Homeಮುಖಪುಟಅವಳಿಗೆಷ್ಟು ಧೈರ್ಯ? ಇಂದಿರಾ ಜೈಸಿಂಗ್‌ ಮೇಲೆ ಹರಿಹಾಯ್ದ ದೆಹಲಿ ಅತ್ಯಾಚಾರ ಸಂತ್ರಸ್ತೆಯ ತಾಯಿ

ಅವಳಿಗೆಷ್ಟು ಧೈರ್ಯ? ಇಂದಿರಾ ಜೈಸಿಂಗ್‌ ಮೇಲೆ ಹರಿಹಾಯ್ದ ದೆಹಲಿ ಅತ್ಯಾಚಾರ ಸಂತ್ರಸ್ತೆಯ ತಾಯಿ

- Advertisement -
- Advertisement -

ಡಿಸೆಂಬರ್ 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ತಾಯಿಯು ಅವರ ಮಗಳ ವಿರುದ್ಧ ಕ್ರೂರ ಅಪರಾಧ ಎಸಗಿದ್ದಕ್ಕಾಗಿ ಮರಣದಂಡನೆಯಲ್ಲಿರುವ ನಾಲ್ವರನ್ನು ಕ್ಷಮಿಸುವಂತೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಖಾರವಾಗಿ ಸಂತ್ರಸ್ತೆಯ ತಾಯಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

“ನನಗೆ ಅಂತಹ ಸಲಹೆಯನ್ನು ನೀಡಲು ಇಂದಿರಾ ಜೈಸಿಂಗ್ ಯಾರು? ಅಪರಾಧಿಗಳನ್ನು ಗಲ್ಲಿಗೇರಿಸಬೇಕೆಂದು ಇಡೀ ದೇಶ ಬಯಸಿದೆ. ಅವಳಂತಹ ಜನರ ಕಾರಣದಿಂದಾಗಿ, ಅತ್ಯಾಚಾರಕ್ಕೊಳಗಾದವರಿಗೆ ನ್ಯಾಯ ದೊರೆಯುವುದಿಲ್ಲ” ಅವರು ಕಿಡಿಕಾರಿದ್ದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

“ಇಂದಿರಾ ಜೈಸಿಂಗ್ ಅವರು ಇದನ್ನು ಸೂಚಿಸಲು ಹೇಗೆ ಧೈರ್ಯ ಮಾಡಿದರು ಎಂದು ನಾನು ನಂಬಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ವರ್ಷಗಳಲ್ಲಿ ನಾನು ಅವಳನ್ನು ಹಲವು ಬಾರಿ ಭೇಟಿಯಾಗಿದ್ದೆ, ಒಮ್ಮೆಯೂ ಅವಳು ನನ್ನ ಯೋಗಕ್ಷೇಮವನ್ನು ಕೇಳಲಿಲ್ಲ ಮತ್ತು ಇಂದು ಅವಳು ಅಪರಾಧಿಗಳಿಗಾಗಿ ಮಾತನಾಡುತ್ತಿದ್ದಾಳೆ. ಅಂತಹ ಜನರು ಅತ್ಯಾಚಾರಿಗಳನ್ನು ಬೆಂಬಲಿಸುವ ಮೂಲಕ ಜೀವನೋಪಾಯವನ್ನು ಗಳಿಸುತ್ತಾರೆ, ಆದ್ದರಿಂದ ಅತ್ಯಾಚಾರ ಘಟನೆಗಳು ನಿಲ್ಲುವುದಿಲ್ಲ” ಎಂದು ಅವರು ಹೇಳಿದರು.

ಜನವರಿ 22 ರಿಂದ ಫೆಬ್ರವರಿ 1 ರವರೆಗೆ ನಾಲ್ಕು ಅಪರಾಧಿಗಳನ್ನು ಮರಣದಂಡನೆ ಮಾಡುವ ದಿನಾಂಕವನ್ನು ದೆಹಲಿಯ ನ್ಯಾಯಾಲಯವು ಮುಂದೂಡಿದ ನಂತರ ಸಂತ್ರಸ್ತೆಯ ತಾಯಿಯು ಅದನ್ನು “ದ್ರೋಹ” ಎಂದು ಕರೆದಿದ್ದಾರೆ.

ಆಶಾ ದೇವಿಯ ನೋವು ನನಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ಆದರೂ ನಳಿನಿಯನ್ನು ಕ್ಷಮಿಸಿದ ಸೋನಿಯಾ ಗಾಂಧಿಯ ಉದಾಹರಣೆಯನ್ನು ಅನುಸರಿಸಲು, ಮರಣದಂಡನೆ ಬೇಡವೇಂದು ಹೇಳಲು ನಾನು ಅವಳನ್ನು ಒತ್ತಾಯಿಸುತ್ತೇನೆ. ನಾವು ನಿಮ್ಮೊಂದಿಗಿದ್ದೇವೆ ಆದರೆ ಮರಣದಂಡನೆಗೆ ವಿರುದ್ಧವಾಗಿದ್ದೇವೆ ”ಎಂದು ಜೈಸಿಂಗ್ ಟ್ವೀಟ್ ಮಾಡಿದ್ದಾರೆ.

ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ (ಎಲ್‌ಟಿಟಿಇ) 1991 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ಅವರ ಪಾತ್ರಕ್ಕಾಗಿ ಬಂಧಿಸಲ್ಪಟ್ಟ ಮತ್ತು ಶಿಕ್ಷೆಗೊಳಗಾದ ನಳಿನಿಯನ್ನು ವಕೀಲರು ಉಲ್ಲೇಖಿಸಿದ್ದರು. ಆಕೆಯ ಮರಣದಂಡನೆಯನ್ನು ಸೋನಿಯಾ ಗಾಂಧಿ ಕ್ಷಮಿಸಿದ್ದರು.

ನಾವು ಒಂದು ದಿನಾಂಕದ ನಂತರ ಮತ್ತೊಂದು ದಿನಾಂಕವನ್ನು ಪಡೆಯುತ್ತಿದ್ದೇವೆ… ಇನ್ನು ಮುಂದೆ ಏನು ಅನುಭವಿಸಬೇಕೆಂದು ನನಗೆ ತಿಳಿದಿಲ್ಲ. ನಮಗೆ ದಿನಾಂಕಗಳನ್ನು ಮಾತ್ರ ನೀಡಲಾಗುತ್ತಿದೆ ಮತ್ತು ಒಂದು ನ್ಯಾಯಾಲಯದಿಂದ ಇನ್ನೊಂದಕ್ಕೆ ತಳ್ಳಲಾಗುತ್ತಿದೆ ಎಂದು ಸಂತ್ರಸ್ತೆಯ ತಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...