Homeಕರೋನಾ ತಲ್ಲಣಮಾನಸಿಕ ಗೊಂದಲವೂ ಕೊರೊನಾದ ಪ್ರಾಥಮಿಕ ಲಕ್ಷಣವಾಗಿರಬಹುದು!- ಅಧ್ಯಯನ

ಮಾನಸಿಕ ಗೊಂದಲವೂ ಕೊರೊನಾದ ಪ್ರಾಥಮಿಕ ಲಕ್ಷಣವಾಗಿರಬಹುದು!- ಅಧ್ಯಯನ

ಯೋಚಿಸುವುದು, ನೆನಪಿಟ್ಟುಕೊಳ್ಳುವುದು, ನಿದ್ರೆ ಮಾಡುವುದು, ಗಮನ ಕೇಂದ್ರೀಕರಿಸುವುದು ಮತ್ತು ಇನ್ನೂ ಹೆಚ್ಚಿನ ಕೆಲಸಗಳನ್ನು ಕಷ್ಟಕರವಾಗಿಸುತ್ತದೆ

- Advertisement -
- Advertisement -

ಜ್ವರದೊಂದಿಗೆ ತೀವ್ರವಾದ ಮಾನಸಿಕ ಗೊಂದಲದ ಸ್ಥಿತಿಯ ಸನ್ನಿವೇಶವು ಕೊರೊನಾದ ಆರಂಭಿಕ ಲಕ್ಷಣವಾಗಿರಬಹುದು ಎಂದು ಹೊಸ ಸಂಶೋಧನೆಗಳ ಫಲಿತಾಂಶಗಳು ತೋರಿಸಿಕೊಟ್ಟಿವೆ.

ಡೆಲಿರಿಯಮ್ ಮೆದುಳಿನಲ್ಲಿ ಹಠಾತ್ ಬದಲಾವಣೆಯಾಗಿ, ಅದು ಮಾನಸಿಕ ಗೊಂದಲ ಮತ್ತು ಭಾವನಾತ್ಮಕತೆಗೆ ಅಡ್ಡಿ ಉಂಟುಮಾಡುತ್ತದೆ. ಇದರಿಂದ ಯೋಚಿಸುವುದು, ನೆನಪಿಟ್ಟುಕೊಳ್ಳುವುದು, ನಿದ್ರೆ ಮಾಡುವುದು, ಗಮನ ಕೇಂದ್ರೀಕರಿಸುವುದು ಮತ್ತು ಇನ್ನೂ ಹೆಚ್ಚಿನ ಕೆಲಸಗಳನ್ನು ಕಷ್ಟಕರವಾಗಿಸುತ್ತದೆ ಎಂದು ನ್ಯಾಷನಲ್ ಹೆರಾಲ್ಡ್‌ ವರದಿ ಮಾಡಿದೆ.

ಜರ್ನಲ್ ಆಫ್ ಕ್ಲಿನಿಕಲ್ ಇಮ್ಯುನೊಲಾಜಿ ಮತ್ತು ಇಮ್ಯುನೊಥೆರಪಿಯಲ್ಲಿ ಪ್ರಕಟವಾದ ಈ ಅಧ್ಯಯನದ ವರದಿಯು, ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುವದಕ್ಕಿಂತ ಮುಂಚಿನ ದಿನಗಳಲ್ಲಿ ಉಂಟಾಗುವ ರುಚಿ, ವಾಸನೆ ಹಾಗೂ ತಲೆನೋವಿನೊಂದಿಗೆ ಇಂತಹ ಸನ್ನಿವೇಶಗಳನ್ನು ಎದುರಿಸಿರುತ್ತಾರೆ ಎಂದು ಹೇಳುತ್ತದೆ.

ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿದ ರಾಜಕಾರಣಿಗಳ ಬಂಧನ ಯಾಕಿಲ್ಲ?- ರಾಜ್ಯವನ್ನು ತರಾಟೆ ಪಡೆದ ಹೈಕೋರ್ಟ್

“ಹೆಚ್ಚಿನ ಜ್ವರದಿಂದ ಬಳಲುತ್ತಿರುವಾಗ, ವಿಶೇಷವಾಗಿ ವಯಸ್ಸಾದ ರೋಗಿಗಳ ವಿಷಯದಲ್ಲಿ ಈ ರೀತಿಯ ಗೊಂದಲದ ಅಭಿವ್ಯಕ್ತಿಯನ್ನು ರೋಗದ ಆರಂಭಿಕ ಗುರುತು ಎಂದು ಪರಿಗಣಿಸಬೇಕು. ವಿಶೇಷವಾಗಿ ಈ ರೀತಿಯ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನಾವು ಜಾಗರೂಕರಾಗಿರಬೇಕು. ಏಕೆಂದರೆ ಒಬ್ಬ ವ್ಯಕ್ತಿಯು ಕೆಲವು ಗೊಂದಲಗಳ ಚಿಹ್ನೆಗಳನ್ನು ಪ್ರಸ್ತುತಪಡಿಸುವುದರಿಂದ ಅವು ಸೋಂಕಿನ ಸೂಚನೆಯಾಗಿರಬಹುದು” ಎಂದು ಯೂನಿವರ್ಸಿಟಾಟ್ ಒಬೆರ್ಟಾ ಡಿ ಕ್ಯಾಟಲುನ್ಯಾ (ಯುಒಸಿ) ಅಧ್ಯಯನ ಸಂಶೋಧಕ ಜೇವಿಯರ್ ಕೊರಿಯಾ ಹೇಳಿದ್ದಾರೆ.

ಸಂಶೋಧನಾ ತಂಡವು ಕೇಂದ್ರ ನರಮಂಡಲಕ್ಕೆ ಸಂಬಂಧಿಸಿದಂತೆ ಕೊರೊನಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದೆ.

ಚೀನಾದಲ್ಲಿ ನ್ಯುಮೋನಿಯಾದ ಮೊದಲ ಪ್ರಕರಣಗಳು ಶ್ವಾಸಕೋಶ ಮತ್ತು ಮೂತ್ರಪಿಂಡಗಳು ಹಾಗೂ ಹೃದಯದಂತಹ ಇತರ ಅಂಗಗಳಿಗೆ ಉಂಟಾಗುವ ಹಾನಿಯ ಮೇಲೆ ಕೇಂದ್ರೀಕರಿಸಿದರೂ, ಕೊರೊನಾ ವೈರಸ್ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಎಂಬ ಸೂಚನೆಗಳು ಹೆಚ್ಚುತ್ತಿವೆ ಎಂದು ಕಂಡುಹಿಡಿಯಲಾಗಿದೆ.


ಇದನ್ನೂ ಓದಿ: ಆಂಧ್ರ ಪ್ರದೇಶ: 262 ವಿದ್ಯಾರ್ಥಿಗಳಿಗೆ ಕೊರೊನಾ, ಆತಂಕ ಬೇಡ ಎಂದ ಇಲಾಖೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...