Homeಕರ್ನಾಟಕಆನಂದಸಿಂಗ್ ರಾಜಿನಾಮೆ ಬ್ಲ್ಯಾಕ್‍ಮೇಲ್ ತಂತ್ರವೋ? ಅಸಲಿ ಕಾರಣ ಇದಲ್ಲವೇ?

ಆನಂದಸಿಂಗ್ ರಾಜಿನಾಮೆ ಬ್ಲ್ಯಾಕ್‍ಮೇಲ್ ತಂತ್ರವೋ? ಅಸಲಿ ಕಾರಣ ಇದಲ್ಲವೇ?

ರಾಜ್ಯ ಸರ್ಕಾರದ ಹೊಸ ಮೈನಿಂಗ್ ಲೀಸ್ ನೀತಿಯ ಪ್ರಕಾರ ಫ್ಯಾಕ್ಟರಿ ಇರುವ ಕಂಪನಿಗಳಿಗೆ ಮಾತ್ರ ಲೀಸ್ ನೀಡಲಾಗುವುದು ಎಂಬ ನಿಯಮವಿದೆ ಎನ್ನಲಾಗಿದೆ. ಹೀಗಾದರೆ ಆನಂದಸಿಂಗ್, ಲಾಡ್ ಮುಂತಾದವರಿಗೆ ಹೊಸ ಲೀಸ್ ಸಿಗುವುದು ಅಸಾಧ್ಯ.

- Advertisement -
- Advertisement -

| ಮಲ್ಲನಗೌಡರ್ |

ಇವತ್ತು ಮುಂಜಾನೆಯಿಂದ ಸರ್ಕಾರ ಬೀಳುವ/ ಬೀಳಿಸುವ ಆಟ ಹೊರನೋಟಕ್ಕೆ ಐಪಿಎಲ್ ಮ್ಯಾಚಿನ ಖದರು ಕಳೆಗಟ್ಟಿಕೊಂಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕದಲ್ಲಿರುವಾಗ ದಿಢೀರನೆ ರಾಜಿನಾಮೆಯ ಕರಿಮೋಡಗಳು ಕಾಣತೋಡಗಿದ್ದು ಇವು ಮಳೆ ಸುರಿಸುತ್ತವಾ ಅಥವಾ ಎಂದಿನಂತೆ ಹಾಗೆ ಬಂದಂತೆ ಹೀಗೆ ತೇಲಿ ಹೋಗುತ್ತವಾ ಎಂಬ ಪ್ರಶ್ನೆ ಎದ್ದಿದೆ.

ಈ ರಾಜಿನಾಮೆ ಕ್ಲೈಮೇಟಿನಲ್ಲಿ ಎದ್ದು ಹೊಡೆಯುತ್ತಿರುವುದು ಹೊಸಪೇಟೆಯ ಶಾಸಕ ಆಂದ್‍ಸಿಂಗ್ ನಡವಳಿಕೆ. ಅವರೀಗ ಸ್ಪೀಕರ್ ಪಿ.ಎಸ್‍ಗೆ ರಾಜಿನಾಮೆ ಕೊಟ್ಟು ಮಾಧ್ಯಮಗಳ ಎದುರು ಅವರು ಸ್ಪೀಕರ್ ಹೆಸರಲ್ಲಿ ಬರೆದ ರಾಜಿನಾಮೆ ಪತ್ರವನ್ನು ಪ್ರದರ್ಶಿಸಿದ್ದಾರೆ. ಇದಕ್ಕೂ ಮೊದಲು ಅವರು ರಾಜಿನಾಮೆಯನ್ನು ರಾಜ್ಯಪಾಲರಿಗೆ ಕೊಟ್ಟಿದ್ದು ವಿಚಿತ್ರವೂ ಆಗಿತ್ತು, ಹಾಸ್ಯಾಸ್ಪದವೂ ಆಗಿತ್ತು. ಬಹುಷ ಅದು ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ಕೆಲಸ ಮಾಡಿಸಿಕೊಳ್ಳುವ ತಂತ್ರವಾಗಿದೆ. ಜಿಂದಾಲ್ ಕಂಪನಿಗೂ ಆನಂದಸಿಂಗ್‍ರಿಗೂ ವ್ಯವಹಾರದ ಮಟ್ಟಿಗೆ ಸರಿಯಿಲ್ಲ.

