Homeರಾಷ್ಟ್ರೀಯ2019 ರಿಂದ ಮಾಧ್ಯಮ ಜಾಹೀರಾತಿಗಾಗಿ ಬರೋಬ್ಬರಿ ₹900 ಕೋಟಿ ಖರ್ಚು ಮಾಡಿದ ಮೋದಿ ಸರ್ಕಾರ!

2019 ರಿಂದ ಮಾಧ್ಯಮ ಜಾಹೀರಾತಿಗಾಗಿ ಬರೋಬ್ಬರಿ ₹900 ಕೋಟಿ ಖರ್ಚು ಮಾಡಿದ ಮೋದಿ ಸರ್ಕಾರ!

- Advertisement -
- Advertisement -

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 2019 ರಿಂದ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಮತ್ತು ವೆಬ್ ಪೋರ್ಟಲ್‌ಗಳಲ್ಲಿ ಜಾಹೀರಾತುಗಳಿಗಾಗಿ 900 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ, ಮುದ್ರಣ, ದೂರದರ್ಶನ ಮತ್ತು ಆನ್‌ಲೈನ್ ಜಾಹೀರಾತುಗಳಿಗಾಗಿ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ಖರ್ಚು ಮಾಡಿದ ಹಣದ ವರ್ಷವಾರು ವಿವರವನ್ನು ಒದಗಿಸಿದ್ದಾರೆ.(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಟಿವಿ ಜಾಹೀರಾತುಗಳಿಗಾಗಿ ಸುಮಾರು 200 ಕೋಟಿ ರೂ. ವ್ಯಯಿಸಲಾಗಿದ್ದು, ಇದರಲ್ಲಿ 2019-20ರಲ್ಲಿ 270 ಚಾನೆಲ್‌ಗಳಿಗೆ 98.69 ಕೋಟಿ, 2021-21ರಲ್ಲಿ 318 ಚಾನೆಲ್‌ಗಳಿಗೆ 69.81 ಕೋಟಿ, 2021-22ರಲ್ಲಿ 265 ಚಾನೆಲ್‌ಗಳಿಗೆ 29.3 ಕೋಟಿ, ಉಳಿದಂತೆ 1.96 ಕೋಟಿ ರೂ.ಗಳನ್ನು ಪ್ರಸಕ್ತ ಹಣಕಾಸು ವರ್ಷದ ಜೂನ್ ತಿಂಗಳವರೆಗೆ ಖರ್ಚ ಮಾಡಲಾಗಿದೆ.

2019-20ರಲ್ಲಿ 5,326 ಪತ್ರಿಕೆಗಳಿಗೆ 295.05 ಕೋಟಿ ರೂಪಾಯಿಗಳನ್ನು ನೀಡುವುದರೊಂದಿಗೆ, ಮುದ್ರಣ ಜಾಹೀರಾತುಗಳ ಮೇಲೆ ಸರ್ಕಾರವು 690.83 ಕೋಟಿ ರೂ. ಖರ್ಚು ಮಾಡಿದೆ. 2021-22 ರಲ್ಲಿ, ಜಾಹೀರಾತು ಹಣವನ್ನು ಸ್ವೀಕರಿಸಿದ ಪೇಪರ್‌ಗಳ ಸಂಖ್ಯೆ 6,224 ಕ್ಕೆ ಏರಿದ್ದು, ಆದರೆ ಜಾಹಿರಾತಿಗೆ ಖರ್ಚು ಮಾಡಿದ ಮೊತ್ತವು 179.04 ಕೋಟಿಗೆ ಇಳಿದಿದೆ.

ಇದನ್ನೂ ಓದಿ: ಹರ್ಡ್-ಡೆಪ್ ಪ್ರಕರಣ; ಸಾಮಾಜಿಕ ಮಾಧ್ಯಮಗಳ ವಿಚಾರಣೆಯಲ್ಲಿ ಪುಟಿದೆದ್ದ ಮಹಿಳಾ ವಿರೋಧಿ ಧ್ವನಿ

2019 ರಿಂದ ಡಿಜಿಟಲ್ ಮಾಧ್ಯಮದಲ್ಲಿ ಜಾಹೀರಾತುಗಳಿಗಾಗಿ 20.58 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಹಣ ನೀಡಿದ ಟಿವಿ ಚಾನೆಲ್‌ಗಳು, ಪತ್ರಿಕೆಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಪಟ್ಟಿ ಜಾಹೀರಾತು ನಿರ್ದೇಶನಾಲಯ ಮತ್ತು ದೃಶ್ಯ ಪ್ರಚಾರದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...