Homeಮುಖಪುಟಮೋದೀಜಿ, ಇದೇನಾ ಭಾರತೀಯ ಸಂಸ್ಕೃತಿ?: ಅಸ್ಸಾಂ ಸಿಎಂ ವಜಾಕ್ಕೆ ತೆಲಂಗಾಣ ಸಿಎಂ ಆಗ್ರಹ

ಮೋದೀಜಿ, ಇದೇನಾ ಭಾರತೀಯ ಸಂಸ್ಕೃತಿ?: ಅಸ್ಸಾಂ ಸಿಎಂ ವಜಾಕ್ಕೆ ತೆಲಂಗಾಣ ಸಿಎಂ ಆಗ್ರಹ

- Advertisement -
- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅತ್ಯಂತ ತುಚ್ಛವಾಗಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಹಿಮಂತ ಬಿಸ್ವಾ ಅವರನ್ನು ವಜಾಗೊಳಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಒತ್ತಾಯಿಸಿದ್ದಾರೆ.

ಶರ್ಮಾ ಅವರ ಹೇಳಿಕೆಗಳಿಗೆ ಬೇಸರ ವ್ಯಕ್ತಪಡಿಸಿರುವ ಕೆಸಿಆರ್‌, “ಮೋದಿಜಿ! ಇದೇನಾ ನಮ್ಮ ಭಾರತೀಯ ಸಂಸ್ಕೃತಿ? ವೇದಗಳು, ಮಹಾಭಾರತ, ರಾಮಾಯಣ ಮತ್ತು ಭಗವದ್ಗೀತೆಗಳಲ್ಲಿ ಇದನ್ನೇ ಕಲಿಸಲಾಗಿದೆಯೇ? ನಾನು ಬಿಜೆಪಿ ಅಧ್ಯಕ್ಷ ನಡ್ಡಾಜಿ ಅವರನ್ನು ಕೇಳುತ್ತಿದ್ದೇನೆ. ಇದು ನಮ್ಮ ಸಂಸ್ಕೃತಿಯೇ?” ಎಂದು ಪ್ರಶ್ನಿಸಿದ್ದಾರೆ.

ಶುಕ್ರವಾರ, ಫೆಬ್ರವರಿ 11ರಂದು ಉತ್ತರಾಖಂಡ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುತ್ತಾ ಶರ್ಮಾ ಅವರು ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸೆಪ್ಟೆಂಬರ್ 2016ರ ಸರ್ಜಿಕಲ್ ಸ್ಟ್ರೈಕ್‌ನ ಪುರಾವೆಯನ್ನು ಕೋರಿದ್ದಕ್ಕಾಗಿ ಮತ್ತು ಕೋವಿಡ್-19 ಲಸಿಕೆಗಳ ಪರಿಣಾಮಕಾರಿವನ್ನು ಪ್ರಶ್ನಿಸಿದ್ದಕ್ಕಾಗಿ ರಾಹುಲ್‌ ಅವರನ್ನು ಅಸಂವಿಧಾನಿಕವಾಗಿ ನಿಂದಿಸಿದ್ದರು. “ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮಗ ಎಂಬುದಕ್ಕೆ ಬಿಜೆಪಿ ಎಂದಾದರೂ ಪುರಾವೆ ಕೇಳಿದೆಯೇ?” ಎಂದು ಶರ್ಮಾ ಹೇಳಿದ್ದರು.

ಹೈದರಾಬಾದ್‌ನಿಂದ ಸುಮಾರು 55 ಕಿ.ಮೀ. ದೂರದಲ್ಲಿರುವ ರಾಯಗಿರಿಯಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ ಅವರು, “ನೀವು ಅವರನ್ನು (ಅಸ್ಸಾಂ ಸಿಎಂ) ವಜಾ ಮಾಡಿ ಎಂದು ನಾನು ಒತ್ತಾಯಿಸುತ್ತಿದ್ದೇನೆ. ಮುಖ್ಯಮಂತ್ರಿಯೊಬ್ಬರು ಈ ರೀತಿ ಮಾತನಾಡಬಹುದೇ? ಎಲ್ಲಕ್ಕೂ ಮಿತಿಗಳಿರುತ್ತವೆ. ನೀವು ಅಹಂಕಾರ ತೋರಿಸುತ್ತಿರಿ. ತಮಾಷೆ ಮಾಡುತ್ತೀರಾ? ಜನರು ಮೌನವಾಗಿರುತ್ತಾರೆ ಎಂದು ನೀವು ಭಾವಿಸುತ್ತೀರಿ” ಎಂದು ಹೇಳಿದರು.

