HomeUncategorizedಸೋಲಾಪುರದ ಜವಳಿ ಉತ್ಪಾದನಾ ಘಟಕದಲ್ಲಿ ಭೀಕರ ಅಗ್ನಿ ಅವಘಡ: ಮಾಲೀಕ ಸೇರಿ ಮಂದಿ ಸಾವು

ಸೋಲಾಪುರದ ಜವಳಿ ಉತ್ಪಾದನಾ ಘಟಕದಲ್ಲಿ ಭೀಕರ ಅಗ್ನಿ ಅವಘಡ: ಮಾಲೀಕ ಸೇರಿ ಮಂದಿ ಸಾವು

- Advertisement -
- Advertisement -

ಮುಂಬೈ: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲ್‌ಕೋಟ್‌ನಲ್ಲಿರುವ ಜವಳಿ ಉತ್ಪಾದನಾ ಘಟಕದಲ್ಲಿ ಭಾನುವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ.

ಸೋಲಾಪುರ MIDC ಪ್ರದೇಶದ ಅಕ್ಕಲ್‌ಕೋಟ್ ರಸ್ತೆಯಲ್ಲಿರುವ ಸೆಂಟ್ರಲ್ ಜವಳಿ ಮಿಲ್ಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಮೃತರಲ್ಲಿ ಕಾರ್ಖಾನೆ ಮಾಲೀಕ ಹಾಜಿ ಉಸ್ಮಾನ್ ಹಸನ್‌ಭಾಯ್ ಮನ್ಸೂರಿ, ಅವರ ಒಂದೂವರೆ ವರ್ಷದ ಮೊಮ್ಮಗ ಸೇರಿದಂತೆ ಅವರ ಕುಟುಂಬದ ಮೂವರು ಸದಸ್ಯರು ಮತ್ತು ನಾಲ್ವರು ಕಾರ್ಮಿಕರು ಸೇರಿದ್ದಾರೆ.

ಬೆಂಕಿಯ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿಗೂ ಸುಟ್ಟ ಗಾಯಗಳಾಗಿವೆ. ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, 5-6 ಗಂಟೆಗಳ ನಂತರವೇ ಬೆಂಕಿಯನ್ನು ನಂದಿಸಲಾಯಿತು ಎಂದು ವರದಿಗಳು ತಿಳಿಸಿವೆ.

ರಾಜ್ಯ ಗೃಹ ಸಚಿವರೂ ಆಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಪರಿಸ್ಥಿತಿಯನ್ನು ಪರಿಶೀಲಿಸಲು ಸೋಲಾಪುರ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದರು.

“ಸೋಲಾಪುರದ ಅಕ್ಕಲ್ಕೋಟ್ ರಸ್ತೆಯಲ್ಲಿರುವ ಜವಳಿ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 8 ಜನರು ಸಾವನ್ನಪ್ಪಿದ ಘಟನೆ ಅತ್ಯಂತ ದುಃಖಕರ. ಅವರಿಗೆ ನಾನು ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಕುಟುಂಬಗಳ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ” ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಹತ್ತಿರದ ಕುಟುಂಬಕ್ಕೆ ಫಡ್ನವೀಸ್ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಸಾವುಗಳಿಗೆ ಸಂತಾಪ ಸೂಚಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, “ಮಹಾರಾಷ್ಟ್ರದ ಸೋಲಾಪುರದಲ್ಲಿ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಅನೇಕ ಜನರು ಸಾವನ್ನಪ್ಪಿದ ಸುದ್ದಿ ಅತ್ಯಂತ ನೋವಿನಿಂದ ಕೂಡಿದೆ. ನಾನು ಎಲ್ಲಾ ದುಃಖಿತ ಕುಟುಂಬಗಳಿಗೆ ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.

ಸಾವುಗಳಿಗೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಹತ್ತಿರದ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.

“ಮಹಾರಾಷ್ಟ್ರದ ಸೋಲಾಪುರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಗುಣಮುಖರಾಗಲಿ” ಎಂದು ಮೋದಿ ಹೇಳಿದ್ದಾರೆ.

