Homeಮುಖಪುಟ'ಮೋದಿ ಸರ್‌ನೇಮ್‌' ಹೇಳಿಕೆ ಪ್ರಕರಣ: ರಾಹುಲ್‌ ಗಾಂಧಿಗೆ ಮಧ್ಯಂತರ ರಕ್ಷಣೆ ನಿರಾಕರಿಸಿದ ಗುಜರಾತ್ ಹೈಕೋರ್ಟ್

‘ಮೋದಿ ಸರ್‌ನೇಮ್‌’ ಹೇಳಿಕೆ ಪ್ರಕರಣ: ರಾಹುಲ್‌ ಗಾಂಧಿಗೆ ಮಧ್ಯಂತರ ರಕ್ಷಣೆ ನಿರಾಕರಿಸಿದ ಗುಜರಾತ್ ಹೈಕೋರ್ಟ್

- Advertisement -
- Advertisement -

‘ಮೋದಿ ಸರ್‌ನೇಮ್’ ಹೇಳಿಕೆಯ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಯಾವುದೇ ಮಧ್ಯಂತರ ರಕ್ಷಣೆ ನೀಡಲು ಗುಜರಾತ್ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ದೋಷಾರೋಪಣೆಗೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ಕಾಯ್ದಿರಿಸಿದ್ದಾರೆ.

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ವಿಧಿಸಲಾಗಿದ್ದ 2 ವರ್ಷ ಜೈಲು ಶಿಕ್ಷೆಗೆ ತಡೆಯಾಜ್ಞೆ ನೀಡಲು ಗುಜರಾತ್‌ ಹೈಕೋರ್ಟ್‌ ನಿರಾಕರಿಸಿದ್ದು, ಇದರಿಂದ ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ ಅವರಿಗೆ ಮತ್ತೆ ರಿಲೀಫ್‌ ಸಿಕ್ಕಿಲ್ಲ. ಬೇಸಿಗೆ ರಜೆಯ ನಂತರ ಅಂದರೆ, ಜೂನ್ 4 ರ ಬಳಿಕ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ತೀರ್ಪು ಪ್ರಕಟಿಸಲಿದ್ದಾರೆ. ರಾಹುಲ್‌ ಗಾಂಧಿ ಸಲ್ಲಿಸಿರುವ ಅರ್ಜಿಯ ಮೇಲೆ ಆದೇಶ ನೀಡಲಿದೆ.

ರಾಹುಲ್ ಗಾಂಧಿ ಅವರ ಮೇಲೆ ‘ಮೋದಿ ಸರ್‌ನೇಮ್’ ಹೇಳಿಕೆಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯವು, ರಾಹುಲ್ ತಪ್ಪಿತಸ್ಥ ಎಂದು ಹೇಳಿ, ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿತ್ತು. ಇದರಿಂದ ಅವರು ಸಂಸತ್ ಸದಸ್ಯತ್ವದಿಂದ ಅನರ್ಹರಾದರು.

ಆ ಬಳಿಕ ರಾಹುಲ್ ಅವರು ನ್ಯಾಯಾಲಯದ ಆರೋಪಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ನಡೆಸಿತು. ರಾಹುಲ್ ಪರ ವಕೀಲರು, ಈ ಅಪರಾಧವು ಸ್ವಭಾವತಃ ಗಂಭೀರವಾಗಿಲ್ಲ ಮತ್ತು ನೈತಿಕ ಕ್ಷೋಭೆಯನ್ನು ಒಳಗೊಂಡಿಲ್ಲ ಮತ್ತು ರಾಹುಲ್ ಗಾಂಧಿಯವರ ಅನರ್ಹತೆಯಿಂದ ಅವರ ಮತ್ತು ಅವರ ಕ್ಷೇತ್ರದ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸಲ್ಲಿಸಿದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿದ ನಂತರ ಸೂರತ್ ನ್ಯಾಯಾಲಯವು ಮಾರ್ಚ್ 23 ರಂದು ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಇದನ್ನೂ ಓದಿ: ರಾಹುಲ್ ಶಿಕ್ಷೆ ತಡೆಗೆ ಮೇಲ್ಮನವಿ: ವಿಚಾರಣೆಯಿಂದಲೇ ಹಿಂದೆ ಸರಿದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ

ಪ್ರಕರಣದ ಹಿನ್ನೆಲೆ:

2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು, ”ಎಲ್ಲಾ ಕಳ್ಳರಿಗೂ ಮೋದಿ ಎಂಬ ಹೆಸರು ಏಕೆ?” ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಗೆ ರಾಹುಲ್ ಗಾಂಧಿ ಮೇಲೆ ಸೂರತ್ ಪಶ್ಚಿಮ ಶಾಸಕ ಪೂರ್ಣೇಶ್ ಮೋದಿ ಅವರು ಕ್ರಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣಕ್ಕೆ ಸಂಬಂಧೀಸಿದಂತೆ ಮಾರ್ಚ್ 23 ರಂದು ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಹುಲ್‌ಗೆ ಎರಡು ವರ್ಷಗಳ ಸರಳ ಜೈಲು ಶಿಕ್ಷೆ ವಿಧಿಸಿತ್ತು.

1951ರ ಪ್ರಜಾಪ್ರತಿನಿಧಿ ಕಾಯ್ದೆಯ 8ನೇ ಪರಿಚ್ಛೇದದೊಂದಿಗೆ, ಭಾರತದ ಸಂವಿಧಾನದ 102(1)(ಇ) ವಿಧಿಯ ನಿಬಂಧನೆಗಳ ಪ್ರಕಾರ, ಮಾರ್ಚ್ 23, 2023 ರಿಂದ (ಶಿಕ್ಷೆಯಾದ ದಿನಾಂಕದಿಂದ) ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.

ರಾಹುಲ್ ಗಾಂಧಿ ಅವರ ಮೇಲಿನ ದೋಷಾರೋಪನೆಗೆ ತಡೆ ಕೋರಿ ಸಲ್ಲಿಸಿದ ಮನವಿಯನ್ನು ಏಪ್ರಿಲ್ 20 ರಂದು ಸೂರತ್ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಬಿನ್ ಮೊಗೇರಾ ಅವರು ತಿರಸ್ಕರಿಸಿದ್ದರು.

ಗಾಂಧಿಯವರು ಗುಜರಾತ್ ಹೈಕೋರ್ಟ್‌ನ ಮುಂದೆ ಸಲ್ಲಿಸಿದ ಮನವಿಯಲ್ಲಿ, ಅಸಮಪಾರ್ಶ್ವದ ಶಿಕ್ಷೆಯ ಆಧಾರದ ಮೇಲೆ ಮತ್ತು ಅಂತಹ ಶಿಕ್ಷೆಯು ಲೋಕಸಭೆಯ ಸದಸ್ಯತ್ವವನ್ನು ಅನರ್ಹಗೊಳಿಸುವ ಮೂಲಕ ತನಗೆ ಬದಲಾಯಿಸಲಾಗದ ಹಾನಿಯನ್ನುಂಟುಮಾಡಿದೆ ಎಂದು ತನ್ನ ಅಪರಾಧವನ್ನು ತಡೆಹಿಡಿಯಬೇಕೆಂದು ಕೋರಿದ್ದರು.

ನ್ಯಾಯಾಲಯವು ಗಾಂಧಿಗೆ ಜಾಮೀನು ಮಂಜೂರು ಮಾಡಿದರೂ, ಶಿಕ್ಷೆಗೆ ತಡೆಯಾಜ್ಞೆ ನೀಡುವ ಅವರ ಮನವಿಯನ್ನು ಅದು ತಿರಸ್ಕರಿಸಿತು.

ಕಳೆದ ಬುಧವಾರ, ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಗೀತಾ ಗೋಪಿ ಅವರು ಈ ಪ್ರಕರಣವನ್ನು ತುರ್ತು ವಿಚಾರಣೆಗಾಗಿ ತಮ್ಮ ಮುಂದೆ ಹಾಜರುಪಡಿಸಿದ ನಂತರ ವಿಚಾರಣೆಯಿಂದ ಹಿಂದೆ ಸರಿದಿದ್ದರು. ನಂತರ ಪ್ರಕರಣವನ್ನು ನ್ಯಾಯಮೂರ್ತಿ ಪ್ರಚ್ಛಕ್ ಅವರಿಗೆ ವಹಿಸಲಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...