Homeಕರೋನಾ ತಲ್ಲಣಒಂದೇ ದಿನಕ್ಕೆ 48,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು; ಒಟ್ಟು ಸೋಂಕಿತರ ಸಂಖ್ಯೆ 13.36 ಲಕ್ಷ!

ಒಂದೇ ದಿನಕ್ಕೆ 48,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು; ಒಟ್ಟು ಸೋಂಕಿತರ ಸಂಖ್ಯೆ 13.36 ಲಕ್ಷ!

ಭಾರತದಲ್ಲಿ ಇದುವರೆಗೆ ಒಟ್ಟಾರೆ 31,358 ಸಾವುಗಳು ಸಂಭವಿಸಿದ್ದು, ಯುಎಸ್, ಬ್ರೆಜಿಲ್, ಬ್ರಿಟನ್, ಮೆಕ್ಸಿಕೊ ಮತ್ತು ಇಟಲಿಯ ನಂತರ ದೇಶವು ವಿಶ್ವದ 6ನೇ ಸ್ಥಾನದಲ್ಲಿದೆ.

- Advertisement -
- Advertisement -

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 48,916 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13,36,861 ಕ್ಕೆ ಏರಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಈ ಒಂದು ದಿನದ ಅವಧಿಯಲ್ಲಿ 757 ಕೊರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ವರದಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದುವರೆಗೆ ಒಟ್ಟಾರೆ 31,358 ಸಾವುಗಳು ಸಂಭವಿಸಿದ್ದು, ಈಗ ಯುಎಸ್, ಬ್ರೆಜಿಲ್, ಬ್ರಿಟನ್, ಮೆಕ್ಸಿಕೊ ಮತ್ತು ಇಟಲಿಯ ನಂತರ ವಿಶ್ವದ 6ನೇ ಸ್ಥಾನದಲ್ಲಿದೆ.

ಚೇತರಿಕೆ ದರವು ಶೇಕಡಾ 63.53 ಮತ್ತು ಕೊರೊನಾ ಪಾಸಿಟೀವ್ ದರವು ಶೇಕಡಾ 11.62 ಆಗಿದೆ. ಶುಕ್ರವಾರ ಅತಿ ಹೆಚ್ಚು 4,20,898 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕೊರೊನಾ ಪ್ರಕರಣಗಳು 45,000 ಕ್ಕಿಂತ ಹೆಚ್ಚು ವರದಿಯಾಗುತ್ತಿರುವುದು ಇದು ಮೂರನೇ ಬಾರಿ.

ಕೊರೊನಾ ಬೆಳವಣಿಗೆಯ 10 ಪ್ರಮುಖ ಅಂಶಗಳು:

  1. ಭಾರತದಲ್ಲಿ ಶುಕ್ರವಾರ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 13 ಲಕ್ಷ ದಾಟಿದೆ. ದೇಶದಲ್ಲಿ ಒಂದೇ ದಿನದಲ್ಲಿ ದಾಖಲೆಯ 49,310 ಹೊಸ ಪ್ರಕರಣಗಳು ದಾಖಲಾಗಿವೆ.

2. ಭಾರತದ ಕೊರೊನಾ ಪ್ರಕರಣಗಳ ಮೊತ್ತವು 13 ಲಕ್ಷ ತಲುಪಲು 177 ದಿನಗಳನ್ನು ತೆಗೆದುಕೊಂಡಿತು. ಜುಲೈ 2 ರಿಂದ ದೇಶವು ಆರು ಲಕ್ಷಗಳನ್ನು ದಾಟಿದ ನಂತರ, ಭಾರತದಲ್ಲಿ ಸುಮಾರು ಮೂರು ವಾರಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ.

