Homeಕರ್ನಾಟಕಮಣಿಪುರ ಹಿಂಸಾಚಾರ: ಗವರ್ನರ್ ಸಲಹೆಯನ್ನು ಸರಕಾರ ಪರಿಗಣಿಸಿಲ್ಲ: ಬೃಂದಾ ಕಾರಟ್

ಮಣಿಪುರ ಹಿಂಸಾಚಾರ: ಗವರ್ನರ್ ಸಲಹೆಯನ್ನು ಸರಕಾರ ಪರಿಗಣಿಸಿಲ್ಲ: ಬೃಂದಾ ಕಾರಟ್

- Advertisement -
- Advertisement -

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ  ತಡೆಯಲು  ಗವರ್ನರ್ ಅನುಸೂಯಾ ಉಯಿಕೆ ಅವರು  ಆಳವಾದ ಕಾಳಜಿ ವಹಿಸಿದ್ದರು.ಆದರೆ ಮಣಿಪುರದ ಎನ್. ಬಿರೇನ್ ಸಿಂಗ್ ಸರ್ಕಾರ ಅವರ ಸಲಹೆಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಿರುವುದಾಗಿ ಬೃಂದಾ ಕಾರಟ್ ಅವರು ಕರಣ್ ಥಾಪರ್ ಅವರೊಂದಿಗಿನ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಕರಣ್ ಥಾಪರ್ ಅವರೊಂದಿಗಿನ ಸಂದರ್ಶನದಲ್ಲಿ, CPI(M) ಪಾಲಿಟ್‌ ಬ್ಯುರೋ ಸದಸ್ಯರಾದ ಕಾರಟ್ ಮಾತನಾಡುತ್ತಾ,  ಮೂವರು ಕುಕಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವುದಕ್ಕೆ ಅಲ್ಲಿನ ಗವರ್ನರ್  ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿನ ಬಿಕ್ಕಟ್ಟಿನ ಪ್ರತಿಕ್ರಿಯೆಯ ಕುರಿತು ಮಣಿಪುರದ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಭಿನ್ನಾಭಿಪ್ರಾಯ ಕಂಡು ಬಂದಿದೆ ಎಂದು ಬೃಂದಾ ಕಾರಟ್ ಹೇಳಿದ್ದಾರೆ.

ಬೃಂದಾ ಕಾರಟ್ ಅವರು ಲೈಂಗಿಕ ದೌರ್ಜನ್ಯದಿಂದ ಬದುಕುಳಿದ ಇಬ್ಬರು ಇಬ್ಬರು ಯುವತಿಯರ ಜೊತೆಗಿನ  ತನ್ನ ಭೇಟಿಯನ್ನು ಮೆಳುಕು ಹಾಕಿದ್ದಾರೆ. ಇದಲ್ಲದೆ ಅತ್ಯಾಚಾರ ಮತ್ತು ಹತ್ಯೆಯಾಗಲ್ಪಟ್ಟ   ಇಬ್ಬರು ಯುವತಿಯರ ಪೋಷಕರನ್ನು ಕೂಡ ಅವರು ಭೇಟಿ ಮಾಡಿದ್ದಾರೆ. ಇವರಲ್ಲಿ ಒಬ್ಬರು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮಹಿಳೆಯರಲ್ಲಿ ಬದುಕುಳಿದವರು ಒಬ್ಬರು. ಎರಡನೆಯದು 15 ವರ್ಷದ ಬಾಲಕಿಯಾಗಿದ್ದು ಆಕೆಯನ್ನು, ಸಮವಸ್ತ್ರದಲ್ಲಿದ್ದ ನಾಲ್ವರು   ಅತ್ಯಾಚಾರ  ಮಾಡಿ  ಬಂಡೆಯಿಂದ ಎಸೆದಿದ್ದರು ಎಂದು ಹೇಳಿದ್ದಾರೆ.

ಇಂಫಾಲ್‌ನಲ್ಲಿ ಕಾರ್ ವಾಶ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೀಡಾದ ಇಬ್ಬರು ಯುವತಿಯರ ಪೋಷಕರನ್ನು ಕೂಡ ಕಾರಟ್ ಭೇಟಿಯಾಗಿದ್ದರು.

100 ದಿನಗಳು ಕಳೆದರೂ ಮುಖ್ಯಮಂತ್ರಿಗಳು ಸಂತ್ರಸ್ತರನ್ನು ಭೇಟಿ ಮಾಡಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಅವರು ಹೇಳುತ್ತಾರೆ. ಘಟನೆಯಲ್ಲಿ ಬಿರೇನ್ ಸಿಂಗ್ ಸರ್ಕಾರದ ಅಪರಾಧತ್ವದ  ಬಗ್ಗೆ ಬೃಂದಾ ಮಾತನಾಡಿದ್ದಾರೆ.

ಇದನ್ನು ಓದಿ: ಮಾನಿಕ್ ಷಾ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ: ಗ್ಯಾರೆಂಟಿ ಯೋಜನೆಗಳ ಬಗ್ಗೆ ಉಲ್ಲೇಖ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾತಿ, ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡಬೇಡಿ: ಬಿಜೆಪಿ, ಕಾಂಗ್ರೆಸ್‌ಗೆ ಚು.ಆಯೋಗ ಸೂಚನೆ

0
ಜಾತಿ, ಸಮುದಾಯ ಧರ್ಮದ ನೆಲೆಯಲ್ಲಿ ಚುನಾವಣಾ ಪ್ರಚಾರವನ್ನು ಮಾಡಬೇಡಿ, ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಚು.ಆಯೋಗ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಖಡಕ್‌ ಸೂಚನೆಯನ್ನು ನೀಡಿದೆ. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು...