Homeಮುಖಪುಟಮುಖ್ಯವಾಹಿನಿಯಿಂದ ಹೊರಗುಳಿದ ಮರಾಠ ಸಮುದಾಯ, ಬಾಲ್ಯ ವಿವಾಹಗಳಲ್ಲಿ ಏರಿಕೆ: ವರದಿ

ಮುಖ್ಯವಾಹಿನಿಯಿಂದ ಹೊರಗುಳಿದ ಮರಾಠ ಸಮುದಾಯ, ಬಾಲ್ಯ ವಿವಾಹಗಳಲ್ಲಿ ಏರಿಕೆ: ವರದಿ

- Advertisement -
- Advertisement -

ಮಹಾರಾಷ್ಟ್ರ ರಾಜ್ಯದ ಹಿಂದುಳಿದ ವರ್ಗ ಆಯೋಗವು (MSBCC) ಮಹತ್ವದ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸಾರ್ವಜನಿಕ ಸೇವೆಗಳ ಎಲ್ಲಾ ಕ್ಷೇತ್ರಗಳಲ್ಲಿ ಮರಾಠರ ಅಸಮರ್ಪಕ ಪ್ರಾತಿನಿಧ್ಯವನ್ನು ಎತ್ತಿ ತೋರಿಸಿದೆ ಮತ್ತು ಸಮುದಾಯವು ಹಿಂದುಳಿದಿರುವ ಕಾರಣದಿಂದ ಮುಖ್ಯವಾಹಿನಿಯಿಂದ ಸಮುದಾಯದ ಜನರು ಸಂಪೂರ್ಣವಾಗಿ ಹೊರಗುಳಿದಿದ್ದಾರೆ ಎಂದು ಗಮನಿಸಿದೆ. ಕಳೆದ ಆರು ವರ್ಷಗಳಲ್ಲಿ ಹೆಣ್ಣು ಮಕ್ಕಳ ವಿವಾಹಗಳ ಏರಿಕೆ ಆತಂಕಕಾರಿಯಾಗಿದೆ ಎಂದು ತಿಳಿಸಿದೆ.

ಆಯೋಗದ ಈ ವರದಿಯು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ (SEBC) ವರ್ಗದ ಅಡಿಯಲ್ಲಿ ಮರಾಠರಿಗೆ ನೀಡಲಾದ 10% ಮೀಸಲಾತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ರಾಜ್ಯ ಸಾಮಾನ್ಯ ಆಡಳಿತ ಇಲಾಖೆ (GAD) ಸಲ್ಲಿಸಿದ ಅಫಿಡವಿಟ್‌ನ ಒಂದು ಭಾಗವಾಗಿದೆ.

ನಿವೃತ್ತ ನ್ಯಾಯಮೂರ್ತಿ ಸುನಿಲ್ ಬಿ. ಶುಕ್ರೆ ನೇತೃತ್ವದ ಆಯೋಗವು ಮರಾಠರು ತಮ್ಮ ಹಿಂದುಳಿದಿರುವಿಕೆಯಿಂದಾಗಿ ಮುಖ್ಯವಾಹಿನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ ಎಂದು ಗಮನಿಸಿದೆ.

2018ರಲ್ಲಿ, ಹಿಂದಿನ MSBCC ನಿವೃತ್ತ ನ್ಯಾಯಮೂರ್ತಿ ಎಂ.ಜಿ. ಗಾಯಕ್ವಾಡ್ ಮತ್ತು ಅವರ ವರದಿಯು 50% ಕ್ಕಿಂತ ಹೆಚ್ಚು ಮರಾಠ ಜನಸಂಖ್ಯೆಯನ್ನು ಹೊಂದಿರುವ 355 ತಾಲೂಕುಗಳ ತಲಾ ಎರಡು ಗ್ರಾಮಗಳಿಂದ 43,629 ಕುಟುಂಬಗಳ ಸಮೀಕ್ಷೆಯನ್ನು ಆಧರಿಸಿದೆ. ಮತ್ತೊಂದೆಡೆ, ಶುಕ್ರೆ ಆಯೋಗವು ರಾಜ್ಯದಾದ್ಯಂತ 15 ಮಿಲಿಯನ್ (1,58,20,264) ಕುಟುಂಬಗಳನ್ನು ಸಮೀಕ್ಷೆ ಮಾಡಿದೆ ಮತ್ತು ಮರಾಠರು ರಾಜ್ಯದ ಜನಸಂಖ್ಯೆಯ 28%ದಷ್ಟಿದ್ದಾರೆ ಎಂದು ಕಂಡುಹಿಡಿದಿದೆ.

