Homeಮುಖಪುಟಮೋದಿ ದೇಶ ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ: ಜೈಪುರದಲ್ಲಿ ಸೋನಿಯಾ ಗಾಂಧಿ ವಾಗ್ಧಾಳಿ

ಮೋದಿ ದೇಶ ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ: ಜೈಪುರದಲ್ಲಿ ಸೋನಿಯಾ ಗಾಂಧಿ ವಾಗ್ಧಾಳಿ

- Advertisement -
- Advertisement -

ಲೋಕಸಭೆ ಚುನಾವಣೆ ಹಿನ್ನೆಲೆ ನಿನ್ನೆ ಕಾಂಗ್ರೆಸ್‌ ಪಕ್ಷವು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಬಿಜೆಪಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ‘ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸಂವಿಧಾನವನ್ನು ಬದಲಾಯಿಸಲು ಪಿತೂರಿ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ಜೈಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, “ಮೋದಿ ಜಿ ದೇಶ ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ’. ವಿಪಕ್ಷ ನಾಯಕರನ್ನು ಬೆದರಿಸಲು ನಾನಾ ತಂತ್ರಗಳನ್ನು ಹೆಣೆಯಲಾಗುತ್ತಿದ್ದು, ಬಿಜೆಪಿಗೆ ಸೇರುವಂತೆ ಒತ್ತಾಯಿಸಲಾಗುತ್ತಿದೆ. ಎಲ್ಲೆಡೆ ಅನ್ಯಾಯದ ಕತ್ತಲೆ ಇದೆ, ಎಲ್ಲಾ ಮತದಾರರು ನ್ಯಾಯಕ್ಕಾಗಿ ಬಿಜೆಪಿ ವಿರುದ್ಧ ಹೋರಾಡಬೇಕು ಎಂದು ಹೇಳಿದರು.

ಕಳೆದ 10 ವರ್ಷಗಳಲ್ಲಿ, ನಿರುದ್ಯೋಗ, ಹಣದುಬ್ಬರ, ಅಸಮಾನತೆ, ದೌರ್ಜನ್ಯಗಳನ್ನು ತಡೆಯಲು ಸರ್ಕಾರವು ಯಾವುದೇ ಮಹತ್ವದ ಹೆಜ್ಜೆಯನ್ನು ಇಟ್ಟಿಲ್ಲ ಎಂದು ರಾಜ್ಯಸಭಾ ಸಂಸದರು ಕೂಡ ಆಗಿರುವ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ. ನಮ್ಮ ದೇಶದ ಸಂವಿಧಾನ ಬದಲಾವಣೆಗೆ ಷಡ್ಯಂತ್ರವನ್ನು ಮಾಡಲಾಗುತ್ತಿದೆ. ಸರಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಲಾಗುತ್ತಿದೆ ಎಂದ ಸೋನಿಯಾ ಗಾಂಧಿ,  ನಿರುದ್ಯೋಗ, ಹಣದುಬ್ಬರ, ಅಸಮಾನತೆ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರ್ಯಾಲಿಯಲ್ಲಿ ವಿರೋಧ ಪಕ್ಷದ ನಾಯಕರಾದ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಕೂಡ ಮಾತನಾಡಿದ್ದಾರೆ,

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ,  ನಿರುದ್ಯೋಗ, ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ, ಚುನಾವಣೆ ಸಮಯದಲ್ಲಿ ಗ್ಯಾಸ್ ಬೆಲೆ ಇಳಿಕೆ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿ ಐಟಂಗೆ ಜಿಎಸ್‌ಟಿ ಸೇರಿಸಲಾಗಿದೆ ಎಂದು ಪ್ರಿಯಾಂಕಾ ಹೇಳಿದರು.

