Homeಮುಖಪುಟಮಾಂಸಾಹಾರಿಗಳ ಬಗ್ಗೆ ಮೋಹನ್ ಭಾಗವತ್‌ ಕ್ಷುಲ್ಲಕ ಹೇಳಿಕೆ; ‘ಮಾಂಸ ತಿನ್ನುವವರ ಮತ ಬಿಜೆಪಿಗೆ ಬೇಡವೇ?’ ಎಂದ...

ಮಾಂಸಾಹಾರಿಗಳ ಬಗ್ಗೆ ಮೋಹನ್ ಭಾಗವತ್‌ ಕ್ಷುಲ್ಲಕ ಹೇಳಿಕೆ; ‘ಮಾಂಸ ತಿನ್ನುವವರ ಮತ ಬಿಜೆಪಿಗೆ ಬೇಡವೇ?’ ಎಂದ ಜನತೆ

- Advertisement -
- Advertisement -

ಮಾಂಸಾಹಾರ ಸೇವಿಸುವವರ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್‌ ಕ್ಲುಲ್ಲಕವಾಗಿ ಮಾತನಾಡಿದ್ದಾರೆ. ಮಾಂಸಾಹಾರವನ್ನು ತಾಮಸಿಕ ಆಹಾರ ಎಂದು ಜರಿದು, ಟೀಕೆಗೆ ಗುರಿಯಾಗಿದ್ದಾರೆ.

“ಮಾಂಸಾಹಾರ ಸೇವಿಸುವವರು ಮಾಂಸಾಹಾರ ಸೇವಿಸುವಾಗ ಶಿಸ್ತು ಅನುಸರಿಸಲು ಪ್ರಯತ್ನಿಸಬೇಕು” ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವತ್ ಮಾತನಾಡಿದ್ದಾರೆ.

ಜನರು ಸಾಮಾನ್ಯವಾಗಿ ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿರುವ ‘ತಾಮಸಿಕ ಆಹಾರ’ವನ್ನು ಸೇವಿಸುವುದನ್ನು ತಪ್ಪಿಸಬೇಕು. ನೀವು ತಪ್ಪು ಆಹಾರವನ್ನು ಸೇವಿಸಿದರೆ, ನೀವು ತಪ್ಪು ದಾರಿಯಲ್ಲಿ ಹೋಗುತ್ತೀರಿ ಎಂದು ಹೇಳಲಾಗುತ್ತದೆ. ಆದ್ದರಿಂದ ತಾಮಸಿಕ ಆಹಾರವನ್ನು ಸೇವಿಸಬೇಡಿ ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಾಶ್ಚಿಮಾತ್ಯ ದೇಶಗಳ ಮಾಂಸಾಹಾರಿಗಳೊಂದಿಗೆ ಹೋಲಿಕೆ ಮಾಡಿದ ಭಾಗವತ್, “ಭಾರತದಲ್ಲಿ ಮಾಂಸ ಮತ್ತು ಮೀನುಗಳನ್ನು ಸೇವಿಸುವವರು ‘ಶ್ರಾವಣ’ ಮಾಸ ಹಾಗೂ ವಾರದ ಕೆಲವು ದಿನಗಳಲ್ಲಿ ತಮ್ಮ ದೈನಂದಿನ ಆಹಾರ ಪದ್ಧತಿಯನ್ನು ತ್ಯಜಿಸುತ್ತಾರೆ” ಎಂದು ಹೇಳಿದ್ದಾರೆ.

“ಮಾಂಸ ಸೇವನೆಯಲ್ಲಿ ಶಿಸ್ತನ್ನು ಅನುಸರಿಸಲು ಪ್ರಯತ್ನಿಸಿ. ಇದರಿಂದ (ನಿಮ್ಮ) ಮನಸ್ಸು ಚಂಚಲವಾಗುವುದಿಲ್ಲ” ಎಂದು ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನವರಾತ್ರಿ ಆಚರಣೆಯ ಹೊತ್ತಿನಲ್ಲಿ ಭಾಗವತ್ ಹೇಳಿಕೆ ಹೊರಬಿದ್ದಿದೆ. “ಈ ಸಮಯದಲ್ಲಿ ಮಾಂಸಾಹಾರದಿಂದ ಜನರು ದೂರ ಉಳಿಯುತ್ತಾರೆ. ಆದಾಗ್ಯೂ, ದುರ್ಗಾಪೂಜಾ ಹಬ್ಬದ ಕಾರಣಕ್ಕಾಗಿ ಜಾಗತಿಕವಾಗಿ ಪ್ರಸಿದ್ಧವಾಗಿರುವ ಪಶ್ಚಿಮ ಬಂಗಾಳದಂತಹ ಭಾರತದ ಕೆಲವು ಭಾಗಗಳಲ್ಲಿ ಜನರು ಈ ಅವಧಿಯಲ್ಲಿ ಮಾಂಸಾಹಾರವನ್ನು ಸೇವಿಸುತ್ತಾರೆ” ಎಂದು ತಿಳಿಸಿದ್ದಾರೆ.