ಜಿಂದಾಲ್‍ಗೆ ಭೂಮಿ ಮಾರಾಟ ಮಾಡಬಾರದು ಎಂದು ಬಹಿರಂಗವಾಗಿ ಹೇಳಿದ ಏಕೈಕ ಬಳ್ಳಾರಿ ಶಾಸಕ ಅವರು. ಹಿಂದೆಯೂ ಒಮ್ಮೆ ಅವರು ಹೊಸಪೇಟೆ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆ ಇದ್ದಾಗ ಜಿಂದಾಲ್‍ಗೆ ನೀರು ಬಿಡಬಾರದು ಎಂದಿದ್ದರು.

ಈಗ ಜಿಂದಾಲ್‍ಗೆ ಭೂಮಿ ಮಾರಾಟ ವಿಷಯದ ಮರುಪರಿಶೀಲನೆ ಮಾಡಲು ರಚಿಸಿರುವ ಎಂಬಿ ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಮೇಲೆ ಒತ್ತಡ ಹೇರಲು, ಆ ಮೂಲಕ ಜಿಂದಾಲ್‍ಗೆ ಭೂಮಿ ಮಾರಾಟ ಆಗದಂತೆ ತಡೆಯುವ ಪ್ರಯತ್ನವನ್ನು ಆನಂದಸಿಂಗ್ ಮಾಡುತ್ತಿರುವ ಸಾಧ್ಯತೆ ಇದೆ. ತಮಗೆ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಬೆಂಬಲವೂ ಇದೆ ಎಂದು ಆನಂದಸಿಂಗ್ ಹೇಳುತ್ತಿರುವುದು ಕುತೂಹಲಕರವಾಗಿದೆ. ಹೊಸಪೇಟೆ ಕೇಂದ್ರವಾಗಿಸಿ ವಿಜಯನಗರ ಹೊಸ ಜಿಲ್ಲೆ ರಚಿಸಬೇಕೆಂಬ ಬೇಡಿಕೆಗಾಗಿ ರಾಜಿನಾಮೆ ನಿಡುತ್ತಿರುವುದಾಗಿಯೂ ಆನಂದಸಿಂಗ್ ಹೇಳಲು ಶುರು ಮಾಡಿದ್ದಾರೆ.

ಇಲ್ಲಿ ಒಂದು ಸೂಕ್ಷ್ಮ ವಿಷಯವೂ ಇದೆ. ರಾಜ್ಯ ಸರ್ಕಾರದ ಹೊಸ ಮೈನಿಂಗ್ ಲೀಸ್ ನೀತಿಯ ಪ್ರಕಾರ ಫ್ಯಾಕ್ಟರಿ ಇರುವ ಕಂಪನಿಗಳಿಗೆ ಮಾತ್ರ ಲೀಸ್ ನೀಡಲಾಗುವುದು ಎಂಬ ನಿಯಮವಿದೆ ಎನ್ನಲಾಗಿದೆ. ಹೀಗಾದರೆ ಆನಂದಸಿಂಗ್, ಲಾಡ್ ಮುಂತಾದವರಿಗೆ ಹೊಸ ಲೀಸ್ ಸಿಗುವುದು ಅಸಾಧ್ಯ. ಹೊಸ ಲೀಸ್‍ಗಳೆಲ್ಲ ಜಿಂದಾಲ್ ಪಾಲಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. ಈ ಹೊಸ ನಿಯಮ ತಿದ್ದುಪಡಿ ಮಾಡಿ ಫ್ಯಾಕ್ಟರಿ ಇಲ್ಲದ ಮೈನಿಂಗ್ ಕಂಪನಿಗಳಿಗೂ ಲೀಸ್ ನೀಡುವ ಅವಕಾಶ ಮಾಡಿಕೊಡಿ ಎಂಬ ಒತ್ತಡ ಹೇರುವ ತಂತ್ರವಾಗಿಯೂ ಇದನ್ನು ನೋಡಬಹುದು.

