Homeಕರ್ನಾಟಕಗುತ್ತಿಗೆದಾರ ಆತ್ಮಹತ್ಯೆ ಎಂದು ಸುಳ್ಳು ಸುದ್ದಿ ಬಿತ್ತರಿಸಿದ ಮಾಧ್ಯಮಗಳು: ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ- ತಂದೆ ಸ್ಪಷ್ಟನೆ

ಗುತ್ತಿಗೆದಾರ ಆತ್ಮಹತ್ಯೆ ಎಂದು ಸುಳ್ಳು ಸುದ್ದಿ ಬಿತ್ತರಿಸಿದ ಮಾಧ್ಯಮಗಳು: ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ- ತಂದೆ ಸ್ಪಷ್ಟನೆ

- Advertisement -
- Advertisement -

ಬೆಂಗಳೂರಿನ ವಿಜಯನಗರದಲ್ಲಿ ಮಾಜಿ ಕಾರ್ಪೋರೇಟರ್‌ ಪುತ್ರ ಗೌತಮ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕೆಲವು ಮಾಧ್ಯಮಗಳು ಕಾಮಗಾರಿಯ ಬಿಲ್ ಪಾವತಿಸದಿದ್ದಕ್ಕೆ ಬಿಬಿಎಂಪಿ ಗುತ್ತೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಬಿತ್ತರಿಸಿದ್ದವು. ಆದರೆ ಆತ ಗುತ್ತಿಗೆದಾರನೇ ಅಲ್ಲ ತನ್ನ ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಗೌತಮ್ ಅವರ ತಂದೆಯೇ ಸ್ಪಷ್ಟನೆ ನೀಡಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದ ವಾಹಿನಿ

ಗೌತಮ್‌ ವಿಜಯನಗರದ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿಯೇ (ಆ.09) ಫ್ಯಾನ್‌ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಇವರು ಅತ್ತಿಗುಪ್ಪೆಯ ಮಾಜಿ ಕಾರ್ಪೋರೇಟರ್ ದೊಡ್ಡಯ್ಯರ ಅವರ ಮಗನಾಗಿದ್ದು, ಇದೀಗ ಅವರೇ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ಏನು ಎಂಬುದನ್ನು ಗೌತಮ್ ಅವರ ತಂದೆ ಹಾಗೂ ಮಾವ ಆನಂದ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮೃತ ಗೌತಮ್ ಅವರ ಮಾವ ಆನಂದ್, ”ನಾವು ಕಾಂಗ್ರೆಸ್ ಪಕ್ಷದವರು ನಮ್ಮ ವಿರುದ್ಧ ಬಿಜೆಪಿಯವರು ಪಿತೂರಿ ಮಾಡಿದ್ದಾರೆ. ಗೌತಮ್ ಯಾವುದೇ ಗುತ್ತಿಗೆದಾರನಲ್ಲ. ಅವರ ಹೆಸರಲ್ಲಿ ಯಾವುದೇ ಪರವಾನಗಿ ಇಲ್ಲ. ಗೌತಮ್ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌತಮ್‌ಗೆ ಮದುವೆ ಮಾಡಲು ಎರಡು ತಿಂಗಳಿಂದ ಹೆಣ್ಣು ಹುಡುಕುತ್ತಿದ್ದವಿ. ಗುತ್ತಿಗೆದಾರ ಆತ್ಮಹತ್ಯೆಗೆ ಶರಣು ಎಂಬುದೆಲ್ಲ ಸುಳ್ಳು ಬಿಜೆಪಿಯವರು ಪಿತೂರಿ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

”ಗುರುವಾರ ಮಧ್ಯಾಹ್ನ ಊಟಕ್ಕೆ ಕರೆಯಲು ಹೋದಾಗ ನಮಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಬಂದಿದೆ” ಎಂದು ಗೌತಮ್ ತಂದೆ ಮಾಜಿ ಕಾರ್ಪೋರೇಟರ್ ದೊಡ್ಡಯ್ಯ ಹೇಳಿದ್ದಾರೆ.

”ರೂಮ್ ಲಾಕ್ ಆಗಿದ್ದರಿಂದ ಗೌತಮ್‌ ಫೋನ್‌ಗೆ ಕರೆ ಮಾಡಲಾಗಿತ್ತು. ಆದರೆ ತೆರೆಯದೆ ಇದ್ದಾಗ ಅನುಮಾನ ಬಂತು. ಬಾಗಿಲಿಂದ ವಾಸನೆ ಬರುತ್ತಿತ್ತು. ಬಾಗಿಲು ಹೊಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ” ಎಂದು ಅವರು ಹೇಳಿದರು.

”ಆತ ನಾಲ್ಕು ಐದು ತಿಂಗಳಿನಿಂದ ಡಿಪ್ರೆಷನ್‌ನಲ್ಲಿದ್ದನು. ಸಮಸ್ಯೆ ಏನು ಎಂದು ಕೇಳಿದರೂ ಅವನು ಏನು ಹೇಳುತ್ತಿರಲಿಲ್ಲ. ಅವನೇ ಮದುವೆ ಮಾಡಿ ಎಂದು ಹೇಳಿದ್ದನು. ಹೀಗಾಗಿ ಆರು ತಿಂಗಳಿನಿಂದ ಅವನಿಗೆ ಹುಡುಗಿ ಹುಡುಕುತ್ತಿದ್ದೆವು. ಕೆಲವು ಹುಡುಗಿಯರ ಫೋಟೊವನ್ನು ತೋರಿಸಿದ್ದೇವೆ. ಅವನು ಯಾವುದೇ ಗುತ್ತಿಗೆದಾರನಲ್ಲ ಯಾವುದೇ ಲೈಸೆನ್ಸ್ ಇಲ್ಲ. ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಮಗೆ ಪಿತ್ರಾರ್ಜಿತ ಆಸ್ತಿನೇ ಇದೆ. ನಾವು ನೋವಿನಲ್ಲಿದ್ದೇವೆ, ನಮಗೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ತಿಳಿದಿಲ್ಲ. ಆತನ ರೂಮಿನಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ದಂಧೆ ನಡೆದರೆ ಬಹಿರಂಗಪಡಿಸುತ್ತೇವೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...