Homeಮುಖಪುಟಪ್ರಧಾನಿ ಮೋದಿಯಿಂದ 5ಜಿ ಸೇವೆಗಳ ಅಧಿಕೃತ ಆರಂಭ

ಪ್ರಧಾನಿ ಮೋದಿಯಿಂದ 5ಜಿ ಸೇವೆಗಳ ಅಧಿಕೃತ ಆರಂಭ

- Advertisement -
- Advertisement -

ದೆಹಲಿಯಲ್ಲಿ ನಡೆಯುವ ಆರನೇ ಆವೃತ್ತಿಯ ‘ಇಂಡಿಯಾ ಮೊಬೈಲ್ ಕಾಂಗ್ರೆಸ್‌’ನಲ್ಲಿ 5ಜಿ ಟೆಲಿಫೋನಿ ಸೇವೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಧಿಕೃತವಾಗಿ ಪ್ರಾರಂಭಿಸಲಿದ್ದಾರೆ. ಪ್ರಸ್ತುತ ಆಯ್ದ ನಗರಗಳಲ್ಲಿ ಇದು ಪ್ರಾರಂಭವಾಗಲಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ಇದು ಇಡೀ ದೇಶವನ್ನು ಹಂತಹಂತವಾಗಿ ಆವರಿಸಲಿದೆ.

ದೆಹಲಿಯ ಪ್ರಗತಿ ಮೈದಾನದಲ್ಲಿ ಅಕ್ಟೋಬರ್ 1 ರಿಂದ 4 ವರೆಗೆ ‘ಇಂಡಿಯಾ ಮೊಬೈಲ್ ಕಾಂಗ್ರೆಸ್-2022’ ರ 6 ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ಈ ಬಹು ನಿರೀಕ್ಷಿತ ಸೇವೆಯನ್ನು ಪ್ರಾರಂಭಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

5ಜಿ ಪ್ರಾರಂಭದೊಂದಿಗೆ ಪೂರ್ಣವಾದ ಉತ್ತಮ ಗುಣಮಟ್ಟದ ವೀಡಿಯೊ ಅಥವಾ ಚಲನಚಿತ್ರವನ್ನು ಮೊಬೈಲ್‌ನಲ್ಲಿ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಕೂಡಾ ತುಂಬಾ ವೇಗಗಾಗಿ ಇಂಟರ್‌ನೆಟ್‌ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: 2ಜಿ ಸ್ಪೆಕ್ಟ್ರಮ್ ಹಗರಣ ನಡೆದೇ ಇಲ್ಲ ಎಂಬುದನ್ನು ನಿರೂಪಿಸಿದ 5ಜಿ ಹರಾಜು ಪ್ರಕ್ರಿಯೆ!

ಇತ್ತೀಚೆಗೆ ನಡೆದ 5ಜಿ ಟೆಲಿಕಾಂ ಸ್ಪೆಕ್ಟ್ರಮ್‌ನ ಭಾರತದ ಅತಿದೊಡ್ಡ ಹರಾಜು ದಾಖಲೆಯ 1.5 ಲಕ್ಷ ಕೋಟಿ ಬಿಡ್‌ಗಳನ್ನು ಸ್ವೀಕರಿಸಿದೆ. ಮುಖೇಶ್ ಅಂಬಾನಿಯ ಜಿಯೋ 88,078 ಕೋಟಿ ಬಿಡ್‌ನೊಂದಿಗೆ 5ಜಿ ಯನ್ನು ಪಡೆದುಕೊಂಡಿದ್ದಾರೆ.

ಕಡಿಮೆ ಅವಧಿಯಲ್ಲಿ ದೇಶದಾದ್ಯಂತ 5ಜಿ ಟೆಲಿಕಾಂ ಸೇವೆಗಳ 80% ಕವರೇಜ್ ಮಾಡುವ ಗುರಿಯನ್ನು ಸರ್ಕಾರ ನೀಡಿದೆ ಎಂದು ಒಕ್ಕೂಟ ಸರ್ಕಾರದ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಈ ಹಿಂದೆ ತಿಳಿಸಿದ್ದರು.

5ಜಿ ತಂತ್ರಜ್ಞಾನವು ಭಾರತಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು 2023 ಮತ್ತು 2040 ರ ನಡುವೆ ಭಾರತೀಯ ಆರ್ಥಿಕತೆಗೆ 36.4 ಟ್ರಿಲಿಯನ್ (455 ಶತಕೋಟಿ ಡಾಲರ್‌‌) ನಷ್ಟು ಪ್ರಯೋಜನವನ್ನು ನೀಡುವ ಸಾಧ್ಯತೆಯಿದೆ ಎಂದು ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳನ್ನು ಪ್ರತಿನಿಧಿಸುವ ಜಾಗತಿಕ ಉದ್ಯಮ ಸಂಸ್ಥೆಯ ಇತ್ತೀಚಿನ ವರದಿಯು ಅಂದಾಜಿಸಿದೆ.

ಇದನ್ನೂ ಓದಿ: 2ಜಿ ಸ್ಪೆಕ್ಟ್ರಂ ಪ್ರಕರಣದ ಆರೋಪ: ಸಂಜಯ್ ನಿರುಪಮ್ ಕ್ಷಮೆಯಾಚಿಸಿದ ಮಾಜಿ CAG ವಿನೋದ್ ರಾಯ್

2030 ರ ವೇಳೆಗೆ ಭಾರತದಲ್ಲಿನ ಒಟ್ಟು ಸಂಪರ್ಕಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚು 5ಜಿ ಇರುತ್ತದೆ ಎಂದು ಅಂದಾಜಿಸಲಾಗಿದ್ದು, ಈ ವೇಳೆಗೆ 2G ಮತ್ತು 3G ಯ ಪಾಲು ಶೇಕಡಾ 10 ಕ್ಕಿಂತ ಕಡಿಮೆಯಾಗಲಿದೆ ಎಂದು GSMA (Global System for Mobile Communications) ವರದಿಯು ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...