Homeಮುಖಪುಟ'ಭಾರತದ ಭೂಮಿಯನ್ನು ಬಾಂಗ್ಲಾಕ್ಕೆ ಕೊಟ್ಟ ಮೋದಿ..'; ಬಿಜೆಪಿ ವಿರುದ್ಧ ಫಾರೂಕ್ ಅಬ್ದುಲ್ಲಾ ವಾಗ್ದಾಳಿ

‘ಭಾರತದ ಭೂಮಿಯನ್ನು ಬಾಂಗ್ಲಾಕ್ಕೆ ಕೊಟ್ಟ ಮೋದಿ..’; ಬಿಜೆಪಿ ವಿರುದ್ಧ ಫಾರೂಕ್ ಅಬ್ದುಲ್ಲಾ ವಾಗ್ದಾಳಿ

- Advertisement -
- Advertisement -

“ನೇಪಾಳ ಆಕ್ರಮಿತ ಭಾರತದ ಭೂಮಿಯ ಬಗ್ಗೆ ಬಿಜೆಪಿ ಸರ್ಕಾರ ಏನನ್ನೂ ಮಾಡಲಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭಾರತದ ಭೂಮಿಯನ್ನು ನೀಡಿದ್ದಾರೆ” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೆ ಹೊತ್ತಿನಲ್ಲಿ ಬಿಜೆಪಿ ಸೃಷ್ಠಿಸಿರುವ ಕಚ್ಚತೀವು ದ್ವೀಪ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಪ್ರಧಾನಿ ಬಾಂಗ್ಲಾದೇಶಕ್ಕೆ ಭಾರತದ ಭೂಮಿಯನ್ನು ನೀಡಿದರು, ಲಡಾಖ್‌ನಲ್ಲಿ ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದೆ ಮತ್ತು ನಿನ್ನೆ ಅವರು ಅರುಣಾಚಲ ಪ್ರದೇಶದ ಗ್ರಾಮಗಳ ಹೆಸರನ್ನು ಸಹ ಬದಲಿಸಿದ್ದಾರೆ. ಅವರು (ಬಿಜೆಪಿ) ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ. ಯಾರಿಗಾದರೂ ಬೆರಳು ತೋರಿಸಿ, ಮೂರು ಬೆರಳುಗಳು ನಿಮ್ಮತ್ತ ತೋರಿಸುತ್ತವೆ ಎಂಬುದನ್ನು ನೆನಪಿಡಿ” ಎಂದು ಅಬ್ದುಲ್ಲಾ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ದೇಶದಲ್ಲಿ ರಷ್ಯಾ ಮತ್ತು ಚೀನಾದಂತಹ ಆಡಳಿತವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದೆ. ಇಂಡಿಯಾ ಬಣವು ಸಂವಿಧಾನವನ್ನು ರಕ್ಷಿಸಲು ಮುಂದೆ ಬಂದಿದೆ ಎಂದು ಹೇಳಿದರು.

ಲಡಾಖ್‌ನಲ್ಲಿ ನಡೆಯುತ್ತಿರುವ ಚೀನಾದ ಆಕ್ರಮಣಗಳು ಮತ್ತು ಅರುಣಾಚಲ ಪ್ರದೇಶದಲ್ಲಿ ಅದರ ಪ್ರಾದೇಶಿಕ ಹಕ್ಕುಗಳ ಬಗ್ಗೆ ಬಿಜೆಪಿ ನೇತೃತ್ವದ ಸರ್ಕಾರ ಏಕೆ ಮೌನವಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

