Homeಮುಖಪುಟಗುಜರಾತ್‌: ಮುಸ್ಲಿಂ ಯುವಕರಿಗೆ ಛಡಿಯೇಟು ಪ್ರಕರಣ; ಪೊಲೀಸರ ವಿರುದ್ಧ ದೋಷಾರೋಪ

ಗುಜರಾತ್‌: ಮುಸ್ಲಿಂ ಯುವಕರಿಗೆ ಛಡಿಯೇಟು ಪ್ರಕರಣ; ಪೊಲೀಸರ ವಿರುದ್ಧ ದೋಷಾರೋಪ

- Advertisement -
- Advertisement -

ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ನಾಲ್ವರು ಯುವಕರಿಗೆ ಸಾರ್ವಜನಿಕವಾಗಿ ಛಡಿಯೇಟು ನೀಡಿದ ಪ್ರಕರಣದಲ್ಲಿ ನ್ಯಾಯಾಲಯ ನಿಂದನೆಯ ಆರೋಪ ಎದುರಿಸುತ್ತಿರುವ ನಾಲ್ವರು ಪೊಲೀಸರ ವಿರುದ್ಧ ಗುಜರಾತ್ ಹೈಕೋರ್ಟ್ ಬುಧವಾರ ದೋಷಾರೋಪ ದಾಖಲಿಸಿದೆ.

ನ್ಯಾಯಮೂರ್ತಿಗಳಾದ ಎ ಎಸ್ ಸುಪೇಹಿಯಾ ಮತ್ತು ಎಂ ಆರ್ ಮೆಂಗ್ಡೆ ಅವರ ವಿಭಾಗೀಯ ಪೀಠವು, ನಾಡಿಯಾಡ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ತನಿಖಾ ವರದಿಯನ್ನು ಆಧರಿಸಿ ನ್ಯಾಯಾಂಗ ಉಲ್ಲಂಘನೆ ಗಮನಿಸಿದ್ದಾರೆ. ಡಿ ಕೆ ಬಸು  ಮತ್ತು ಪಶ್ಚಿಮ ಬಂಗಾಳ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ  ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ನಾಲ್ವರು ಆರೋಪಿಗಳು ಉಲ್ಲಂಘಿಸಿದ್ದಾರೆ ಎಂದು ಕೋರ್ಟ್‌ ಗಮನಿಸಿದೆ.

2022ರ ಆಕ್ಟೋಬರ್‌ನಲ್ಲಿ ಕಲ್ಲೆಸೆತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಿಗೆ ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ, ಸಾರ್ವಜನಿಕವಾಗಿ ಥಳಿಸುವ ಕೃತ್ಯದಲ್ಲಿ ಪೊಲೀಸ್‌ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂಬುವುದನ್ನು ನ್ಯಾಯಾಲಯವು ಕಂಡುಕೊಂಡಿದೆ.

ಆರೋಪಿ ಪೊಲೀಸರಲ್ಲಿ ಒಬ್ಬಾತ ಈ ಕಾನೂನು ಬಾಹಿರ ಹಾಗೂ ಅಪಮಾನಕಾರಿ ಕೃತ್ಯವನ್ನು ನಡಸುವುದಕ್ಕೆ ವೌನಸಮ್ಮತಿಯನ್ನು ನೀಡಿದ್ದಾನೆ. ಹಾಗಾಗಿ ಆತನ ವಿರುದ್ಧ ದೋಷಾರೋಪ ದಾಖಲಿಸುವಲ್ಲಿ ಯಾವುದೇ ರಿಯಾಯಿತಿ ನೀಡಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬಂಧಿತರಿಗೆ ಸಾರ್ವಜನಿಕವಾಗಿ ಛಡಿಯೇಟು ನೀಡುವ ಮೂಲಕ ಆರೋಪಿ ಪೊಲೀಸರು ಸುಪ್ರೀಂಕೋರ್ಟ್ ಮಾರ್ಗದರ್ಶಿಸೂತ್ರಗಳನ್ನು ಉಲ್ಲಂಘಿಸಿದ್ದಾರೆಂದು ನ್ಯಾಯಾಲಯ ಹೇಳಿದೆ.

2022ರ ಆಕ್ಟೋಬರ್ 4ರಂದು ಉಂಧೆಲಾ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಓರ್ವ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹಾಗೂ ಇಬ್ಬರು ಕಾನ್ಸ್ಟೇಬಲ್ ಗಳನ್ನು ನ್ಯಾಯಾಲಯ ಆರೋಪಿಗಳು ಎಂದು ಗಮನಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಪೀಠವು ಅಕ್ಟೋಬರ್ 11ಕ್ಕೆ ನಿಗದಿಪಡಿಸಿದೆ.

