Homeಮುಖಪುಟಮೋದಿ ನೀವು ಯಾವಾಗ ಬರುತ್ತೀರಿ: ಪ್ರೇಮಿಗಳ ದಿನದಂದು ಪಿಂಕ್ ಪೋಸ್ಟರ್ ಹಿಡಿದ ಪ್ರತಿಭಟನಾಕಾರರು

ಮೋದಿ ನೀವು ಯಾವಾಗ ಬರುತ್ತೀರಿ: ಪ್ರೇಮಿಗಳ ದಿನದಂದು ಪಿಂಕ್ ಪೋಸ್ಟರ್ ಹಿಡಿದ ಪ್ರತಿಭಟನಾಕಾರರು

- Advertisement -
- Advertisement -

ದೆಹಲಿಯ ಶಾಹಿನ್ ಬಾಗ್ ಪ್ರತಿಭಟನಾ ಸ್ಥಳದಲ್ಲಿ “ಪಿಎಂ ಮೋದಿ, ದಯವಿಟ್ಟು ಶಾಹೀನ್ ಬಾಗ್‌ಗೆ ಬನ್ನಿ, ನಿಮ್ಮ ಉಡುಗೊರೆಯನ್ನು ಸಂಗ್ರಹಿಸಿ ನಮ್ಮೊಂದಿಗೆ ಮಾತನಾಡಿ” ಎಂಬ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲು ಆಹ್ವಾನವನ್ನು ನೀಡಿದ್ದಾರೆ.

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪ್ರಸ್ತಾವಿತ ಎನ್‌ಆರ್‌ಸಿಯನ್ನು  ಹಿಂಪಡೆಯಬೇಕೆಂದು ಒತ್ತಾಯಿಸಿ ಕಳೆದ ವರ್ಷ ಡಿಸೆಂಬರ್ 15 ರಿಂದ ಶಾಹೀನ್‌ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ನಾವು ಮೋದಿಗೆ “ಪ್ರೇಮಗೀತೆ” ಮತ್ತು  “ಅಚ್ಚರಿಯ ಉಡುಗೊರೆ” ನೀಡುವುದಾಗಿ ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ, ಪ್ರತಿಭಟನಾಕಾರರು #ModiTumKabAaogee ಎಂಬ ಹ್ಯಾಶ್ ಟ್ಯಾಗನ್ನು ಬಳಸಿ ಆಹ್ವಾನವನ್ನು ನೀಡಿದ್ದಾರೆ.

“ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಅಥವಾ ಬೇರೆ ಯಾರಾದರೂ ಬಂದು ನಮ್ಮೊಂದಿಗೆ ಮಾತನಾಡಬಹುದು. ಇಲ್ಲಿ ನಡೆಯುತ್ತಿರುವುದು ಸಂವಿಧಾನಕ್ಕೆ ವಿರುದ್ಧ ಎಂದು ಅವರು ನಮಗೆ ಮನವರಿಕೆ ಮಾಡಿಕೊಟ್ಟರೆ, ನಾವು ಈ ಪ್ರತಿಭಟನೆಯನ್ನು ಕೊನೆಗೊಳಿಸುತ್ತೇವೆ” ಎಂದು ಪ್ರತಿಭಟನಾಕಾರರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ನೋಯ್ಡಾವನ್ನು ಆಗ್ನೇಯ ದೆಹಲಿಗೆ ಸಂಪರ್ಕಿಸುವ ಕಲಿಂದಿ ಕುಂಜ್ ಸೇತುವೆಯ ಮುಖ್ಯ ರಸ್ತೆಯಲ್ಲಿ ಶಾಹೀನ್ ಬಾಗ್‌ನ ಪ್ರತಿಭಟನಾಕಾರರು ಟೆಂಟ್ ಹಾಕಿದ್ದಾರೆ. ಅಧಿಕೃತ ಅಂದಾಜಿನ ಪ್ರಕಾರ ಇಲ್ಲಿ ಪ್ರತಿದಿನ ಸುಮಾರು 1.75 ಲಕ್ಷ ವಾಹನಗಳು ಚಲಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...