“ಸಂವಿಧಾನವನ್ನು ರಕ್ಷಿಸಲು ಇಂಡಿಯಾ ಬಣವನ್ನು ರಚಿಸಲಾಗಿದೆ. ಏಕೆಂದರೆ, ಸಂವಿಧಾನವು (ಬಿಜೆಪಿಯಿಂದ) ಕೊನೆಗೊಳ್ಳುತ್ತದೆ ಎಂಬ ಆತಂಕವಿದೆ… ಭಾರತದಲ್ಲಿ (ರಷ್ಯಾದ ಅಧ್ಯಕ್ಷ ವ್ಲಾಡಿಮಿರ್) ಪುಟಿನ್ ಮತ್ತು ಚೀನಾ ಅಧ್ಯಕ್ಷ (ಕ್ಸಿ ಜಿನ್‌ಪಿಂಗ್)ರ ಮಾದರಿ ಸಂಭವಿಸುತ್ತದೆ. ಅವರು (ಬಿಜೆಪಿ) ದೇಶವನ್ನು ಜೀವಿತಾವಧಿಯಲ್ಲಿ (ಯಾವುದೇ ವಿರೋಧವಿಲ್ಲದೆ) ಆಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಅಬ್ದುಲ್ಲಾ ಸುದ್ದಿಗಾರರಿಗೆ ತಿಳಿಸಿದರು.

“ಇಂಡಿಯಾ ಇದನ್ನು ಸಂಭವಿಸಲು ಬಿಡುವುದಿಲ್ಲ ಮತ್ತು ನಮ್ಮ ಜೀವವನ್ನು ಪಣಕ್ಕಿಟ್ಟು ಅಂಬೇಡ್ಕರ್ ನೀಡಿದ ಸಂವಿಧಾನವನ್ನು ರಕ್ಷಿಸುತ್ತದೆ. ಈ ಸಂವಿಧಾನವನ್ನು ಸಮಾಧಿ ಮಾಡಲು ನಾವು ಬಿಡುವುದಿಲ್ಲ” ಎಂದು ಅವರು ಹೇಳಿದರು.

“ಚೀನಾ ಬಳಿ ಎಷ್ಟು ಭೂಮಿ ಇದೆ, ಅವರು (ಕೇಂದ್ರ ಸರ್ಕಾರ) ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಚೀನಾ ನಮ್ಮ ಸಾವಿರಾರು ಕಿಲೋಮೀಟರ್ ಭೂಮಿಯನ್ನು ಕಿತ್ತುಕೊಂಡಿದೆ ಮತ್ತು ನಾವು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಆದರೆ, ಅವರು ಉತ್ತರಿಸಲಿಲ್ಲ. ಅವರು ಮೊದಲು ಈ ಬಗ್ಗೆ ಉತ್ತರಿಸಲಿ” ಎಂದು ಶ್ರೀನಗರ ಸಂಸದರು ಹೇಳಿದರು.

ಏಪ್ರಿಲ್ 26 ರಂದು ಎರಡನೇ ಹಂತದ ಮತದಾನ ನಡೆಯಲಿರುವ ಜಮ್ಮು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ರಾಮನ್ ಭಲ್ಲಾ ಅವರೊಂದಿಗೆ ಜಮ್ಮುವಿಗೆ ಭೇಟಿ ನೀಡಿದ ಅಬ್ದುಲ್ಲಾ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.

ಭಲ್ಲಾ, ಎಐಸಿಸಿಯ ಜಮ್ಮು ಮತ್ತು ಕಾಶ್ಮೀರ ಉಸ್ತುವಾರಿ ಭರತ್ ಸಿಂಗ್ ಸೋಲಂಕಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ವಿಕಾರ್ ರಸೂಲ್ ವಾನಿ ಅವರು ನಾಮನಿರ್ದೇಶನ ಪೂರ್ವ ರೋಡ್ ಶೋನಲ್ಲಿ ಭಾಗವಹಿಸಿದರು. ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಇವೆರಡೂ ವಿರೋಧ ಪಕ್ಷದ ಇಂಡಿಯಾ ಬ್ಲಾಕ್‌ನ ಭಾಗವಾಗಿದೆ.

ಇದನ್ನೂ ಓದಿ; ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಂಜಯ್ ಸಿಂಗ್‌ಗೆ ಜಾಮೀನು; ‘ಸತ್ಯ ಯಾವಾಗಲೂ ಗೆಲ್ಲುತ್ತದೆ..’ ಎಂದ ಎಎಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...