2024ರ ಲೋಕಸಭೆ ಚುನಾವಣೆಯಲ್ಲಿ ಹಾಕಲಿರುವ ಮತಗಳು ದೇಶದ ಪ್ರಜಾಪ್ರಭುತ್ವವನ್ನು ಉಳಿಸಲಿವೆ. ನಮ್ಮ ಪ್ರಜಾಪ್ರಭುತ್ವ ಹೇಗೆ ಅಪಾಯದಲ್ಲಿದೆ ಎಂದು ನೀವು ಆಶ್ಚರ್ಯ ಪಡಬೇಕು. ಪ್ರಜಾಪ್ರಭುತ್ವವನ್ನು ಬಲಪಡಿಸಲು ರೂಪುಗೊಂಡ ದೊಡ್ಡ ಸಂಸ್ಥೆಗಳು ದುರ್ಬಲಗೊಳ್ಳುತ್ತಿವೆ, ಅವುಗಳು ದುರುಪಯೋಗವಾಗುತ್ತಿವೆ. ಇಂದು ಎಂತಹಾ ಪರಿಸ್ಥಿತಿ ಇದೆ ಎಂದರೆ, ಇವಿಎಂ ಮೇಲೆ ಜನರಿಗೆ ನಂಬಿಕೆಯಿಲ್ಲದ ಪರಿಸ್ಥಿತಿ ಇದೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ನಿನ್ನೆ ಬಿಡುಗಡೆಯಾದ ಕಾಂಗ್ರೆಸ್ ‘ನ್ಯಾಯ ಪತ್ರ’ ಪ್ರಣಾಳಿಕೆಯ ಬಗ್ಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ಪ್ರಣಾಳಿಕೆಯು ಚುನಾವಣೆಯ ನಂತರ ಅವರು ಮರೆತುಬಿಡುವ ಘೋಷಣೆಗಳ ಪಟ್ಟಿಯಲ್ಲ,  ಇದು ನ್ಯಾಯವನ್ನು ಬಯಸುವ ರಾಷ್ಟ್ರದ ಧ್ವನಿಯಾಗಿದೆ ಎಂದು ಹೇಳಿದರು. ಇಂದು ನಿರುದ್ಯೋಗ ಉತ್ತುಂಗದಲ್ಲಿದೆ, ನಿರುದ್ಯೋಗ ನಿವಾರಣೆಗೆ ಬಿಜೆಪಿ ಮತ್ತು ಮೋದಿ ಸರ್ಕಾರ ಏನು ಮಾಡಿದೆ? ಭರವಸೆಗಳನ್ನು ನೀಡಿತು ಆದರೆ ಈಡೇರಿಸಲಿಲ್ಲ. ಜನರ ಭರವಸೆಯನ್ನು ಮುರಿದು ಅಗ್ನಿವೀರ್ ಯೋಜನೆ ತಂದರು. ಪ್ರತಿ ರಾಜ್ಯದಲ್ಲೂ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಆದರೆ, ಪ್ರಧಾನಿ ಮೋದಿ ಅವರ ಮಾತನ್ನು ಕೇಳಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಕೇರಳ: ವಲಸೆ ಕಾರ್ಮಿಕನನ್ನು ಥಳಿಸಿ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

12ನೇ ತರಗತಿ ಉತ್ತೀರ್ಣರಾದ ಜಾತಿ ಹಿಂಸಾಚಾರ ಸಂತ್ರಸ್ತ, ಲೈಂಗಿಕ ಅಲ್ಪಸಂಖ್ಯಾತೆಯನ್ನು ಅಭಿನಂದಿಸಿದ ಸ್ಟಾಲಿನ್

0
ಪರಿಶಿಷ್ಟ ಎಂಬ ಕಾರಣಕ್ಕೆ ಜಾತಿ ಹಿಂಸೆ ಎದುರಿಸಿದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ದಲಿತ ವಿದ್ಯಾರ್ಥಿ ಚಿನ್ನದೊರೈ 12 ಪಬ್ಲಿಕ್ ಪರೀಕ್ಷೆಗಳಲ್ಲಿ ಶೇಕಡಾ 78 ಅಂಕಗಳನ್ನು ಪಡೆದರೆ, ಟ್ರಾನ್ಸ್‌ಜೆಂಡರ್ ನಿವೇತಾ ಶೇಕಡಾ 47.1 ಅಂಕಗಳನ್ನು...