ಭಾರತಕ್ಕೆ ಸೆಡ್ಡು ಹೊಡೆಯಲು ವಿದೇಶಕ್ಕೆ ರಾಜತಾಂತ್ರಿಕ ನಿಯೋಗ ಕಳುಹಿಸಲು ಮುಂದಾದ ಪಾಕಿಸ್ತಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕ ಮಧ್ಯಂತರ ಚುನಾವಣೆ : ಮೇಲ್ಮನೆ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತ, ಕೆಳಮನೆಯಲ್ಲೂ ಮುನ್ನಡೆ

ಅಮೆರಿಕದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ 2026ರ ಮಧ್ಯಂತರ ಚುನಾವಣೆಗಳ (US Midterm Elections) ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಪ್ರಸ್ತುತ ಮತ ಎಣಿಕೆ ಕಾರ್ಯ ಚುರುಕಿನಿಂದ ಸಾಗಿದೆ. ಹಾಲಿ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

RSS ಕುರಿತು ಪೋಸ್ಟ್ ಹಾಕಿದ್ದಕ್ಕೆ ಎಕ್ಸ್‌ ಖಾತೆ ಬ್ಲಾಕ್ ಮಾಡಲು ಸೂಚಿಸಿದ ದೆಹಲಿ ಪೊಲೀಸರು : ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದ ಐಎಫ್‌ಎಫ್‌

ತನ್ನ ಖಾತೆ ಮತ್ತು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೋರಿದ್ದಾರೆ ಎಂದು ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ (ಐಎಫ್‌ಎಫ್‌) ಮಂಗಳವಾರ (ನ.3) ತಿಳಿಸಿದೆ. ಐಎಫ್‌ಎಫ್‌ ಭಾರತದಲ್ಲಿ...

ರಾಜ್ಯದ 226 ತಾಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್ ಬೆಳೆ ಹಾನಿ; ಕೇಂದ್ರದ ಸಣ್ಣ ನೆರವು ಸಾಕಾಗಲ್ಲ; ಪ್ರಧಾನಿ ಮೋದಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಪತ್ರ!

ಕರ್ನಾಟಕದ 226 ತಾಲೂಕುಗಳಲ್ಲಿ ಬರದ ಭೀಕರತೆಯಿಂದ ತತ್ತರಿಸಿರುವ ಲಕ್ಷಾಂತರ ರೈತರನ್ನು ರಕ್ಷಿಸಲು ತಕ್ಷಣವೇ ಬೃಹತ್ ಮಟ್ಟದ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಧಾನಮಂತ್ರಿ ನರೇಂದ್ರ...

‘ಭಾರತ ಒಂದು ಜಾತ್ಯತೀತ ದೇಶ’: ದಿಯಾ ಮಿರ್ಜಾ ವಿಡಿಯೋ ಕುರಿತ ಬಿಜೆಪಿ ನಾಯಕರ ಟೀಕೆಗೆ ಬಾಂಬೆ ಹೈಕೋರ್ಟ್ ಆಕ್ಷೇಪ : ವಿಡಿಯೋ ಮರುಸ್ಥಾಪಿಸಲು ಬಿಎಂಸಿಗೆ ಆದೇಶ

ಸಾರ್ವಜನಿಕ ರಸ್ತೆಗಳಲ್ಲಿ ಪಟಾಕಿ ಸಿಡಿಸದಂತೆ ದೀಪಾವಳಿ ಹಬ್ಬದ ಮುನ್ನ ನಾಗರಿಕರಲ್ಲಿ ನಟಿ ದಿಯಾ ಮಿರ್ಜಾ ಮನವಿ ಮಾಡಿಕೊಂಡಿದ್ದ ವಿಡಿಯೋ ವಿರುದ್ಧ ಕೆಲವು ರಾಜಕಾರಣಿಗಳು ಮಾಡಿದ ಟೀಕೆಗಳನ್ನು ಬಾಂಬೆ ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ. ನ್ಯಾಯಮೂರ್ತಿ ಗಿರೀಶ್...

ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ: ‘ಕುಮಾರಸ್ವಾಮಿ ಸಮ್ಮುಖದಲ್ಲೇ ವಿಡಿಯೋ ಅಪ್‌ಲೋಡ್’; ವರದಿಯ ಶೇ.10ರಷ್ಟನ್ನೇ ಬಹಿರಂಗಪಡಿಸಿದ್ದೇವೆ ಎಂದ ಕಾಂಗ್ರೆಸ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ರಾಜಕೀಯ ಸಂಘರ್ಷಕ್ಕೆ ಮತ್ತಷ್ಟು ತಿರುವು ನೀಡಿದೆ. ಸ್ಟಿಂಗ್ ಕಾರ್ಯಾಚರಣೆಗೆ ಬಳಸಲಾಗಿದೆ ಎನ್ನಲಾದ ಮೊಬೈಲ್ ಫೋನ್‌ಗಳನ್ನು ಕೇಂದ್ರ ಸಚಿವ...

