Homeರಂಜನೆಕ್ರೀಡೆಐಪಿಎಲ್‌ನಲ್ಲಿ ದೀಪಕ್‌ ಚಹಾರ್‌ಗೆ ಹೆಚ್ಚಿದ ಬೇಡಿಕೆ

ಐಪಿಎಲ್‌ನಲ್ಲಿ ದೀಪಕ್‌ ಚಹಾರ್‌ಗೆ ಹೆಚ್ಚಿದ ಬೇಡಿಕೆ

- Advertisement -
- Advertisement -

ಐಪಿಎಲ್‌-2022ರ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. ಈ ಹರಾಜಿನಲ್ಲಿ ವಿಶೇಷವಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ವೇಗದ ಬೌಲರ್ ದೀಪಕ್ ಚಹಾರ್ ದೊಡ್ಡ ಮೊತ್ತವನ್ನು ಪಡೆಯುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಚಹರ್ ಅವರು 2018 ರಲ್ಲಿ ಸಿಎಸ್‌ಕೆ ತಂಡಕ್ಕೆ ಆಯ್ಕೆಯಾದರು. ಕಳೆದ ನಾಲ್ಕು ವರ್ಷಗಳಿಂದ ಸಿಎಸ್‌ಕೆ ತಂಡಕ್ಕಾಗಿ ಅವರು ಆಡಿದ್ದಾರೆ. ವೇಗಿ ಬೌಲರ್‌ ಆಗಿರುವ ಚಹರ್, ಐಪಿಎಲ್‌ನಲ್ಲಿ ಇದುವರೆಗೆ 63 ಪಂದ್ಯಗಳನ್ನು ಆಡಿದ್ದಾರೆ. 2019ರಲ್ಲಿ ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ ಚೆನ್ನೈ ತಂಡವು 59 ವಿಕೆಟ್‌ಗಳನ್ನು ಪಡೆದಿತ್ತು. ಅದಲ್ಲಿ ಚಹರ್‌ 22 ವಿಕೆಟ್‌ಗಳನ್ನು ಪಡೆದಿದ್ದರು.

ಇದನ್ನೂ ಓದಿ:ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ನಾಯಕನಾಗುವ ಹುರುಪಿನಲ್ಲಿರುವ ರಿಷಬ್ ಪಂತ್‌

“ಯಾವುದೇ ಭಾರತೀಯ ಬೌಲರ್ ಹೊಸ ಚೆಂಡಿನೊಂದಿಗೆ ನಿಯಮಿತವಾಗಿ ವಿಕೆಟ್ ಕೀಳುವುದನ್ನು ನಾನು ನೋಡಿಲ್ಲ. ಆದರೆ, ಚಹರ್‌ ಹೊಸ ಚೆಂಡಿನೊಂದಿಗೆ ನಿಯಮಿತವಾಗಿ ವಿಕೆಟ್‌ಗಳನ್ನು ಉರುಳಿಸುತ್ತಾರೆ. ಬೇರೆ ಯಾವುದೇ ಭಾರತೀಯ ಬೌಲರ್ ಈ ರೀತಿ ವಿಕೆಟ್‌ ಪಡೆಯುವುದನ್ನ ನೋಡಲು ಸಾಧ್ಯವಿಲ್ಲ” ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

“ಮೊದಲ ಮೂರು ಓವರ್‌ಗಳಲ್ಲಿ ದೀಪಕ್ ಚಹರ್ ತಂಡದ ಬ್ಯಾಂಕ್ ಆಗಿರುತ್ತಾರೆ. ಅವರು ಪವರ್‌ಪ್ಲೇ ಓವರ್‌ಗಳಲ್ಲಿ ಬಂದು ವಿಕೆಟ್‌ಗಳನ್ನು ಪಡೆದು ಎದುರಾಳಿಗಳ ಬೆನ್ನು ಮುರಿಯುತ್ತಾರೆ. ಅಹಮದಾಬಾದ್ ಮತ್ತು ಲಕ್ನೋದಂತೆ ಚೆನ್ನೈ ಮತ್ತೆ ಅವರನ್ನು ಬಿಡ್ ಮಾಡಲಿದೆ” ಎಂದು ಚೋಪ್ರಾ ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌‌‌ಗೆ ವಿದಾಯ ಹೇಳಿದ ಹರ್ಭಜನ್‌ ಸಿಂಗ್‌‌

“ಚಹರ್‌ ಬೌಲಿಂಗ್‌ ಜೊತೆಗೆ ಇತ್ತೀಚೆಗೆ ಉತ್ತಮ ಬ್ಯಾಟಿಂಗ್‌ ಕೂಡ ಮಾಡುತ್ತಿದ್ದಾರೆ. ಅವರಿಗೆ ಅತಿಹೆಚ್ಚು ಬೇಡಿಕೆ ಇದೆ. ಆದ್ದರಿಂದ, ಅವರು ಮುಂದಿನ ಹರಾಜಿನಲ್ಲಿ ಗರಿಷ್ಟ ವಿಕೆಟ್ ಪಡೆಯಬಹುದು”ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅರ್ಧಶತಕವನ್ನು ಗಳಿಸುವ ಮೂಲಕ ಚಹರ್ ಭಾರತ ತಂಡಕ್ಕೆ ಬ್ಯಾಟಿಂಗ್‌ ಕೊಡುಗೆ ನೀಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ: ಕ್ರಿಕೆಟ್ ಜಗತ್ತು ಕಂಡ ಕೆಚ್ಚೆದೆಯ ನಾಯಕ ಕೊಹ್ಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...