಿಗೀಡಾದ ಮಕ್ಕಳಲ್ಲಿ ಬಹುತೇಕರು ತೀರಾ ಬಡ ಕುಟುಂಬದವರಾರಾಗಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ‘ಡೌನ್ ಟು ಅರ್ಥ್’ ಪತ್ರಿಕೆಯ ಒಂದು ವರದಿಯಲ್ಲಿ ಹೇಳಿರುವಂತೆ ಸಾಯುತ್ತಿರುವ ಮಕ್ಕಳಲ್ಲಿ 70 ಶೇಕಡಾ ಹೆಣ್ಣು ಮಕ್ಕಳು. ಅದರಲ್ಲೂ ಮುಖ್ಯವಾಗಿ ಅತ್ಯಂತ ದಲಿತರಾಗಿರುವ ಜಾತಿಗಳಿಗೆ ಸೇರಿದವರು. ಈ ತಡೆದುಯಬಹುದಾದ ಸಾವುಗಳಿಗೆ ಮುಖ್ಯ ಕಾರಣವೆಂದರೆ, ದಲಿತ ವರ್ಗಗಳ, ಅದಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳ ಕುರಿತು ಇರುವ ಅಸಡ್ಡೆ.

ಜೂನ್ 10ರಂದು ಒಂದೇ ದಿನ 20 ಮಕ್ಕಳು ಸತ್ತ ವರದಿ ಬಂದ ನಂತರವೇ ರಾಜ್ಯ ಘನಘೋರ ನಿದ್ದೆಯಿಂದ ಎಚ್ಚೆತ್ತುಕೊಂಡಿತು. ಆರೋಗ್ಯ ರಾಜ್ಯ ಮಂತ್ರಿ ಅಶ್ವಿನಿ ಚೌಧರಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾವುದೇ ಎಗ್ಗಿಲ್ಲದೇ ಚುನಾವಣಾ ಕಾರಣದಿಂದ ಈ ಬಾರಿ ಅರೋಗ್ಯ ಜಾಗೃತಿ ಕಾರ್ಯಕ್ರಮಗಳು ಸರಿಯಾಗಿ ನಡೆಯಲಿಲ್ಲ ಎಂದು ‘ಪ್ರಾಮಾಣಿಕ’ವಾಗಿಯೇ ಹೇಳಿಬಿಟ್ಟಿದ್ದಾರೆ. ಈ ಜಾಗೃತಿ ಕಾರ್ಯಕ್ರಮಗಳು ಎನ್ಓಪಿಯ ಮುಖ್ಯ ಭಾಗವಾಗಿದ್ದು, ಇದು ರಾಷ್ಟ್ರೀಯ ಸುದ್ದಿ ಆದ ಬಳಿಕವೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದಾರೆ.

ಉತ್ತರದಾಯಿತ್ವ ಎಲ್ಲಿದೆ? ಜನರಿಗೆ ನೀಡಬೇಕಾಗಿದ್ದ ಜನಶಕ್ತಿ ಮತ್ತು ಸಂಪನ್ಮೂಲಗಳನ್ನು ಚುನಾವಣೆ ಕಡೆಗೆ ತಿರುಗಿಸಲಾಗಿತ್ತು. ಇದರ ಸಂಪೂರ್ಣ ಜವಾಬ್ದಾರಿಯನ್ನು ಮುಂದಿನ ಐದು ವರ್ಷಗಳ ರಾಜ್ಯಭಾರಕ್ಕಾಗಿ ಚುನಾವಣಾ ಸಭೆಗಳಲ್ಲಿ ವ್ಯಸ್ತವಾಗಿದ್ದ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಹಿಸಿಕೊಳ್ಳಬೇಡವೆ? ರಾಜ್ಯ ಸರಕಾರವು ಈ ಎಳೆಯ ಮಕ್ಕಳ ಅಪೌಷ್ಟಿಕತೆಯ ಪರಿಸ್ಥಿತಿಯನ್ನೂ ಬದಲಿಸುವಲ್ಲಿ ವಿಫಲವಾಗಿರುವುದನ್ನೂ ಒಪ್ಪಿಕೊಳ್ಳಬೇಡವೆ?

ಹೊಟ್ಟೆಗಿಲ್ಲದ ಮಕ್ಕಳು ಯಾವುದೇ ಹಣ್ಣು ತಿಂದರೆಂದು ಅವರನ್ನಾಗಲೀ, ಅವರ ಹೆತ್ತವರನ್ನಾಗಲೀ ಯಾರು ದೂರಲು ಸಾಧ್ಯವಿದೆಯೇ? ಯವುದೇ ಮಗು ಹೊಟ್ಟೆಗಿಲ್ಲದೇ ಮಲಗಲು ಬಿಡಬಾರದು ಎಂಬುದು ನಮ್ಮ ಜವಾಬ್ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...