“ಇದು ಬಿಜೆಪಿಯ ಸಂಸ್ಕೃತಿಯೇ? ಇದು ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯೇ? ನಾನು ಭಾರತೀಯನಾಗಿ ಬೇಡಿಕೆ ಇಡುತ್ತಿದ್ದೇನೆ. ನನಗೆ ನಾಚಿಕೆಯಾಗುತ್ತಿದೆ. ಇದು ದೇಶಕ್ಕೆ ಒಳ್ಳೆಯದಲ್ಲ. ನಾವು ಕೈಮುಗಿದು ಸುಮ್ಮನಿರುತ್ತೇವೆ ಎಂದು ನೀವು ಭಾವಿಸುತ್ತೀರಾ?” ಎಂದು ಕೆಸಿಆರ್ ಪ್ರಶ್ನಿಸಿದ್ದಾರೆ.

ಉತ್ತರಾಖಂಡ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಶರ್ಮಾ, ಲಸಿಕೆಗಳು ಮತ್ತು ಸರ್ಜಿಕಲ್ ಸ್ಟ್ರೈಕ್‌ಗಳ ಪರಿಣಾಮಕಾರಿತ್ವದ ಪುರಾವೆಯನ್ನು ಒತ್ತಾಯಿಸಿ ಕಾಂಗ್ರೆಸ್ ನಕಾರಾತ್ಮಕ ರಾಜಕೀಯ ಮಾಡುತ್ತಿದೆ. ವೀರ ಸೈನಿಕರ ಶೌರ್ಯವನ್ನು ಪ್ರಶ್ನಿಸುತ್ತಿದೆ ಎಂದಿದ್ದರು.

“ರಾಜೀವ್ ಗಾಂಧಿಯವರ ಮಗ ಎಂಬುದಕ್ಕೆ ನಾವು ಎಂದಾದರೂ ರಾಹುಲ್ ಗಾಂಧಿ ಅವರಿಂದ ಪುರಾವೆ ಕೇಳಿದ್ದೇವೆಯೇ?” ಫೆಬ್ರವರಿ 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದ ಶರ್ಮಾ ಅವರು ಸುದ್ದಿಗಾರರನ್ನು ಕೇಳಿದ್ದರು.

“ಉತ್ತರಾಖಂಡದಲ್ಲಿ ಮುಸ್ಲಿಂ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕಾಂಗ್ರೆಸ್ ಮುಚ್ಚಿದ ಆಶ್ವಾಸನೆಗಳನ್ನು ನೀಡಿದೆ” ಎಂದಿದ್ದ ಶರ್ಮಾ, “ಜಿನ್ನಾ ಅವರ ಆತ್ಮ ಕಾಂಗ್ರೆಸ್ ಪಕ್ಷವನ್ನು ಪ್ರವೇಶಿಸಿದೆ ಎಂದು ತೋರುತ್ತದೆ. ಇದು ಜಿನ್ನಾ ಮಾತನಾಡುವ ಭಾಷೆಯನ್ನೇ ಮಾತನಾಡುತ್ತಿದೆ” ಎಂದು ದೂರಿದ್ದರು.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಗಳನ್ನು ವಿರೋಧಿಸಿ ಕಾಂಗ್ರೆಸ್‌ನ ಯುವ ಮತ್ತು ವಿದ್ಯಾರ್ಥಿ ಘಟಕಗಳ ಸದಸ್ಯರು ಫೆಬ್ರವರಿ 12ರ ಶನಿವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು.

ಭಾರತೀಯ ಯುವ ಕಾಂಗ್ರೆಸ್ ಘಟಕದ (ಐವೈಸಿ) ಕಾರ್ಯಕರ್ತರು ಘಟಕದ ಅಧ್ಯಕ್ಷ ಶ್ರೀನಿವಾಸ್ ಬಿವಿ ನೇತೃತ್ವದಲ್ಲಿ ಅಸ್ಸಾಂ ಭವನದ ಬಳಿ ಪ್ರತಿಭಟನೆ ನಡೆಸಿದರೆ, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು ತನ್ನ ರಾಷ್ಟ್ರೀಯ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿತ್ತು.


ಇದನ್ನೂ ಓದಿರಿ: ತಲೆ ಮೇಲೆ ಬಟ್ಟೆ ಇದ್ದರೆ ನಿಮಗೇನು ತೊಂದರೆ?: ದೇವನೂರ ಮಹಾದೇವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...