Homeಮುಖಪುಟಮಹಾರಾಷ್ಟ್ರ: 300 ರೂ.ಗಾಗಿ ಅಪ್ರಾಪ್ತ ಬಾಲಕನ ವಿವಸ್ತ್ರಗೊಳಿಸಿ ಥಳಿತ!

ಮಹಾರಾಷ್ಟ್ರ: 300 ರೂ.ಗಾಗಿ ಅಪ್ರಾಪ್ತ ಬಾಲಕನ ವಿವಸ್ತ್ರಗೊಳಿಸಿ ಥಳಿತ!

- Advertisement -
- Advertisement -

ಸಾಲವಾಗಿ ಪಡೆದುಕೊಂಡಿದ್ದ 300 ರೂಪಾಯಿ ಹಣವನ್ನು ವಾಪಸ್‌ ಕೊಡದಿದ್ದಕ್ಕೆ 17 ವರ್ಷದ ಬಾಲಕನನ್ನು ವಿವಸ್ತ್ರಗೊಳಿಸಿ ಥಳಿಸಿದ ಅಮಾನವೀಯ ಘಟನೆ ಮಹಾರಾಷ್ಟ್ರದ ಥಾಣೆಯ ಕಲ್ವಾ ಪ್ರದೇಶದಲ್ಲಿ ನಡೆದಿದೆ.

ಬಾಲಕನ ಮೇಲೆ ನಡೆದ ದೌರ್ಜನ್ಯದ ವಿಡಿಯೋ ವೈರಲ್‌ ಆದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಕಲ್ವಾ ಪ್ರದೇಶದ ನಿವಾಸಿಗಳಾದ ತೌಸೀಫ್ ಖಾನ್‌ಬಂದೇ ಮತ್ತು ಶಾಮಿಲ್ ಖಾನ್‌ಬಂದೇ ಆರೋಪಿಗಳು ಎಂದು ಗುರುತಿಸಲಾಗಿದೆ. ಸಂತ್ರಸ್ತ ಬಾಲಕ ಮತ್ತು ಆರೋಪಿಗಳು ಒಂದೇ ಊರಿನವರು ಎಂದು ತಿಳಿದು ಬಂದಿದೆ.

ಸಂತ್ರಸ್ತ ಬಾಲಕ ಕಳೆದ ವರ್ಷ ಆರೋಪಿಗಳಿಂದ 300 ರೂಪಾಯಿ ಸಾಲ ಪಡೆದಿದ್ದ. ಅದನ್ನು ಹಿಂದಿರುಗಿಸುವಂತೆ ಆರೋಪಿಗಳು ಒತ್ತಾಯಿಸುತ್ತಿದ್ದರು. ಬಾಲಕ ಶೀಘ್ರದಲ್ಲೇ ಕೊಡುವುದಾಗಿ ಹೇಳುತ್ತಿದ್ದ. ಇದರಿಂದ ಕೋಪಗೊಂಡ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ತೌಸೀಫ್ ಬಾಲಕನ ಬ್ಲೂಟೂತ್‌ ತೆಗೆದಿಟ್ಟುಕೊಂಡಿದ್ದ. ಹಣ ವಾಪಸ್‌ ಕೊಡದೆ ಹಿಂದಿರುಗಿಸಲ್ಲ ಎಂದಿದ್ದ. ತೌಸೀಫ್ ಮನೆಯಲ್ಲಿ ಇಲ್ಲದ ವೇಳೆ ಆತನ ತಾಯಿಯಿಂದ ಬಾಲಕ ಬ್ಲೂಟೂತ್ ವಾಪಸ್ ಪಡೆದುಕೊಂಡು ಬಂದಿದ್ದ. ಇದರಿಂದ ಹೆಚ್ಚು ಕುಪಿತಗೊಂಡ ಆರೋಪಿಗಳು ಬಾಲಕನನ್ನು ವಿವಸ್ತ್ರಗೊಳಿಸಿ ತಳಿಸಿದ್ದಾರೆ. ಈ ಸಂಬಂಧ ಕಲ್ವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ : ಗುಜರಾತ್: ಪಾದರಕ್ಷೆ ಬಾಯಿಯಲ್ಲಿ ಹಿಡಿದುಕೊಳ್ಳುವಂತೆ ದಲಿತ ವ್ಯಕ್ತಿಗೆ ಒತ್ತಾಯ; ಉದ್ಯಮಿ ವಿರುದ್ಧ ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read