Homeಮುಖಪುಟಮಂಗಳ ಗ್ರಹದಲ್ಲಿ ಈ ಹಿಂದೆ ಯೋಚಿಸಿದ್ದಕ್ಕಿಂತಲೂ ಹೆಚ್ಚು ಕಾಲ ನೀರಿತ್ತು!: ವಿಜ್ಞಾನಿಗಳ ಊಹೆ

ಮಂಗಳ ಗ್ರಹದಲ್ಲಿ ಈ ಹಿಂದೆ ಯೋಚಿಸಿದ್ದಕ್ಕಿಂತಲೂ ಹೆಚ್ಚು ಕಾಲ ನೀರಿತ್ತು!: ವಿಜ್ಞಾನಿಗಳ ಊಹೆ

- Advertisement -
- Advertisement -

ಕೆಲವು ಶತಕೋಟಿ ವರ್ಷಗಳ ಹಿಂದೆ, ಮಂಗಳವು ಬಹುಶಃ ಕೊಳಗಳು ಮತ್ತು ನದಿಗಳನ್ನು ಹೊಂದಿತ್ತು. ಅದು ಸೂಕ್ಷ್ಮಜೀವಿಗಳ ಜೀವನಕ್ಕೆ ಸಂಭಾವ್ಯ ಆವಾಸಸ್ಥಾನವೂ ಆಗಿತ್ತು. ಆದರೆ, ಕಾಲಾನಂತರದಲ್ಲಿ ಆ ಗ್ರಹವು ಬದಲಾಯಿತು ಮತ್ತು ನೀರಿನ ಆವಿಯಾಗುವಿಕೆಯಿಂದಾಗಿ ಅದರ ವಾತಾವರಣವು ತೆಳುವಾಯಿತು ಎಂದು ಸಂಶೋಧಕರು ಊಹಿಸಿದ್ದಾರೆ.

ನ್ಯಾಶನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ವಿನ್ಯಾಸಗೊಳಿಸಿ ಉಡಾವಣೆ ಮಾಡಿದ ಮಾರ್ಸ್ ರಿಕಾನೈಸೆನ್ಸ್ ಆರ್ಬಿಟರ್ (MRO) ಬಾಹ್ಯಾಕಾಶ ನೌಕೆಯು 2006 ರಿಂದ ಮಂಗಳ ಗ್ರಹದ ವಾತಾವರಣ ಮತ್ತು ಭೂವಿಜ್ಞಾನವನ್ನು ಸಮೀಕ್ಷೆ ಮಾಡುತ್ತಿದೆ.

ಇದನ್ನೂ ಓದಿ: ಮಂಗಳ ಗ್ರಹದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್‌ ಹಾರಿಸಿದ ನಾಸಾ!

ಕ್ಯಾಲಿಫೋರ್ನಿಯಾದ ಎಜಿಯು ಅಡ್ವಾನ್ಸಸ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನೆಯಲ್ಲಿ ಅಮೆರಿಕದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಎಂಆರ್‌ಒ ದತ್ತಾಂಶವನ್ನು ಬಳಸಿದ್ದಾರೆ. ಇದರ ಪ್ರಕಾರ, ಈ ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ಸಮಯ ಗ್ರಹದಲ್ಲಿ ನೀರು ಇದ್ದಿರಬಹುದು ಎಂದು ತೀರ್ಮಾನಿಸಿದ್ದಾರೆ.

ಇತ್ತೀಚಿನ ಸಂಶೋಧನೆಗಳ ಪ್ರಕಾರ, ಮಂಗಳ ಗ್ರಹದ ಮೇಲ್ಮೈಯಲ್ಲಿ ನೀರು ಸುಮಾರು ಮೂರು ಶತಕೋಟಿ ವರ್ಷಗಳ ಹಿಂದೆ ಆವಿಯಾಯಿತು. ಅಲ್ಲದೆ, ಎರಡು ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದ ಮೇಲ್ಮೈಯಲ್ಲಿ ನೀರಿನಲ್ಲಿದ್ದ ಉಪ್ಪು ಖನಿಜಗಳು ಉಳಿದಿವೆ ಎಂದು ನಂಬಲಾಗಿದೆ. ಅಲ್ಲದೆ, ಎಂಆರ್‌ಒ ಮೂಲಕ ಹೊಸ ಸಂಶೋಧನೆಗಳು ನಡೆದಿದ್ದು, ಕಳೆದ 15 ವರ್ಷಗಳಿಂದ ನಡೆದ ಸಂಶೋಧನೆಗಳು, ನೀರಿನ ಅಸ್ತಿತ್ವದ ಮೇಲೆ ಹೊಸ ಬೆಳಕನ್ನು ಚೆಲ್ಲಿದೆ ಮತ್ತು ಮಂಗಳ ಗ್ರಹದಲ್ಲಿ ಪ್ರಾಚೀನ ಜೀವಿಗಳು ಬದುಕಿದ್ದ ಸಾಧ್ಯತೆಗಳಿವೆ.

ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಎಂಆರ್‌ಒನ ಉಪ ಯೋಜನಾ ವಿಜ್ಞಾನಿ ಲೆಸ್ಲಿ ಟಂಪರಿ ಅವರು ಹೊಸ ಸಂಶೋಧನೆಗಳ ಕುರಿತು ಪ್ರತಿಕ್ರಿಯಿಸಿದ್ದು, “ಎಂಆರ್‌ಒದಿಂದಾಗಿ ಗ್ರಹದ ಬಗ್ಗೆ ನಮ್ಮ ದೃಷ್ಟಿಕೋನವನ್ನು ಮತ್ತಷ್ಟು ವಿವರಗೊಳಿಸಿದೆ. ನಮ್ಮ ಉಪಕರಣಗಳೊಂದಿಗೆ ನಾವು ಗ್ರಹದ ಹೆಚ್ಚು ಹೆಚ್ಚು ನಕ್ಷೆಗಳನ್ನು ಪಡೆಯುತ್ತಿದ್ದೇವೆ. ಇದರಿಂದ, ಆ ಗ್ರಹದ ಇತಿಹಾಸವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳ ಗ್ರಹದ ಮೊದಲ ಆಡಿಯೊ ಬಿಡುಗಡೆ ಮಾಡಿದ ನಾಸಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...