ಕಳೆದ ವರ್ಷ ನವರಾತ್ರಿ ಆಚರಣೆಯ ಸಂದರ್ಭದಲ್ಲಿ, ಕನಿಷ್ಠ ನಾಲ್ವರು ಮುಸ್ಲಿಂ ಯುವಕರನ್ನು ಕಾನೂನುಬಾಹಿರವಾಗಿ ಬಂಧಿಸಲಾಯಿತು ಮತ್ತು ಬಂಧಿತ ಯುವಕರಿಗೆ ಪೊಲೀಸರು ಖೇಡಾದಲ್ಲಿ ಸಾರ್ವಜನಿಕವಾಗಿ ಥಳಿಸಿದ್ದರು.

ಸಂತ್ರಸ್ತರಾದ ಜಹಿರ್ಮಿಯಾ ಮಾಲೆಕ್ (62), ಮಕ್ಸುದಾಬಾನು ಮಾಲೆಕ್ (45), ಸಹದ್ಮಿಯಾ ಮಾಲೆಕ್ (23), ಸಕಿಲ್ಮಿಯಾ ಮಾಲೆಕ್ (24) ಮತ್ತು ಶಾಹಿದ್ರಾಜ ಮಾಲೆಕ್ (25) ಅವರು 13 ಖೇಡಾ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಇದಲ್ಲದೆ ಸಂತ್ರಸ್ತರು ಪರಿಹಾರ ಕೋರಿದ್ದರು, ಅರ್ಜಿದಾರರು ಅಹಮದಾಬಾದ್ ರೇಂಜ್ ಐಜಿ ಮತ್ತು ಖೇಡಾ ಎಸ್ಪಿ ಸೇರಿದಂತೆ 15 ಅಧಿಕಾರಿಗಳು ಪಶ್ಚಿಮ ಬಂಗಾಳ ಮತ್ತು ಡಿ ಕೆ ಬಸು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳ  ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದ್ದರು.

ಇನ್‌ಸ್ಪೆಕ್ಟರ್ ಎ ವಿ ಪರ್ಮಾರ್, ಸಬ್ ಇನ್ಸ್‌ಪೆಕ್ಟರ್ ಡಿ ಬಿ ಕುಮಾವತ್, ಕಾನ್‌ಸ್ಟೆಬಲ್ ರಾಜುಭಾಯ್ ರಮೇಶಭಾಯಿ ದಾಭಿ ಮತ್ತು ಹೆಡ್ ಕಾನ್‌ಸ್ಟೆಬಲ್ ಕನಕ್‌ಸಿನ್ಹ್ ಲಕ್ಷ್ಮಣಸಿನ್ಹ್ ಎಂಬ ನಾಲ್ವರು ಪೊಲೀಸ್ ಅಧಿಕಾರಿಗಳು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಇನ್‌ಸ್ಪೆಕ್ಟರ್ ಪರ್ಮಾರ್, ಸಂತ್ರಸ್ತರಾದ ಸಹದ್ಮಿಯಾ, ಸಕಿಲ್ಮಿಯಾ ಮತ್ತು ಶಾಹಿದ್ರಾಜಾ ಅವರ ಮೇಲೆ ಕೋಲಿನಿಂದ ಹಲ್ಲೆ ನಡೆಸುವುದು, ಸಬ್ ಇನ್ಸ್‌ಪೆಕ್ಟರ್ ಡಿ ಬಿ ಕುಮಾವತ್ ಅಲ್ಲಿ ನಿಂತಿರುವುದು, ಕನಕಸಿಂಹ ಅವರು ಬಿಳಿ ಪೈಪ್ ಹಿಡಿದು ಅರ್ಜಿದಾರರನ್ನು ವ್ಯಾನ್‌ನ ಕಡೆಗೆ ತಳ್ಳುತ್ತಿರುವುದು ಮತ್ತು  ಇನ್ಸ್‌ಪೆಕ್ಟರ್ ಪರ್ಮಾರ್  ಯುವಕರಿಗೆ ಹೊಡೆಯುವಾಗ ಪೇದೆ ರಾಜುಭಾಯ್ ಮೂವರು ಯುವಕರ ಕೈಗಳನ್ನು ಕಂಬಕ್ಕೆ ಗಟ್ಟಿಯಾಗಿ ಹಿಡಿದಿರುವುದು ವೈರಲ್ ವಿಡಿಯೋದಲ್ಲಿ ಕಂಡು ಬಂದಿತ್ತು.

ಇದನ್ನು ಓದಿ: ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಬಗ್ಗೆ ನ್ಯಾಯಾಂಗದ ಮಧ್ಯಸ್ಥಿಕೆ ಕೋರಿ 16 ಮಾದ್ಯಮ ಸಂಸ್ಥೆಗಳಿಂದ ಸಿಜೆಐಗೆ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...