3. ಅತಿ ಹೆಚ್ಚು ಹಾನಿಗೊಳಗಾದ ಮಹಾರಾಷ್ಟ್ರದಲ್ಲಿ ಶುಕ್ರವಾರ 9,615 ಹೊಸ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 1,057 ಮುಂಬೈನಲ್ಲಿದೆ. ರಾಜ್ಯದ ಕೊರೊನಾ ಸೋಂಕಿತರ ಮೊತ್ತವು ಪ್ರಸ್ತುತ 3,57,117 ಆಗಿದೆ. ವೈರಸ್ ಸಂಬಂಧಿತ ಸಾವುಗಳ ಸಂಖ್ಯೆ 13,132 ಕ್ಕೆ ಏರಿಕೆಯಾಗಿದ್ದು, ಶುಕ್ರವಾರ 278 ಹೊಸ ಸಾವು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

4. ದೆಹಲಿಯಲ್ಲಿ ಶುಕ್ರವಾರ 1,025 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 1.28 ಲಕ್ಷ ಪ್ರಕರಣಗಳು ದಾಖಲಾಗಿವೆ. ಅಲ್ಲಿ ಈವರೆಗೆ ವೈರಸ್‌ನಿಂದ 3,777 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5. ದೆಹಲಿಯ ಚೇತರಿಕೆಯ ಪ್ರಮಾಣವು ಶೇಕಡಾ 86 ಕ್ಕಿಂತ ಹೆಚ್ಚಾಗಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳು 13,681 ಕ್ಕೆ ಇಳಿದಿದೆ. ಇದು ಕಳೆದ ಏಳು ವಾರಗಳಲ್ಲಿ ಅತಿ ಕಡಿಮೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ ತಿಳಿಸಿದೆ.

6. ಅಸ್ಸಾಂನಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ ಶುಕ್ರವಾರ 1,130 ಹೊಸ ಪ್ರಕರಣಗಳೊಟ್ಟಿಗೆ 29,921 ಕ್ಕೆ ತಲುಪಿದೆ. ಆರು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 76 ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

7. ಒಡಿಶಾದ ಕೊರೊನಾ ಸೋಂಕಿತರ ಮೊತ್ತವು ಶುಕ್ರವಾರ ದಾಖಲೆಯ 1,594 ಪ್ರಕರಣಗಳೊಟ್ಟಿಗೆ 22,693 ಕ್ಕೆ ಏರಿದೆ. ಗಂಜಾಂ ಜಿಲ್ಲೆಯಲ್ಲಿ ಗರಿಷ್ಠ 732 ಹೊಸ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ವೈರಸ್‌ನಿಂದ 120 ಜನರು ಸಾವನ್ನಪ್ಪಿದ್ದಾರೆ.

8. ಭಾರತವು ವಿಶ್ವದ ಅತ್ಯಂತ ಕಡಿಮೆ ಸೋಂಕು ಮತ್ತು ಸಾವಿನ ಪ್ರಮಾಣವನ್ನು ಹೊಂದಿದೆ” ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಶುಕ್ರವಾರ ಹೇಳಿದ್ದಾರೆ. ದೇಶದಲ್ಲಿ ಸೋಂಕಿತರು ಶೇಕಡಾ 63.45 ರಷ್ಟಿದ್ದರೆ, ಮರಣ ಪ್ರಮಾಣವು ಶೇಕಡಾ 2.3 ರಷ್ಟಿದೆ.

9. ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಜಾಗತಿಕ ಕೊರೊನಾ ವೈರಸ್ ಪ್ರಕರಣಗಳಲ್ಲಿ ದಾಖಲೆಯ ಹೆಚ್ಚಳವನ್ನು ವರದಿ ಮಾಡಿದೆ. ಒಟ್ಟು 24 ಗಂಟೆಗಳಲ್ಲಿ 284,196 ರಷ್ಟು ಏರಿಕೆಯಾಗಿದೆ.

10. ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ 633,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. 15.5 ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಸುದ್ದಿ ಸಂಸ್ಥೆ AFP ತಿಳಿಸಿದೆ.


ಇದನ್ನೂ ಓದಿ: ರಾಜಸ್ಥಾನ ಬಿಕ್ಕಟ್ಟು: ಅಧಿವೇಶನ ಕರೆಯಲು ಆಗ್ರಹಿಸಿ ತಡರಾತ್ರಿವರೆಗೂ ಪ್ರತಿಭಟನೆ – 102 ಶಾಸಕರ ಪಟ್ಟಿ ರವಾನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...