Homeಕರ್ನಾಟಕಮಂಗಳೂರು: ಬಜರಂಗದಳ ಮುಖಂಡ, ತಂಡದಿಂದ ಗೂಂಡಾಗಿರಿ; ನಾಲ್ವರ ಮೇಲೆ ಹಲ್ಲೆ

ಮಂಗಳೂರು: ಬಜರಂಗದಳ ಮುಖಂಡ, ತಂಡದಿಂದ ಗೂಂಡಾಗಿರಿ; ನಾಲ್ವರ ಮೇಲೆ ಹಲ್ಲೆ

- Advertisement -
- Advertisement -

ಜಾಗದ ವಿಚಾರವಾಗಿ ಬಜರಂಗದಳ ಮುಖಂಡ ಮತ್ತು ತಂಡ ಅಂಗಡಿಗೆ ನುಗ್ಗಿ ನಾಲ್ವರ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಜಿನ ಉಪ್ಪಿನಂಗಡಿ ಪೇಟೆಯಲ್ಲಿ ನಡೆದಿದೆ.

ಅಂಗಡಿಯಿಂದ ಹೊರಗೆಳೆದು ನಡುರಸ್ತೆಯಲ್ಲಿ ನಾಲ್ವರ ಮೇಲೆ ಹಲ್ಲೆಗೈದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಜರಂಗದಳ ಮುಖಂಡ, ರೌಡಿಶೀಟರ್ ಭರತ್ ಕುಮ್ಡೇಲು, ಬಜರಂಗದಳದ ಜಗಜೀವನ್ ರೈ, ಭವಿಷ್, ಸಂದೀಪ್ ಎಂಬವರು ಅಂಗಡಿಗೆ ನುಗ್ಗಿ ಹರೀಶ ನಾಯ್ಕ, ಸುದರ್ಶನ್ ಕುಮಾರ್, ರಮಾನಂದ ಎಂಬವರನ್ನು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಂಗಡಿಯ ಒಳಗಿದ್ದವರನ್ನು ಹೊರಗೆಳೆದು ನಡುರಸ್ತೆಯಲ್ಲಿ ಹಲ್ಲೆಗೈದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವವರ ಮೇಲಿನ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಭರತ್ ಕುಮ್ಡೇಲು ಕಲ್ಲಡ್ಕದ ಬಜರಂಗದಳ ಮುಖಂಡನಾಗಿದ್ದು ಆತನ ವಿರುದ್ಧ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ. 2017ರಲ್ಲಿ ನಡೆದ ಎಸ್.ಡಿ.ಪಿ.ಐ. ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

ಇದನ್ನೂ ಓದಿ: ಶಿವಮೊಗ್ಗ ಕೋಮು ಗಲಭೆಗೆ ಟ್ವಿಸ್ಟ್: ಬಜರಂಗದಳದ ರೋಹನ್ ಕಲ್ಲೆಸೆತವೇ ಸಂಘರ್ಷಕ್ಕೆ ಕಾರಣವಾಯ್ತಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...