ಭಾಗವತ್ ಹೇಳಿಕೆಗೆ ವಿರೋಧ; ಬಿಜೆಪಿಗೆ ಮತ ಹಾಕಬಾರದೇ ಎಂದು ಕೇಳಿದ ಜನತೆ

ಮಾಂಸಾಹಾರದ ಕುರಿತು ಕ್ಷುಲ್ಲಕವಾಗಿ ಮಾತನಾಡಿರುವುದನ್ನು ಅನೇಕರು ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

“ಮಾಂಸಾಹಾರ ತಿನ್ನುವವರು ಮಾಂಸಾಹಾರ ವಿರೋಧಿಗಳಿಗೆ ಮತ ನೀಡುವ ಕೆಟ್ಟ ಕೆಲಸ ಮಾಡಬೇಡಿ, ದಮ್ಮಯ್ಯ” ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಮನವಿ ಮಾಡಿದ್ದಾರೆ.

“ನೂರಕ್ಕೆ 99.99 % ನೊಬೆಲ್‌ ಪ್ರಶಸ್ತಿ ವಿಜೇತರು, ಒಲಂಪಿಕ್ ಚಿನ್ನದ ಪದಕ ಪಡೆದವರು, ಹೊಸ ಹೊಸ ವೈಜ್ಞಾನಿಕ ಅವಿಷ್ಕಾರಗಳಿಗೆ ಕಾರಣಕರ್ತರು, ಪ್ರಖ್ಯಾತ ಸಾಹಿತಿಗಳು ಎಲ್ಲರೂ ಮಾಂಸಾಹಾರಿಗಳಾಗಿದ್ದಾರೆ. ಅದರಲ್ಲೂ ಬೀಫ್ ಈಟರ್ಸ್. ಆದರೆ ನಮ್ಮ ದೇಶದ ಹುಲ್ಲು ಮೇಯುವವರ ಅವಿಷ್ಕಾರಗಳು ಇದರಲ್ಲಿ ಎಷ್ಟಿದೆ? ಯಾವುದೇ ಆಹಾರವಾಗಲಿ ಅದರಲ್ಲಿರುವುದು ಬರಿಯ ಫ್ಯಾಟ್, ಪ್ರೋಟೀನ್ ಕಾರ್ಬೊ ಹೈಡ್ರೇಟ್. ಇಂತಹ ಮೂಢರು ನಮ್ಮ ದೇಶ ಆಳುವ ದುರ್ಗತಿ ಒದಗಿ ಬಂತಲ್ಲ ಅನ್ನುವುದೇ ಒಂದು ನಾವೆಂದೂ ಕಾಣದಿದ್ದ ದೊಡ್ಡ ದುರಂತ” ಎಂದು ಕೃಷ್ಣಮೂರ್ತಿ ಶ್ರೀನಾಥ್‌ ಪೋಸ್ಟ್ ಮಾಡಿದ್ದಾರೆ.

“ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಅನ್ನುವುದು, ಆಮೇಲೆ ಗೋಮಾಂಸ ತಿನ್ನಬಾರದು ಅನ್ನುವುದು ಟೆಸ್ಟ್ ಡೋಸ್ಗಳು. ಇವರ ಮೂಲ ಉದ್ದೇಶವೇ ಇದು- ಮಾಂಸ ತಿನ್ನುವವರು ಕೀಳು- ಎಂದು ಹೇಳುವುದು. ಇದನ್ನು ದೇಶದ ಬಹುಸಂಖ್ಯಾತ ಮಾಂಸಾಹಾರಿಗಳು ಅರ್ಥಮಾಡಿಕೊಳ್ಳಬೇಕು” ಎಂದು ಪ್ರಕಾಶ್ ರಾಜ್‌ ಮೇಹು ಎಚ್ಚರಿಸಿದ್ದಾರೆ.

