Homeರಾಜಕೀಯ‘ಮತ್ತೆ ದಾಳಿ ನಡೆಸಿದ ಸಿಬಿಐ’: ದೆಹಲಿ ಡಿಸಿಎಂ ಸಿಸೋಡಿಯಾ ಆರೋಪ

‘ಮತ್ತೆ ದಾಳಿ ನಡೆಸಿದ ಸಿಬಿಐ’: ದೆಹಲಿ ಡಿಸಿಎಂ ಸಿಸೋಡಿಯಾ ಆರೋಪ

- Advertisement -
- Advertisement -

‘ಮತ್ತೆ’ ಶೋಧ ನಡೆಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ತಮ್ಮ ಕಚೇರಿಯನ್ನು ತಲುಪಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶನಿವಾರ ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ ಅವರು, ಸಿಬಿಐ ಅಧಿಕಾರಿಗಳು ನಮ್ಮ ಗ್ರಾಮದಲ್ಲಿನ ಆಸ್ತಿಗಳ ಮೇಲೆ ದಾಳಿ ನಡೆಸಿದರು ಆದರೆ ಅವರಿಗೆ ‘ಏನೂ ಕಂಡುಬಂದಿಲ್ಲ’ ಎಂದು ಹೇಳಿದ್ದಾರೆ.

ಸಿಬಿಐ ದಾಳಿಯ ಬಗ್ಗೆ ಹೇಳಿಕೆ ನೀಡಿರುವ ಅವರು, “ನನ್ನ ವಿರುದ್ಧ ಏನೂ ಪತ್ತೆಯಾಗಿಲ್ಲ. ಯಾಕೆಂದರೆ ನಾನು ಯಾವುದೇ ತಪ್ಪು ಮಾಡದ ಕಾರಣ ಅವರಿಗೆ ಏನೂ ಸಿಗುವುದಿಲ್ಲ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬೆಳವಣಿಗೆಯ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಸೋಡಿಯಾ, “ಇಂದು ಮತ್ತೊಮ್ಮೆ ಸಿಬಿಐ ನನ್ನ ಕಚೇರಿಯನ್ನು ತಲುಪಿದೆ, ಅವರಿಗೆ ಸ್ವಾಗತ. ಅವರು ನನ್ನ ಮನೆ ಮೇಲೆ ದಾಳಿ ಮಾಡಿದರು, ನನ್ನ ಕಚೇರಿ ಮೇಲೆ ದಾಳಿ ಮಾಡಿದರು, ನನ್ನ ಲಾಕರ್‌ನಲ್ಲಿ ಶೋಧಿಸಿದರು ಮತ್ತು ನನ್ನ ಹಳ್ಳಿಯಲ್ಲೂ ಶೋಧ ನಡೆಸಿದರು. ನಾನು ದಹಲಿಯ ಮಕ್ಕಳ ಶಿಕ್ಷಣಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಉಪ ಮುಖ್ಯಮಂತ್ರಿಯ ಹೇಳಿಕೆಯನ್ನು ಸಿಬಿಐ ಮೂಲಗಳು ನಿರಾಕರಿಸಿದ್ದು, ಅವರಿಗೆ ಸೇರಿದ ಆಸ್ತಿಗಳಲ್ಲಿ ಯಾವುದೇ ಶೋಧನೆ ನಡೆಸಲಾಗಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ದಾಖಲೆಗಳನ್ನು ಸಂಗ್ರಹಿಸಲು ಅಧಿಕಾರಿಗಳ ತಂಡವು ಅವರ ಕಚೇರಿಗೆ ತೆರಳಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ ಎಂದು ಇಂಡಿಯ ಟುಡೆ ವರದಿ ಉಲ್ಲೇಖಿಸಿದೆ.

“ಮನೀಷ್ ಸಿಸೋಡಿಯಾ ಅವರ ಆವರಣದಲ್ಲಿ ಸಿಬಿಐನಿಂದ ಯಾವುದೇ ಹುಡುಕಾಟಗಳು ನಡೆದಿಲ್ಲ. ಸಿಆರ್‌ಪಿಸಿಯ ಸೆಕ್ಷನ್ 91 ರ ದಾಖಲೆಯನ್ನು ಸಲ್ಲಿಸಲು ನೋಟಿಸ್ ನೀಡಲಾಗಿದೆ. ತಂಡವು ಈ ದಾಖಲೆಯನ್ನು ಸಂಗ್ರಹಿಸಲು ಸಿಸೋಡಿಯಾ ಅವರ ಕಚೇರಿಗೆ ತೆರಳಿದೆ” ಎಂದು ಸಿಬಿಐ ಮೂಲಗಳು ತಿಳಿಸಿವೆ ಎಂದು ವರದಿ ಉಲ್ಲೇಖಿಸಿದೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರ ಆಸ್ತಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ಸುಮಾರು ಐದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ. ಸುಮಾರು 12 ಗಂಟೆಗೂ ಹೆಚ್ಚು ಕಾಲ ದಾಳಿ ನಡೆದಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...