ಕರ್ನಾಟಕ ಎಸ್‌ಐಆರ್‌ನ ಹಲವು ಅವಾಂತರಗಳು ಬಯಲು : ಸಂಪೂರ್ಣ ಮೌನ ಪಾಲಿಸಿದ ಚುನಾವಣಾ ಆಯೋಗ

ತೀವ್ರ ವಿರೋಧದ ನಡುವೆಯೂ ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಿದ ಚುನಾವಣಾ ಆಯೋಗ, 2026ರ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿ ಕೈತೊಳೆದುಕೊಂಡಿದೆ. ರಾಜ್ಯದ ಮುಖ್ಯ ಚುನಾವಣಾ ಆಯುಕ್ತ...

ವಕ್ಫ್ ತಿದ್ದುಪಡಿ ಕಾಯ್ದೆ 2025: ಸೀಮಿತ 5 ಅರ್ಜಿಗಳ ನಿಯಮ ತೆರವು; ಹೊಸ ರಿಟ್ ಅರ್ಜಿ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ!

ಕೇವಲ ಮಧ್ಯಂತರ ಅರ್ಜಿದಾರರಾಗಿ ವಾದ ಮಂಡಿಸಲು ಸಾಧ್ಯವಿಲ್ಲ ಎಂದ ಪೀಠ: 2027ರ ಜನವರಿಯಲ್ಲಿ ಅಂತಿಮ ವಿಸ್ತೃತ ವಿಚಾರಣೆ! ಕೇಂದ್ರ ಸರ್ಕಾರದ ವಿವಾದಾತ್ಮಕ ‘ವಕ್ಫ್ (ತಿದ್ದುಪಡಿ) ಕಾಯ್ದೆ 2025’ ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಡೆಯುತ್ತಿರುವ...

ಸ್ಥಳೀಯ ಸಂಸ್ಥೆ ಚುನಾವಣೆಗೆ ಯಾವುದೇ ಕಾರಣಕ್ಕೂ ‘SIR’ ಪಟ್ಟಿಯನ್ನು ಬಳಸಬೇಡಿ! ರಾಜ್ಯ ಸರ್ಕಾರಕ್ಕೆ ಹೋರಾಟಗಾರರ ಎಚ್ಚರಿಕೆ!

ಯುಪಿ, ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರಗಳೇ ಬದಿಗೊತ್ತಿದ ‘SIR’ ಪಟ್ಟಿಯನ್ನು ಕರ್ನಾಟಕ ಸರ್ಕಾರವೂ ಕೈಬಿಡಬೇಕು! ಕೇಂದ್ರ ಚುನಾವಣಾ ಆಯೋಗವು ‘ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಅಂತಿಮ ಪಟ್ಟಿ ಪ್ರಕಟಿಸಿದ ನಂತರವೂ ಲಕ್ಷಾಂತರ...

ಬಿಡದಿ ಟೌನ್‌ಶಿಪ್ : 2 ಗ್ರಾಮಗಳ 1,895 ಎಕರೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ

ರಾಮನಗರ ತಾಲೂಕಿನ ಬಿಡದಿ ಹೋಬಳಿಯಲ್ಲಿರುವ ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಗ್ರಾಮಗಳಲ್ಲಿ, ಪ್ರಸ್ತಾವಿತ 'ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್' (GBIT) ಯೋಜನೆಗಾಗಿ 1,895 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ...

ಪಂಜಾಬ್ : ಮೂವರು ಎಎಪಿ ಶಾಸಕರು ಬಿಜೆಪಿ ಸೇರ್ಪಡೆ; ವಿಧಾನಸಭೆ ಚುನಾವಣೆಗೆ ಮುನ್ನ ಮಹತ್ವದ ಬೆಳವಣಿಗೆ

ಪಂಜಾಬ್ ವಿಧಾನಸಭಾ ಚುನಾವಣೆಗೆ (2027) ಮುನ್ನ ಆಮ್ ಆದ್ಮಿ ಪಾರ್ಟಿ (ಎಎಪಿ) ನೇತೃತ್ವದ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಸೋಮವಾರ (ನ.2) ಮೂವರು ಶಾಸಕರಾದ ಹರ್ಮೀತ್ ಸಿಂಗ್ ಪಠಾನ್‌ಮಜ್ರಾ, ಚೇತನ್ ಸಿಂಗ್ ಜೌರಾಮಜ್ರಾ ಮತ್ತು...