ತಮ್ಮ ವೈಯಕ್ತಿಕ ಲಾಭಕ್ಕಾಗಿ ತಾವಿರುವ ಪಕ್ಷದ ಮೇಲೆ ಒತ್ತಡ ಹೇರಲು ಹಿಂದೆ ಇಂತಹ ಹಲವಾರು ಬ್ಲ್ಯಾಕ್‍ಮೇಲ್ ತಂತ್ರಗಳನ್ನು ಆನಂದಸಿಂಗ್ ಅನುಸರಿಸಿದ್ದಾರೆ. ಅವರು ಬಿಜೆಪಿ ಶಾಸಕರಾಗಿದ್ದಾಗ ಮಂತ್ರಿ ಪದವಿ ಪಡೆಯಲು ಒತ್ತಡ ಹೇರುವ ಸಲುವಾಗಿ ಹೊಸಪೇಟೆಯಲ್ಲಿ ಭವ್ಯವಾಗಿ ಟಿಪ್ಪು ಜಯಂತಿ ಆಚರಿಸಿದ್ದರು. ಕಾಂಗ್ರೆಸ್ ಶಾಸಕರಾದ ಮೇಲೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಲು ಒತ್ತಡ ಹೇರಲು ಹನುಮ ಮಾಲೆ ಜಯಂತಿಯಲ್ಲಿ ಭಾಗವಹಿಸಿ ಕಾಂಗ್ರೆಸ್ ನಾಯಕರಲ್ಲಿ ದಿಗಿಲು ಮೂಡಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಲು ರಮೇಶ ಜಾರಕಿಹೊಳಿ ಗುಂಪಿನೊಂದಿಗೆ ಮುಂಬೈ ಸುತ್ತಾಡಿ ಬಂದಿದ್ದ ಅವರು, ಬಹುಮತ ಸಾಬೀತುಪಡಿಸುವ ವೇಳೆಗೆ ಕಾಂಗ್ರೆಸ್ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಡಿಸೆಂಬರ್‍ನಲ್ಲಿ ಆಪರೇಷನ್ ಕಮಲ ವಿಫಲವಾದ ನಂತರ ರೆಸಾರ್ಟಿನಲ್ಲಿ ಗದ್ದಲ ಮಾಡಿಕೊಂಡು ಹಲ್ಲೆಗೊಳಗಾಗಿದ್ದರು.

ಇದಾದ ಮೇಲೆ ಅವರು ಸುದ್ದಿಯಾಗಿದ್ದು ಜಿಂದಾಲ್‍ಗೆ ಭೂಮಿ ಮಾರಾಟ ಮಾಡಬಾರದೆಂದು ಸರ್ಕಾರಕ್ಕೆ ಆಗ್ರಹಿಸುವ ಮೂಲಕ. ಹೊಸ ಮೈನಿಂಗ್ ನೀತಿಯಲ್ಲಿ ಮಾರ್ಪಾಟು ಮಾಡಿಸಲು ಈಗ ರಾಜಿನಾಮೆ ತಂತ್ರ ಹೂಡಿದ್ದಾರೋ ಅಥವಾ ಜಿಂದಾಲ್‍ಗೆ ಭೂಮಿ ಮಾರಾಟ ತಡೆಯಲು ಯತ್ನಿಸುವುದು, ಆಗದಿದ್ದರೆ ಆ ಕಡೆಯಿಂದ ‘ಫೇವರ್’ ಪಡೆಯುವ ಉದ್ದೇಶವೂ ಇದರ ಹಿಂದಿರಬಹುದೇ?

ಸುದ್ದಿ ಮಾಧ್ಯಮಗಳ ಪ್ರಕಾರ, ಸರ್ಕಾರ ಬೀಳುವುದು ಗ್ಯಾರಂಟಿ ಎಂಬ ಭಾವವನ್ನಂತೂ ಜನರಲ್ಲಿ ತೇಲಿ ಬಿಡಲಾಗಿದೆ. ಇದರ ಮೂಲ ಮಾತ್ರ ಆನಂದಸಿಂಗ್ ಹೊರಡಿಸಿದ ಗುಡುಗಿನ ಆರ್ಭಟವಷ್ಟೇ. ಹಿಂದಿನಂತೆ ಈ ಭಿನ್ನಮತ ಮಳೆ ಸುರಿಸದೇ ಹೋಗಬಹುದು. ರಾಷ್ಟ್ರೀಯ ಬಿಜೆಪಿಯಲ್ಲಿರುವ ಅಧಿಕಾರ ಮತ್ತು ಹಣಬಲದಿಂದ ಕೃತಕ ಮೋಡಬಿತ್ತನೆಯೂ ಆಗಿ ಮಳೆ ಸುರಿಸಲೂಬಹುದು. ಆಗಲೂ ಬಿತ್ತನೆಗೆ ಬೇಕಾದಷ್ಟು ಮಣ್ಣು ಹಸಿ (ಸರ್ಕಾರ ಕೆಡವಲು ಅಗತ್ಯವಾದ ಸಂಖ್ಯೆ) ಆಗುವುದೇ ಎಂಬ ಸಂಶಯ ಎಂದಿನಂತೆ ಇದ್ದೇ ಇದೆ,  ಅಧಿಕಾರದ ಆಟದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಕಾದು ನೋಡುವುದಷ್ಟೇ ರಾಜ್ಯದ ಜನರ ಕರ್ಮ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...