2024ರ ವರದಿಯ ಪ್ರಕಾರ, ಸರ್ಕಾರಿ ಸೇವೆಗಳಲ್ಲಿ ಮರಾಠರ ಒಟ್ಟು ಪ್ರಾತಿನಿಧ್ಯವು 2018ರಲ್ಲಿ 14.63% ದಷ್ಟಿತ್ತು. ಇದು 2024ರಲ್ಲಿ 9%ಕ್ಕೆ ಇಳಿದಿದೆ. 2024ರ ಆಯೋಗದ ವರದಿಯು, ಮರಾಠರ ಪ್ರಸ್ತುತ ಸ್ಥಿತಿಗೆ ತೀವ್ರ ಬಡತನ, ಕೃಷಿ ಆದಾಯದಲ್ಲಿನ ಕುಸಿತ ಮತ್ತು ಭೂ ಹಿಡುವಳಿಗಳ ವಿಭಜನೆಯ ಕಾರಣಗಳನ್ನು ಸೂಚಿಸಿದೆ.

ಸಮುದಾಯದಲ್ಲಿನ ಬಿಕ್ಕಟ್ಟು ಆತ್ಮಹತ್ಯೆಯಲ್ಲಿ ಮರಾಠರ ಪಾಲು ಕೂಡ 94.11%ಕ್ಕೆ ಏರಿದೆ ಎಂದು ಆಯೋಗದ ವರದಿ ಹೇಳಿದೆ. 2024ರ ವರದಿಯು ಸಮುದಾಯದಲ್ಲಿ ಹೆಚ್ಚುತ್ತಿರುವ ಭೂರಹಿತತೆಯನ್ನು ಸೂಚಿಸಿದೆ. 2018ರಲ್ಲಿ 8%ಕ್ಕೆ ಹೋಲಿಸಿದರೆ 2024ರಲ್ಲಿ ಮರಾಠರು 31.17% ಭೂರಹಿತರಾಗಿದ್ದಾರೆ ಎಂದು ವರದಿಯು ಉಲ್ಲೇಖಿಸಿದೆ.

43.76% ಮರಾಠ ಮಹಿಳೆಯರು ಜೀವನೋಪಾಯಕ್ಕಾಗಿ ದೈಹಿಕ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ. 2018ರ ವರದಿಯು ದೈಹಿಕ ದುಡಿಮೆಯಲ್ಲಿ 53% ಜನರು ತೊಡಗಿರುವುದು ಕಂಡು ಬಂದಿತ್ತು. 2024ರ ವರದಿಯು 44.98%ರಷ್ಟು ಅಂದರೆ ಕೊಂಚ ಕಡಿಮೆಯಾಗಿರುವುದನ್ನು ಎತ್ತಿ ತೋರಿಸಿದೆ.

2024ರಲ್ಲಿ ಕಚ್ಚಾ ಮನೆಗಳಲ್ಲಿ ಸಮುದಾಯದ 81.81%ರಷ್ಟು ಜನರು ವಾಸಿಸುತ್ತಿದ್ದು, ಈ ಸ್ಥಿರವಾದ ಏರಿಕೆಯು ಹದಗೆಡುತ್ತಿರುವ ಜೀವನ ಪರಿಸ್ಥಿತಿಗಳನ್ನು ಸೂಚಿಸುತ್ತದೆ ಎಂದು ವರದಿಯು ಗಮನಿಸಿದೆ.

ಹೆಣ್ಣು ಮಕ್ಕಳ ವಿವಾಹವು ಸಮುದಾಯದಲ್ಲಿ ಹೆಚ್ಚಳವಾಗಿರುವುದನ್ನು ಗಮನಿಸಬಹುದಾಗಿದೆ. ಹೆಣ್ಣು ಮಕ್ಕಳ ವಿವಾಹ 2018ರಲ್ಲಿ 0.32%ರಷ್ಟಿದ್ದು, 2024ರಲ್ಲಿ 13.7%ಕ್ಕೆ ಏರಿಕೆಯಾಗಿದೆ. 2024ರಲ್ಲಿ 94.32% ಮರಾಠರು ಜಾತಿ-ಸಂಬಂಧಿತ ಕಿರುಕುಳವನ್ನು ಎದುರಿಸಿದ್ದಾರೆ ಎಂಬುವುದನ್ನು ವರದಿಯು ಉಲ್ಲೇಖಿಸಿದೆ.

ಇದನ್ನು ಓದಿ: ಕೇರಳ: ವಲಸೆ ಕಾರ್ಮಿಕನನ್ನು ಥಳಿಸಿ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...