ಇದನ್ನೂ ಓದಿರಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಶಶಿ ತರೂರು v/s ಮಲ್ಲಿಕಾರ್ಜುನ ಖರ್ಗೆ; ದಿಗ್ವಿಜಯ್ ಸಿಂಗ್ ಕಣದಿಂದ ಹೊರಕ್ಕೆ

“ಸರ್ವ ಜನಾಂಗದ ಶಾಂತಿಯ ತೋಟವನ್ನು ಆಶಿಸಿದ ಕುವೆಂಪು ಮಾಂಸಾಹಾರಿ. ಕರುಣೆಯ ಮೂರ್ತಿ ಬುದ್ಧನೂ ಮಾಂಸಾಹಾರಿ. ಆರು‌ ಮಿಲಿಯ ಯಹೂದಿಗಳನ್ನು ಗ್ಯಾಸ್ ಚೇಂಬರಿನಲ್ಲಿ‌ ಕೊಂದ ಹಿಟ್ಲರ್ ಸಸ್ಯಾಹಾರಿ. ಶಾಂತಿಧೂತ ಗಾಂಧಿಯನ್ನು ಕೊಂದ ಗೋಡ್ಸೆ ಸಸ್ಯಾಹಾರಿ” ಎಂದು ಉದಯ್‌ ಗೋಂಕರ್‌ ಬರೆದಿದ್ದಾರೆ.

“ಮಾಂಸಾಹಾರ ಮಾಡುವವರ ವೋಟ್ ಬಿಜೆಪಿಗೆ ಬೇಡ ಅಂತ ಫರ್ಮಾನು ಹೊರಡಿಸಿ. ದಿನ ನಾನ್ಸೆನ್ಸ್ ಹೇಳಿಕೆ ಕೊಡೋದು ತಪ್ಪತ್ತದೆ” ಎಂದು ಶರತ್‌ಚಂದ್ರ ಒತ್ತಾಯಿಸಿದ್ದಾರೆ.

“ಯುಗಾದಿ ಹಬ್ಬದ ಟೈಮ್‌ನಲ್ಲಿ ಹಲಾಲ್ ಬೇಡ, ಜಟಕ ಮಾಂಸ ತಿನ್ನಿ ಅಂತ ಇವರುಗಳೇ ಹಿಂದೂವಿ ಜಟಕ ಮಾಂಸಾಹಾರದ ಪ್ರಚಾರ ಮಾಡಿದರು. ಆಯುಧ ಪೂಜೆ ಟೈಮ್‌ಗೆ ಕರೆಕ್ಟಆಗಿ ಮಾಂಸ ತಿಂದರೆ ನೀವು ಹಿಂಸಾ ವಿನೋದಿಗಳು ಅಂತಿದಾರೆ” ಎಂದು ನಾಗೇಗೌಡ ಕೀಲಾರ ಅವರು ಕುಟುಕಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ತಿನ್ನುವ ಆಹಾರದ ಆಧಾರದ ಮೇಲೂ ಸಮಾಜವನ್ನು ವಿಭಜಿಸುವ ಇವರ ವಿಚಾರಗಳ ಬಗ್ಗೆ ಜನತೆ ಎಚ್ಚತ್ತು ಕೊಳ್ಳದಿದ್ದಲ್ಲಿ ಮುಂದೆ ಇನ್ನಷ್ಟು ವಿಪತ್ತು ಕಾದಿದೆ, ಇವರ ಪುರೋಹಿತಶಾಹಿ ಧೋರಣೆಗೆ ಧಿಕ್ಕಾರ, ಮಾಂಸ ತಿಂದವರಿಂದ ಅಲ್ಲಾ ಸ್ವಾಮಿ ದೇಶ ಹಾಳಾಗಿರುವುದು, ತುಪ್ಪ ತಿಂದವರಿಂದ, ಇವರು ತಮ್ಮ ಪರಂಪರೆಯನ್ನು ಒಮ್ಮೆ ತಿರುವಿ ಹಾಕಲಿ ಯಜ್ಞ, ಯಾಗದ ಸಂಧರ್ಭದಲ್ಲಿ ಋತ್ವಿಕರುಗಳಿಗೆ ಎಳೆ ಹಸುವಿನ ಮಾಂಸ ಬಡಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದದ್ದೇ, ಈಗ ಗೊಡ್ಡು ಉಪದೇಶ ನೀಡುವ ಬದಲು ಎಲ್ಲರಿಗೂ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಮುಂತಾದ ಮೂಲಭೂತ ಸೌಕರ್ಯ ಒದಗಿಸುವಂತೆ ತಮ್ಮ ಸರ್ಕಾರಕ್ಕೆ ನಿರ್ದೇಶಿಸಿದರೆ ಅನುಕೂಲ ಆಗುತ್ತೆ, ಜನರು ಇವರ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು.

  2. What nonsence! God has created everything for human being. It is his or hercwish to consume meat, fish or vegetables. It is none of anyone’s business to set rules on food consumption. If anyone wants eat meat let him/her consume meat, who the hell we are to tell others? First of all because of the price hike and GST people are slogging to get food and this guy is delivering speech about eating non veg. First let him tell the supremos to provide shelter and food to the people who go to sleep without food then deliver speeches on consuming non veg.

LEAVE A REPLY

Please enter your comment!
Please enter your name here

- Advertisment -

Must Read