Homeಕರ್ನಾಟಕಮುಸ್ಲಿಂ ವಿದ್ಯಾರ್ಥಿನಿಯರ ಪರ ವಾದಿಸುತ್ತಿರುವ ವಕೀಲರನ್ನು ಟೀಕಿಸುವುದು ತಪ್ಪು: ರಾಮಕೃಷ್ಣ ಆಶ್ರಮ

ಮುಸ್ಲಿಂ ವಿದ್ಯಾರ್ಥಿನಿಯರ ಪರ ವಾದಿಸುತ್ತಿರುವ ವಕೀಲರನ್ನು ಟೀಕಿಸುವುದು ತಪ್ಪು: ರಾಮಕೃಷ್ಣ ಆಶ್ರಮ

- Advertisement -
- Advertisement -

ರಾಜ್ಯದ ಕಾಲೇಜುಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಧರಿಸುವ ಹಿಜಾಬ್‌ ಕುರಿತ ಈ ವಿರೋಧ ಅನಾವಶ್ಯಕವಾಗಿದೆ. ಶಾಂತಿ ಮತ್ತು ಸೌಹಾರ್ದತೆಯ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಕಾರವಾರದ ರಾಮಕೃಷ್ಣ ಆಶ್ರಮ ತಿಳಿಸಿದ್ದು. ಮುಸ್ಲಿಂ ವಿದ್ಯಾರ್ಥಿನಿಯರ ಪರ ವಕಾಲತ್ತು ವಹಿಸಿ ಟೀಕೆಗಳನ್ನು ಎದುರಿಸುತ್ತಿರುವ ವಕೀಲರನ್ನು ಸಮರ್ಥಿಸಿಕೊಂಡಿದೆ.

ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿನಿಯರನ್ನು ಸಮರ್ಥಿಸಲು ಇಸ್ಲಾಮಿಕ್ ಧರ್ಮಗ್ರಂಥಗಳನ್ನು ಉಲ್ಲೇಖಿಸಿ ಬಲಪಂಥೀಯ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿರುವ ಹಿರಿಯ ವಕೀಲ ದೇವದತ್ತ ಕಾಮತ್ ಅವರು ಹಿಂದೂ ಧರ್ಮಕ್ಕೆ ಯಾವುದೇ ಹಾನಿ ಮಾಡಿಲ್ಲ ಎಂದು ರಾಮಕೃಷ್ಣ ಆಶ್ರಮದ ಪ್ರಧಾನ ಸ್ವಾಮೀಜಿ ತಿಳಿಸಿದ್ದಾರೆ.

“ಶಾಲೆ ಅಥವಾ ಕಾಲೇಜುಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಡ್ರೆಸ್ ಕೋಡ್ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ. ಸಮಾಜದ ವಿವಿಧ ಹಂತಗಳಲ್ಲಿ ಈ ವಿಷಯ ತೀವ್ರ ವಿವಾದ ಕಾರಣವಾಗುತ್ತಿರುವುದು ನನಗೆ ನೋವಾಗಿದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಹಿತಾಸಕ್ತಿಯಿಂದ ಇದು ಖಂಡಿತವಾಗಿಯೂ ಒಳ್ಳೆಯದಲ್ಲ” ಸ್ವಾಮಿ ಭಾವೇಶಾನಂದ ಹೇಳಿದ್ದಾರೆ.

ಇದನ್ನೂ ಓದಿ: ಟರ್ಬನ್ ಆಯ್ಕೆಯಾಗಿರಬಹುದಾದರೆ, ಹಿಜಾಬ್ ಏಕೆ ಆಗಬಾರದು?: ನಟಿ ಸೋನಮ್ ಕಪೂರ್ ಪ್ರಶ್ನೆ

”ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾದ ದೇವದತ್ತ ಕಾಮತ್ ಅವರ ಹೆಸರನ್ನು ಈ ವಿವಾದದಲ್ಲಿ ಎಳೆಯಲಾಗುತ್ತಿದೆ. ಇದರಿಂದ ನನಗೆ ಹೆಚ್ಚು ನೋವಾಗಿದೆ. ಅವರು ನ್ಯಾಯಾಲಯದಲ್ಲಿ ವಕೀಲರಾಗಿ ಒಂದು ಪಕ್ಷವನ್ನು ಪ್ರತಿನಿಧಿಸಿದ್ದಾರೆ. ಕೆಲವು ಅಂಶಗಳು ಅವರನ್ನು ಹಿಂದೂ ಧರ್ಮದ ವಿರೋಧಿ ಎಂದು ಬ್ರ್ಯಾಂಡ್ ಮಾಡಲು ಪ್ರಯತ್ನಿಸುತ್ತಿವೆ. ಈ ಗ್ರಹಿಕೆಯು ಸಂಪೂರ್ಣವಾಗಿ ಅನಗತ್ಯ ಮತ್ತು ಆಧಾರರಹಿತವಾಗಿದೆ” ಎಂದಿದ್ದಾರೆ.

“ನ್ಯಾಯಾಲಯದಲ್ಲಿ ಕಕ್ಷಿದಾರನನ್ನು ಪ್ರತಿನಿಧಿಸುವ ವಕೀಲರು ತಮ್ಮ ಕಕ್ಷಿದಾರರ ಕಾರಣಕ್ಕೆ ತಮ್ಮ ಕರ್ತವ್ಯ ಮತ್ತು ನ್ಯಾಯವನ್ನು ಕೊಡಿಸುವ ಕೆಲಸ ಮಾಡಬೇಕು. ಅದು ವೃತ್ತಿಪರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಇದನ್ನು ಹಿಂದೂ ಧರ್ಮದ ವಿರುದ್ಧ ಎಂದು ಬ್ರ್ಯಾಂಡ್ ಮಾಡಬಾರದು” ಎಂದು ಸ್ವಾಮಿ ಭಾವೇಶಾನಂದ ತಿಳಿಸಿದ್ದಾರೆ.

ವಕೀಲ ದೇವದತ್ತ ಕಾಮತ್ ಮೇಲಿನ ದಾಳಿ “ನ್ಯಾಯಸಮ್ಮತವಲ್ಲದ ಮತ್ತು ಆಧಾರರಹಿತ ಪ್ರಚಾರ” ಎಂದಿರುವ ಅವರು, ವಕೀಲರು ಶ್ರೀ ರಾಮಕೃಷ್ಣ ವಿವೇಕಾನಂದರ ನಿಷ್ಠಾವಂತ ಅನುಯಾಯಿ ಎಂದಿದ್ದಾರೆ.

ರಾಜ್ಯದ ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ಧರಿಸದಂತೆ ಹೇಳಿರುವ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ದೆವದತ್ತ ಕಾಮತ್, ಧಾರ್ಮಿಕ ಶಿರಸ್ತ್ರಾಣಗಳು ಅವರ ಸಂಸ್ಕೃತಿಯ ಭಾಗವಾಗಿದ್ದು, ಅದನ್ನು ತಡೆಯಲು ಸಾಧ್ಯವಿಲ್ಲ. ನಿಕಟ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆಯವರ ಮುಂದೆ ತಲೆಯನ್ನು ಮುಚ್ಚಿಕೊಳ್ಳುವುದು ಮಹಿಳೆಯರಿಗೆ ಕರ್ತವ್ಯವಾಗಿದೆ ಎಂದು ಹೇಳುವ ಕುರಾನ್‌ನ ಸಾಲುಗಳನ್ನು ಉಲ್ಲೇಖಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.


ಇದನ್ನೂ ಓದಿ: ಸತ್ಯಶೋಧನೆ: ಕೇರಳ ಹೈಕೋರ್ಟ್‍ನ 2018ರ ಹಿಜಾಬ್ ಆದೇಶ ಮತ್ತು ಕರ್ನಾಟಕ ಹೈಕೋರ್ಟ್ ವಾದ ಏಕೆ ವಿಭಿನ್ನ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...