Homeಮುಖಪುಟನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

ಒಡಿಶಾದ 26 ವರ್ಷದ ಮಹಿಳಾ ಕ್ರಿಕೆಟರ್ ರಾಜಶ್ರೀ ಸ್ವೈನ್ ಎಂಬುವವರು ಶುಕ್ರವಾರ ಕಟಕ್ ಜಿಲ್ಲೆಯ ದಟ್ಟ ಅರಣ್ಯದೊಳಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಜನವರಿ 11 ರಿಂದ ಆಕೆ ನಾಪತ್ತೆಯಾಗಿದ್ದು, ಆಕೆಯ ಸ್ಕೂಟರ್ ಕಾಡಿನ ಬಳಿಯೇ ಪತ್ತೆಯಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಪ ಪೊಲೀಸ್ ಆಯುಕ್ತ ಪಿನಾಕ್ ಮಿಶ್ರಾ, “ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ. ಅಥಗಢ ಪ್ರದೇಶದ ಗುರುಡಿಝಾಟಿಯಾ ಅರಣ್ಯದಲ್ಲಿ ಆಕೆಯ ದೇಹವು ಮರಕ್ಕೆ ನೇತಾಡುತ್ತಿರುವುದು ಕಂಡಬಂದಿದೆ. ಈ ಪ್ರಕರಣವನ್ನು ನಾವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತೇವೆ” ಎಂದು ಅವರು ಹೇಳಿದ್ದಾರೆ.

ತಕ್ಷಣಕ್ಕೆ ಈ ಸಾವಿನ ಬಗ್ಗೆ ನಿಖರವಾದ ಕಾರಣ ಹೇಳಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ರಾಜಶ್ರೀ ಸ್ವೈನ್ ಸಾವಿಗೆ ಕಾರಣ ಏನು ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಮಿಶ್ರಾ ಹೇಳಿದ್ದಾರೆ.

ಒಡಿಶಾ ಕ್ರಿಕೆಟ್ ಸಂಸ್ಥೆಯು ಪುದುಚೇರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಾಗಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಪುರಿ ಜಿಲ್ಲೆಯ ಕ್ರಿಕೆಟಿಗರಾದ ಮೃತ ರಾಜಶ್ರೀ ಸ್ವೈನ್ ಇಲ್ಲಿಗೆ ಬಂದಿದ್ದರು.

“ಪಂದ್ಯಾವಳಿಗೆ ಆಯ್ಕೆಯಾದ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸ್ವೈನ್ ವಿಫಲರಾದರು. ತಂಡಕ್ಕೆ ಆಯ್ಕೆಯಾದ ಸದಸ್ಯರ ಹೆಸರನ್ನು ಘೋಷಿಸಿದ ನಂತರ ಅವಳು ಬುಧವಾರ ಸಂಜೆ ಅಳುತ್ತಿದ್ದಳು. ಆ ಬಳಿಕ ಸ್ವಲ್ಪ ಸಮಯದಲ್ಲೇ ಆಕೆ ಹೋಟೆಲ್‌ನಿಂದ ಕಾಣೆಯಾಗಿದ್ದರು. ನಾವು ತರಬೇತಿಯ ಸಮಯಕ್ಕೆ ಹೋಟೆಲ್‌ನಿಂದ ಹೊರಟೆವು” ಎಂದು ಸ್ವೈನ್‌ರ ರೂಮ್‌ಮೇಟ್ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read